ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ:ಮಾ.15ರ ಹೋಮಕ್ಕೆ ರಾಜ್ಯದಿಂದ 500 ಕರ ಸೇವಕರು ಮಾತ್ರ!

By Staff
|
Google Oneindia Kannada News

ಬೆಂಗಳೂರು : ಮಾರ್ಚ್‌ 15ರಂದು ಅಯೋಧ್ಯೆಯಲ್ಲಿ ನಡೆಸಲು ಉದ್ದೇಶಿಸಿರುವ ಹೋಮದಲ್ಲಿ ಭಾಗವಹಿಸಲು ರಾಜ್ಯದಿಂದ ಕೇವಲ 500 ಮಂದಿ ಕರಸೇವಕರನ್ನು ಮಾತ್ರ ಕಳುಹಿಸಲು ವಿಶ್ವ ಹಿಂದೂ ಪರಿಷತ್‌ನ ರಾಜ್ಯ ಶಾಖೆ ಉದ್ದೇಶಿಸಿದೆ.

ಈ ಹಿಂದೆ ಐದು ಸಾವಿರ ಮಂದಿ ಕರಸೇವಕರನ್ನು ಕಳುಹಿಸುವುದಾಗಿ ಹೇಳಿದ್ದ ವಿಶ್ವ ಹಿಂದೂ ಪರಿಷತ್‌, ಬಿಗು ಪರಿಸ್ಥಿತಿ ಮತ್ತು ಕೇಂದ್ರ ಸರಕಾರದ ನಿಷೇಧಾಜ್ಞೆಯನ್ನು ಗಮನದಲ್ಲಿರಿಸಿಕೊಂಡು ತನ್ನ ನಿರ್ಧಾರವನ್ನು ಬದಲಿಸಿದೆ ಎಂದು ವಿಹೆಚ್‌ಪಿಯ ರಾಷ್ಟ್ರೀಯ ಉಪಾಧ್ಯಕ್ಷ ವಿ.ಕೆ. ರಾಘವೇಂದ್ರ ರಾವ್‌ ತಿಳಿಸಿದ್ದಾರೆ.

ಪ್ರತಿಕ್ಷಣವೂ ಪರಿಸ್ಥಿತಿ ತೀರಾ ಸೂಕ್ಷ್ಮವಾಗಿ ಬದಲಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳು ಮತ್ತು ಮಹಿಳೆಯರನ್ನು ಕಳುಹಿಸುವುದಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಬಲ್ಲ ಉತ್ಸಾಹೀ ಯುವಕರನ್ನು ಮಾತ್ರ ಕಳುಹಿಸುವುದು ಸೂಕ್ತವೆಂದು ತೀರ್ಮಾನಿಸಿದ್ದೇವೆ ಎಂದು ರಾಘವೇಂದ್ರ ರಾವ್‌ ಹೇಳಿದ್ದಾರೆ.

ಇತ್ತೀಚೆಗೆ ವಿಹೆಚ್‌ಪಿ ಪ್ರಮುಖ ಅಶೋಕ್‌ ಸಿಂಘಾಲ್‌ ಗುಣಾತ್ಮಕ ಕೋರ್ಟ್‌ ತೀರ್ಪಿಗೆ ಬದ್ಧವಾಗಿರುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ರಾವ್‌ ಅವರು, ರಾಮಮಂದಿರ ನಿರ್ಮಾಣದ ಬಗ್ಗೆ ಕರ ಸೇವಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ವಿಹೆಚ್‌ಪಿ ನಾಯಕರ ತಂಡ ನೀಡಿದ ಆದೇಶವನ್ನಷ್ಟೇ ಅವರು ಪಾಲಿಸುತ್ತಾರೆ ಎಂದರು.

ವಿಹೆಚ್‌ಪಿ ರಾಜ್ಯ ಶಾಖೆಯ ಪ್ರಮುಖ ಬಿ.ಎನ್‌. ಮೂರ್ತಿ ಈಗಾಗಲೇ ಅಯೋಧ್ಯೆಗೆ ತೆರಳಿದ್ದಾರೆ. ರಾಘವೇಂದ್ರ ರಾವ್‌ ಅವರು ಸದ್ಯದಲ್ಲೇ ಅಯೋಧ್ಯೆಗೆ ತೆರಳಲಿದ್ದು, ರಾಮಮಂದಿರ ನಿರ್ಮಾಣ ಕುರಿತು, ಮಾರ್ಚ್‌ 15ರಂದು ಆರಂಭವಾಗುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರತಿನಿಧಿ ಸಭಾದಲ್ಲಿ ಭಾಗವಹಿಸಲಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X