ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌ಪಿಜಿ ದರದಲ್ಲಿ 20 ರುಪಾಯಿ ಕಡಿತ : ಶನಿವಾರ ಮಧ್ಯ ರಾತ್ರಿಯಿಂದಲೇ ಜಾರಿ

By Staff
|
Google Oneindia Kannada News

ನವದೆಹಲಿ : ಪ್ರತಿ ಸಿಲಿಂಡರ್‌ ಎಲ್‌ಪಿಜಿ ದರ 20 ರುಪಾಯಿ ಕಡಿಮೆಯಾಗಿದೆ.

ಈ ಬಾರಿಯ ಬಜೆಟ್‌ನಲ್ಲಿ 40 ರುಪಾಯಿ ಏರಿಸಲಾಗಿದ್ದ ಎಲ್‌ಪಿಜಿ ಬೆಲೆ ಇಳಿಸುವಂತೆ ಬಂದ ಭಾರೀ ಒತ್ತಡಕ್ಕೆ ಸರ್ಕಾರ ಮಣಿದಿದೆ. ಶನಿವಾರ ಮಧ್ಯ ರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಪೆಟ್ರೋಲಿಯಂ ಸಚಿವ ರಾಮ್‌ ನಾಯಕ್‌ ಶನಿವಾರ ಲೋಕಸಭೆಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.

ಎಲ್‌ಪಿಜಿ ದರವನ್ನು ಏಕಾಏಕಿ ಏರಿಸಿದ್ದರಿಂದ ಮಧ್ಯಮ ವರ್ಗದ ಜನರಿಗೆ ಭಾರೀ ಹೊರೆಯಾಯಿತು ಎಂಬ ಸೊಲ್ಲು ಎಲ್ಲೆಡೆ ಎದ್ದಿತ್ತು. ಬಡವರ ಪಾಲಿಗೆ ಈ ಬಾರಿಯ ಬಜೆಟ್ಟು ದೊಡ್ಡ ಪೆಟ್ಟು ಎಂಬ ಜನಾಭಿಪ್ರಾಯ ಇದ್ದುದನ್ನೂ ಇಲ್ಲಿ ಸ್ಮರಿಸಬಹುದು. ಎಲ್‌ಪಿಜಿ ದರ ಇಳಿಸಿದ್ದರೂ, ಸೀಮೆಎಣ್ಣೆ ಬೆಲೆಯನ್ನು ಸರ್ಕಾರ ಇಳಿಸಿಲ್ಲ .

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X