ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಥಣಿಯಲ್ಲಿ ಆಸ್ಪತ್ರೆನಿರ್ಮಾಣಕ್ಕೆ ಅಮೆರಿಕನ್‌ ಭಾರತೀಯ ವೈದ್ಯರ ನೆರವು

By Staff
|
Google Oneindia Kannada News

ಬೀದರ್‌ : ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಉತ್ತಮ ಸೌಲಭ್ಯಗಳಿರುವ ಆಸ್ಪತ್ರೆಯಾಂದನ್ನು ನಿರ್ಮಿಸಲು ಅನಿವಾಸಿ ಭಾರತೀಯ ವೈದ್ಯರ ವತಿಯಿಂದ 8 ಕೋಟಿ ರೂಪಾಯಿಗಳ ನೆರವು ನೀಡುವುದಾಗಿ ಅಮೆರಿಕಾದಲ್ಲಿರುವ ಅನಿವಾಸೀ ಭಾರತೀಯ ವೈದ್ಯ ಡಾ. ಸಂಪತ್‌ ಶಿವಾನಗಿ ತಿಳಿಸಿದ್ದಾರೆ.

ಅವರು ನಗರದಲ್ಲಿ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಭಾರತ-ಅಮೆರಿಕಾ ಸಂಬಂಧದ ಬಗ್ಗೆ ಶುಕ್ರವಾರ ಮಾತನಾಡುತ್ತಿದ್ದರು. ದೇಶದ 16 ರಾಜ್ಯಗಳಲ್ಲಿ ಎಪಿಐಒ (Association of Physicians of Indian origin in the United States) ವತಿಯಿಂದ ಆಸ್ಪತ್ರೆಗಳನ್ನು ನಡೆಸುತ್ತಿದ್ದು ಬಡವರಿಗೆ ಉಚಿತ ಔಷಧಿ ನೀಡಲಾಗುತ್ತಿದೆ. ಇಂತಹುದೇ ಒಂದು ಆಸ್ಪತ್ರೆ ಹೊಸಪೇಟೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಅಮೆರಿಕಾದ ಅಧ್ಯಕ್ಷೀಯ ಸಲಹಾ ಸಮಿತಿಯಲ್ಲಿ ಡಾ. ಸಂಪತ್‌ ಶಿವಾನಗಿ ಸಲಹಾಗಾರರಾಗಿದ್ದಾರೆ. ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳಲ್ಲೊಂದಾದ ಅಥಣಿಯಲ್ಲಿ ಆಸ್ಪತ್ರೆಯನ್ನು ನಿರ್ಮಿಸಲು ಅನಿವಾಸಿ ವೈದ್ಯರಿಂದ ಹಣ ಸಂಗ್ರಹಿಸಲಾಗುವುದು ಎಂದು ಶಿವಾನಗಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X