ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್‌ ನಾರಾಯಣಮೂರ್ತಿ ಅವರಿಂದ ಶೇ. 2.58 ಷೇರು ಮಾರಾಟ

By Staff
|
Google Oneindia Kannada News

ಮುಂಬಯಿ: ಇನ್ಫೋಸಿಸ್‌ ಮುಖ್ಯಸ್ಥ ಎನ್‌.ಆರ್‌. ನಾರಾಯಣ ಮೂರ್ತಿ ತಮ್ಮ ಬಳಿಯಿರುವ ಷೇರುಗಳಲ್ಲಿ ಶೇ 2.58ರಷ್ಟು ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ನ್ಯೂಯಾರ್ಕ್‌ ಸ್ಟಾಕ್‌ ಎಕ್ಸ್‌ಚೇಂಜ್‌ನ ಸೂಚನಾ ಪತ್ರ ತಿಳಿಸಿದೆ.

ನಾರಾಯಣ ಮೂರ್ತಿ 15 ಸಾವಿರ ಷೇರುಗಳನ್ನು ಮಾರಿರುವುದಾಗಿ ತಿಳಿದುಬಂದಿದೆ. ಮಾರ್ಚ್‌ 8ರಂದು ಈ ಷೇರುಗಳನ್ನು ಮಾರಾಟ ಮಾಡಲಾಗಿದ್ದರೂ, ಈ ಷೇರುಗಳ ನಿರ್ದಿಷ್ಟ ಮೌಲ್ಯ ತಿಳಿದು ಬಂದಿಲ್ಲ. ಅಂದಾಜಿನ ಮೇರೆಗೆ 4,225.75 ರೂಪಾಯಿಗಳಿಗೆ ಷೇರು ಮಾರಾಟವಾಗಿದ್ದು , ಒಟ್ಟು ವ್ಯವಹಾರ 6. 33 ಕೋಟಿ ರೂಪಾಯಿಗಳದ್ದಾಗಿರಬಹುದು ಎಂದು ಎನ್‌ಎಸ್‌ಇ ಅಂದಾಜು ಮಾಡಿದೆ. ಈ ಮಾರಾಟದಿಂದಾಗಿ ಇನ್ಫೋಸಿಸ್‌ನಲ್ಲಿ ನಾರಾಯಣ ಮೂರ್ತಿ ಅವರ ಷೇರುಗಳ ಸಂಖ್ಯೆ 5,79,400 ರಿಂದ 5,64,400ಕ್ಕೆ ಇಳಿದಿದೆ.

ಇನ್ಫೋಸಿಸ್‌ ನಿರ್ದೇಶಕ ಶ್ರೀನಾಥ್‌ ದತ್ನಿ ಕೂಡ ಕಂಪೆನಿಯ 500 ಷೇರುಗಳನ್ನು ಮಾರ್ಚ್‌ 12ರಂದು ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ. ಈಗ ಶ್ರೀನಾಥ್‌ ದತ್ನಿ ಅವರ ಇನ್ಫೋಸಿಸ್‌ ಷೇರು ಪಾಲು 77,400ರಿಂದ 76,900 ಕ್ಕಿಳಿದಂತಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X