ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ರಸ್ತೆಗೆ ಮತ್ತೆ ಬರಲಿವೆ ಬಾಗಿಲು ತೊಟ್ಟ ಬಿಎಂಟಿಸಿ ಬಸ್ಸುಗಳು

By Staff
|
Google Oneindia Kannada News

ಬೆಂಗಳೂರು : ಬಿಎಂಟಿಸಿ ಬಸ್‌ಗಳಿಗೆ ಬಾಗಿಲು ಬೇಕೆ?
ಜನಪ್ರಿಯ ವಾಹಿನಿ ಬಸ್‌ಗಳು ಬಾಗಿಲ ಸಮೇತ ರಸ್ತೆಗೆ ಬಂದದ್ದು, ಆ ನಂತರ ಪ್ರಯಾಣಿಕರಿಗೆ ಬಾಗಿಲೇ ಕಿರಿಕ್‌ ಅಂತ ಅದನ್ನು ಕಿತ್ತು ಗ್ಯಾರೇಜ್‌ನಲ್ಲಿಟ್ಟಿರುವುದು ಈಗ ಹಳತು. ಹೆಜ್ಜೆಗೊಂದು ಸ್ಟಾಪು. ಪ್ರಯಾಣಿಕರು ಇಳಿದು, ಹತ್ತುವವರೆಗೂ ವ್ಯವಧಾನವೇ ಇಲ್ಲದಂತೆ ವರ್ತಿಸುವ ಚಾಲಕರು- ನಿರ್ವಾಹಕರು ಇರುವ ನಗರಿಯಲ್ಲಿ ಬಸ್ಸುಗಳಿಗೆ ಬಾಗಿಲು ಬೇಕೆ? ಪ್ರಯಾಣಿಕರ ಉತ್ತರಕ್ಕೇ ಕಾಯದೆ ನಿಗಮವು ಹೊಸ ಬಸ್‌ಗಳಿಗೆ ಬಾಗಿಲು ಹಾಕುವ ನಿರ್ಧಾರ ಮಾಡಿದೆ.

ಶುಕ್ರವಾರ ಬಸವನಗುಡಿಯಲ್ಲಿ ಮಹಾನಗರ ಸಾರಿಗೆ ಸಂಸ್ಥೆಯಿಂದ ಜನಸಂಪರ್ಕ ಸಭೆ. ಸಾರಿಗೆ ಮುಖ್ಯ ವ್ಯವಸ್ಥಾಪಕ ದಸ್ತಗೀರ್‌ ಷರೀಫ್‌ ಜನರನ್ನು ಮಾತಾಡಿಸಿ, ಕಷ್ಟ ಸುಖ ವಿಚಾರಿಸಿಕೊಂಡ ನಂತರ ಬಿಎಂಟಿಸಿ ಬಸ್ಸುಗಳಿಗೆ ಬಾಗಿಲು ಹಾಕುವ ನಿರ್ಧಾರ ಹೇಳಿದರು. ಹೊಸದಾಗಿ ಬಂದಿರುವ 200 ಬಸ್‌ಗಳಿಗೆ ಈಗಾಗಲೇ ಬಾಗಿಲು ಹಾಕಿಯೇ ಸಂಚಾರಕ್ಕೆ ಬಿಡಲಾಗಿದೆ ಎಂದರು.

ಸಾರ್ವಜನಿಕರಿಗೆ ನಿಗಮದ ಬಸ್ಸುಗಳು ಉತ್ತಮ ಸೇವೆ ಒದಗಿಸುತ್ತಿವೆ. 3 ಲಕ್ಷ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಕೊಡಲಾಗಿದೆ. ಕೆಟ್ಟದಾಗಿ ವರ್ತಿಸುವ, ಉಡಾಫೆ ಧೋರಣೆಯ ಚಾಲಕ- ನಿರ್ವಾಹಕರ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ. ಹದ್ದು ಮೀರಿದರೆ, ಅಮಾನತ್ತಿಗೂ ಒಳಪಡಿಸಲಾಗುತ್ತಿದೆ. ಕಾಲೇಜು, ಶಾಲೆ ಹಾಗೂ ಇತರೆ ಇಲಾಖೆಗಳ ಪ್ರಾರಂಭವದ ಅವಧಿ ಬೇರೆ ಬೇರೆ ಆದರೆ, ವಿದ್ಯಾರ್ಥಿಗಳಿಗೇ ಪ್ರತ್ಯೇಕ ಬಸ್‌ ವ್ಯವಸ್ಥೆ ಒದಗಿಸುವುದು ಸಾಧ್ಯವಿದೆ ಎಂದು ಜನರ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.

ಪ್ರಯಾಣಿಕರ ಸಮಯದ ಮಹತ್ವವನ್ನು ಗಮನದಲ್ಲಿರಿಸಿಕೊಂಡು ಟ್ರಂಕ್‌ ರೂಟ್‌ ಎಂಬ ಹೊಸ ಯೋಜನೆಯನ್ನು ನಿಗಮ ರೂಪಿಸುತ್ತಿದೆ. ಇದರ ರೂಪುರೇಷೆ ಇನ್ನೂ ನಿರ್ಣಾಯಕ ಹಂತದಲ್ಲಿದೆ ಎಂದು ಹೇಳಿದರು.

ಬಿಎಂಟಿಸಿ ಬಸ್ಸುಗಳಿಗೆ ಬಾಗಿಲು ಬೇಕೆ? ನೀವು ಹೇಳಿ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X