• search

‘ಡೆಲ್‌’ಗೆ ಇನ್ನಷ್ಟು ಭಾರತೀಯ ಸಾಫ್ಟ್‌ವೇರ್‌ ಎಂಜಿನಿರುಗಳು ಬೇಕಾಗಿದ್ದಾರೆ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ಹಿನ್ನಡೆಯ ನಡುವೆಯೂ ಭಾರತದ ಸಾಫ್ಟ್‌ವೇರ್‌ ಎಂಜಿನಿಯರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಾವು ನೇಮಿಸಿಕೊಳ್ಳುತ್ತಿದ್ದೇವೆ ಎಂದು ಯುಎಸ್‌ ಮೂಲದ ಕಂಪ್ಯೂಟರ್‌ ಕಂಪನಿ ಡೆಲ್‌ನ ಮುಖ್ಯ ವ್ಯವಸ್ಥಾಪಕ ಮೈಕೆಲ್‌ ಡೆಲ್‌ ಹೇಳಿದ್ದಾರೆ.

    ನಗರಕ್ಕೆ ಭೇಟಿ ಕೊಟ್ಟಿರುವ ಡೆಲ್‌ ಮಂಗಳವಾರ ಸುದ್ದಿಗಾರರೊಡನೆ ಮಾತಾಡುತ್ತಿದ್ದರು. 1984 ರಲ್ಲಿ ಪಿಸಿ ತಯಾರಿಸುವ ಕಂಪನಿ ಹುಟ್ಟಿಹಾಕಿದ ಡೆಲ್‌, ತಮ್ಮ ಕಂಪನಿಯ ನಾಗಾಲೋಟದ ಸಾಧನೆಯನ್ನು ಅದು ನೇಮಿಸಿಕೊಳ್ಳುತ್ತಿರುವ ತಜ್ಞರ ಸಂಖ್ಯೆಯಿಂದಲೇ ಸಾಬೀತು ಪಡಿಸಿದರು.

    ನಗರದಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಡೆಲ್‌ ಕಂಪನಿ ಕಾಲ್‌ ಸೆಂಟರನ್ನು ತೆರೆಯಿತು. ಆಗ 180 ಇದ್ದ ಅದರ ಸಿಬ್ಬಂದಿ ಸಂಖ್ಯೆ ಇವತ್ತು 800ಕ್ಕೇರಿದೆ. ಹಿನ್ನಡೆಯ ನಡುವೆಯೂ ನಮ್ಮ ಕಂಪನಿ ಭಾರತೀಯ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಿಗೆ ಒಳ್ಳೆಯ ಅವಕಾಶ ಕೊಡುತ್ತಿದೆ. ಭಾರತದ ಹಾಗೂ ಸಾಗರದಾಚಿನ ಯೋಜನೆಗಳಲ್ಲಿ ಭಾರತೀಯ ಎಂಜಿನಿಯರ್‌ಗಳ ಸಾಧನೆ ಶ್ಲಾಘನೀಯ. ಮಾಹಿತಿ ತಂತ್ರಜ್ಞಾನದಲ್ಲಿ ಏಷ್ಯಾ ಕಂಡದ ಭಾರತ, ಜಪಾನ್‌ ಹಾಗೂ ಚೀನಾ ಸಾಕಷ್ಟು ವೇಗದ ಪ್ರಗತಿ ಸಾಧಿಸುತ್ತಿವೆ ಎಂದರು.

    ಡೆಲ್‌ ಕಾರ್ಯವೈಖರಿಯಲ್ಲಿ ಭಾರತಕ್ಕೆ ಪ್ರಮುಖ ಪಾತ್ರ ವಹಿಸುವ ಬೌದ್ಧಿಕ ಸಂಪತ್ತಿದೆ. ಇನ್ನಷ್ಟು ಹೆಚ್ಚು ಭಾರತೀಯ ಜಾಣರನ್ನು ಕಂಪನಿ ಸ್ವಾಗತಿಸುತ್ತದೆ. ಆದರೆ ಭಾರತದಲ್ಲಿ ಉತ್ಪಾದನಾ ಕೇಂದ್ರವನ್ನು ತೆರೆಯುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ. ಸಿಲಿಕಾನ್‌, ಲಾಜಿಸ್ಟಿಕ್‌ಗಳು ಹಾಗೂ ಸಪ್ಲೈ ಚೈನ್‌ ಎಲ್ಲಿ ಹೆಚ್ಚಾಗಿರುತ್ತದೋ ಅಲ್ಲಿ ಮಾತ್ರ ಉತ್ಪಾದನಾ ಕೇಂದ್ರ ತೆರೆಯುವುದು ಸಾಧ್ಯ. ಭಾರತದಲ್ಲಿ ಇವು ಇಲ್ಲ ಎಂದು ಪ್ರಶ್ನೆಯಾಂದಕ್ಕೆ ಡೆಲ್‌ ಉತ್ತರಿಸಿದರು.

    (ಇನ್ಫೋ ವಾರ್ತೆ)

    ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more