ವಿಪ್ರೋ+ನೆಟ್ಕ್ರಾಕರ್ = ವಿಪ್ರೋ ಪ್ಲೂಯಿಡ್ ಪವರ್ ಲಿಮಿಟೆಡ್
ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಎನಿಸಿದ ವಿಪ್ರೋ ಲಿಮಿಟೆಡ್, ತನ್ನ ದ್ರವ ಶಕ್ತಿ ವಾಣಿಜ್ಯ(fluid power business) ಘಟಕವನ್ನು ಇತರ ಕಂಪನಿಗಳ ಸಹಯೋಗದೊಂದಿಗೆ ಮುಂದುವರಿಸುವ ಮಹತ್ವದ ತೀರ್ಮಾನ ಕೈಗೊಂಡಿದ್ದು , ಬೆಂಗಳೂರಿನ ಕೇಂದ್ರ ಕಂಪನಿ ನೆಟ್ಕ್ರಾಕರ್ ಸಹಯೋಗದಲ್ಲಿ ನಡೆಯಲಿದೆ.
ವಿಪ್ರೋ ಕಂಪನಿಯ ಮಂಡಳಿ ನಿರ್ದೇಶಕರ ಸಭೆ ದ್ರವ ಶಕ್ತಿ ಘಟಕವನ್ನು ಮಾರ್ಚ್ 1 ರಿಂದ ಸಹಯೋಗಿ ಕಂಪನಿಯಾಗಿ ಪರಿವರ್ತಿಸಲು ಅನುಮೋದನೆ ನೀಡಿದೆ. ನೆಟ್ಕ್ರಾಕರ್ ವಿಪ್ರೋದ ಸಹಯೋಗಿ ಕಂಪನಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಮಂಗಳವಾರ ಸುದ್ದಿ ಮಾಧ್ಯಮಗಳಿಗೆ ಕಂಪನಿ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.
ವಿಪ್ರೋ ಹಾಗೂ ನೆಟ್ಕ್ರಾಕರ್ ಸಹಯೋಗದ ನೂತನ ಕಂಪನಿಗೆ- ವಿಪ್ರೋ ಪ್ಲೂಯಿಡ್ ಪವರ್ ಲಿಮಿಟೆಡ್ ಎಂದು ನಾಮಕರಣ ಮಾಡಿದ್ದು , ಅಜೀಂ ಪ್ರೇಂಜಿ ಈ ಕಂಪನಿಯ ಅಧ್ಯಕ್ಷರಾಗಿರುತ್ತಾರೆ. ಪ್ರಸ್ತುತ ವಿಪ್ರೋ ಪ್ಲೂಯಿಡ್ ಪವರ್ ಬಿಜಿನೆಸ್ ಘಟಕದ ಅಧ್ಯಕ್ಷರಾಗಿರುವ ಎಂ.ಸೀತಾಪತಿ ರಾವ್ ಅವರು, ನೂತನ ಕಂಪನಿಗೆ ಕಾರ್ಯ ನಿರ್ವಾಹಕ ನಿರ್ದೇಶಕರಾಗಿರುತ್ತಾರೆ.
ಪ್ಲೂಯಿಡ್ ಘಟಕದ ಪುನರ್ರಚನೆಯಿಂದ ಕಂಪನಿಯ ವಾಣಿಜ್ಯ ಚಟುವಟಿಕೆ ಮತ್ತಷ್ಟು ತೀವ್ರವಾಗಲಿದೆ. ಬೆಳವಣಿಗೆಯ ಅವಕಾಶಗಳೂ ಹೆಚ್ಚಾಗಲಿವೆ ಎಂದು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ