ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಿ ಸೌಂದರ್ಯಕ್ಕೆ ಅಡ್ಡಿ : ಜಲ ವಿದ್ಯುತ್‌ ಯೋಜನೆಗೆ ಸ್ಥಳೀಯರ ಅಡ್ಡಿ

By Staff
|
Google Oneindia Kannada News

ಮಡಿಕೇರಿ: ಇಲ್ಲಿನ ಅಬ್ಬಿ ಜಲ ವಿದ್ಯುತ್‌ ಯೋಜನೆ ವಿರೋಧೀ ಆಂದೋಳನವನ್ನು ಸ್ಥಳೀಯ ಪರಿಸರವಾದಿಗಳು ಕೈಗೆತ್ತಿಕೊಂಡಿದ್ದಾರೆ.

ರಾಜ್ಯದ ಪ್ರಮುಖ ಆಕರ್ಷಕ ಪ್ರವಾಸೀ ತಾಣಗಳಲ್ಲಿ ಒಂದಾದ ಅಬ್ಬಿ ಫಾಲ್ಸ್‌ನಲ್ಲಿ ಕಿರು ಜಲವಿದ್ಯುತ್‌ ಯೋಜನೆ ಮೂಲಕ ವಿದ್ಯುತ್‌ ಉತ್ಪಾದಿಸಲು ಖಾಸಗಿ ಸಂಸ್ಥೆಗೆ ಅನುಮತಿ ನೀಡಿರುವ ಸರಕಾರದ ಕ್ರಮವನ್ನು ಸ್ಥಳೀಯರು ತೀವ್ರವಾಗಿ ವಿರೋಧಿಸಿದ್ದಾರೆ.

ಅಬ್ಬಿ ಜಲಪಾತದ ಮೇಲ್ಭಾಗದಲ್ಲಿ ಕಟ್ಟೆಯಾಂದನ್ನು ಕಟ್ಟಿ ನೀರು ಶೇಖರಣೆ ಮಾಡಿ ಆ ಮೂಲಕ ದಿನಕ್ಕೆ ಸರಾಸರಿ 75 ಸಾವಿರ ಯೂನಿಟ್‌ನಷ್ಟು ವಿದ್ಯುತ್‌ ಉತ್ಪಾದಿಸಲು ರಾಜ್ಯ ಸರಕಾರ ಮಾರ್ಚ್‌ ಮೊದಲ ವಾರದಲ್ಲಿಯೇ ಕೆಪಿಡಿಎಂ ಪವರ್‌ ಸಪ್ಲೈಸ್‌ ಸಂಸ್ಥೆಗೆ ಅನುಮತಿ ನೀಡಿತ್ತು. ಈ ಸಂಸ್ಥೆಯ ಮೂಲಕ ಉತ್ಪಾದನೆಯಾಗುವ ವಿದ್ಯುತ್‌ನ್ನು ಪ್ರತಿ ಯೂನಿಟ್‌ಗೆ 3.15 ರೂಪಾಯಿ ನೀಡಿ ಕೊಳ್ಳಲು ಸರಕಾರ ನಿರ್ಧರಿಸಿತ್ತು.

ಅಬ್ಬಿ ಜಲವಿದ್ಯುತ್‌ ಯೋಜನೆಯನ್ನು ವಿರೋಧಿಸುತ್ತಿರುವುದಕ್ಕೆ ಗ್ರಾಮಸ್ಥರು ನೀಡುವ ಕಾರಣಗಳು:

  • ಈ ಕಿರು ಜಲವಿದ್ಯುತ್‌ ಯೋಜನೆಯಿಂದ ಸುತ್ತಮುತ್ತಲ ಜಮೀನಿಗೆ ಕೊಳಕು ನೀರು ಹರಿದು ಬೆಳೆ ನಾಶವಾಗುತ್ತದೆ.
  • ಅಬ್ಬಿ ಜಲಧಾರೆಯ ಸೌಂದರ್ಯಕ್ಕೂ ಹಾನಿಯಾಗುತ್ತದೆ, ಪ್ರವಾಸಿಗರಿಗೆ ಅನನುಕೂಲವಾಗುತ್ತದೆ.
  • ಹಾರಂಗಿಯಲ್ಲಿ ಇಡಿಸಿಎಲ್‌ ಆರಂಭಿಸಿರುವ 9 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಜಲವಿದ್ಯುತ್‌ ಯೋಜನೆಯೇ ವಿಫಲವಾಗಿರುವಾಗ ಈ ಹೊಸ ಯೋಜನೆ ಯಶಸ್ಸಾಗುವುದು ಅಸಾಧ್ಯ.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X