• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನರಿಂದ ಜನಪ್ರತಿನಿಧಿಗಳ ಭವನ ದೂರ!ಅಧಿಕಾರಶಾಹಿಗೆ ದಂಡಂ ದಶಗುಣಂ!

By Staff
|

ಬೆಂಗಳೂರು : ಅಶಿಸ್ತಿನಿಂದ ವರ್ತಿಸುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ವಿಧಾನಸಭೆಯಲ್ಲಿ ಪ್ರಕಟಿಸಿದರೆ, ಶಾಸಕರ ಭವನಕ್ಕೆ ಸರ್ಪಗಾವಲು ಹಾಕುವ ಕುರಿತು ಸಭಾಪತಿ ಬಿ.ಎಲ್‌.ಶಂಕರ್‌ ವಿಧಾನ ಪರಿಷತ್‌ನಲ್ಲಿ ಸರ್ಕಾರಕ್ಕೆ ಸೂಚನೆ ನೀಡಿದ್ದು - ಮಂಗಳವಾರ ವಿಧಾನ ಮಂಡಲದ ಹೈಲೈಟ್ಸ್‌ !

ಒರಿಸ್ಸಾ ವಿಧಾನಸಭೆಯ ಮೇಲೆ ಇತ್ತೀಚೆಗೆ ನಡೆದ ಭಯೋತ್ಪಾದಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಸಕರ ಭವನಕ್ಕೆ ಬಿಗಿ ಬಂದೋಬಸ್ತ್‌ ಒದಗಿಸಲು ವಿಧಾನ ಪರಿಷತ್‌ ಸಭಾಪತಿ ಬಿ.ಎಲ್‌.ಶಂಕರ್‌ ಸರ್ಕಾರಕ್ಕೆ ಸೂಚನೆ ನೀಡಿದರು.

ಶಾಸಕರ ಭವನಕ್ಕೆ ಸೂಕ್ತ ರಕ್ಷಣೆ ಕಲ್ಪಿಸಲು ಅಗತ್ಯವಾದ ಪೊಲೀಸ್‌ ಸಿಬ್ಬಂದಿಯನ್ನು ಒದಗಿಸುವಂತೆ ಬಿ.ಎಲ್‌.ಶಂಕರ್‌ ಸರ್ಕಾರಕ್ಕೆ ಸೂಚನೆ ನೀಡಿದರು. ಶಾಸಕ ವಿ.ಆರ್‌.ಸುದರ್ಶನ್‌ ಅವರು ಶೂನ್ಯ ವೇಳೆಯಲ್ಲಿ ಶಾಸಕರ ಭವನದ ರಕ್ಷಣೆ ಹಾಗೂ ಶಾಸಕರ ರಕ್ಷಣೆ ಕುರಿತು ವಿಷಯ ಪ್ರಸ್ತಾಪಿಸಿದಾಗ, ಶಂಕರ್‌ ಈ ಸೂಚನೆ ನೀಡಿದರು.

ಶಾಸಕರ ಭವನದಲ್ಲಿ ತಂಗುವವರು ಹಾಗೂ ಭವನಕ್ಕೆ ಬರುವವರು ಒಂದೇ ದಾರಿಯಿಂದ ಪ್ರವೇಶ ಪಡೆಯಬೇಕು. ಶಾಸಕರು ತಮ್ಮ ವಾಹನಗಳಿಗೆ ಗುರುತಿನ ಚೀಟಿ ಅಂಟಿಸಿಕೊಳ್ಳಬೇಕು. ಶಾಸಕರ ಭವನದ ಕೊಠಡಿಗಳಲ್ಲಿ ಗೊತ್ತು ಪಡಿಸಿದಷ್ಟು ಜನರು ಮಾತ್ರ ತಂಗಬೇಕು. ಈ ಅಂಶಗಳನ್ನು ಜಾರಿಗೊಳಿಸಲು ಶಾಸಕರು ಸಹಕರಿಸಬೇಕು ಎಂದು ಶಂಕರ್‌ ಮನವಿ ಮಾಡಿದರು.

ಸರ್ಕಾರಿ ಅಧಿಕಾರಿಗಳ ಅಶಿಸ್ತು ಸಹಿಸೆ- ಕೃಷ್ಣ
ಜನತೆಯ ಹಾಗೂ ಜನ ಪ್ರತಿನಿಧಿಗಳ ಆಶೋತ್ತರಗಳಿಗೆ ಸ್ಪಂದಿಸದ ಸರ್ಕಾರಿ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮಂಗಳವಾರ ಪ್ರಕಟಿಸಿದರು.

ಸರ್ಕಾರಿ ಅಧಿಕಾರಿಗಳ ನಡವಳಿಕೆಯ ಬಗ್ಗೆ ವಿಪಕ್ಷಗಳ ಪಿಜಿಆರ್‌ ಸಿಂಧ್ಯಾ, ಸುಬ್ಬಾರೆಡ್ಡಿ ಹಾಗೂ ಶಂಕರಲಿಂಗೇಗೌಡ ಅವರು ವಿಧಾನಸಭೆಯಲ್ಲಿ ಎತ್ತಿದ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಕೃಷ್ಣ - ಅಶಿಸ್ತಿನಿಂದ ನಡೆದುಕೊಳ್ಳುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಶಾಸಕರು ಕರೆದ ಸಭೆಗಳಿಗೆ ನೆಪ ಹೇಳದೆ ಹಾಜರಾಗಬೇಕು ಎಂದು ತಾಕೀತು ಮಾಡಿದ ಮುಖ್ಯಮಂತ್ರಿಗಳು, ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ ಅಧಿಕಾರಿಗಳು ಸಿಂಧ್ಯಾ ಅವರೊಂದಿಗೆ ವರ್ತಿಸಿದ ಧೋರಣೆಯ ಕುರಿತು ವಿಚಾರಣೆ ನಡೆಸುವುದಾಗಿ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more