ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.15ರಿಂದ ಜೈವಿಕ ತಂತ್ರಜ್ಞಾನ ಮೇಳ ‘ಬೆಂಗಳೂರು ಬಯೋ-2002’

By Staff
|
Google Oneindia Kannada News

Banagalore bio2002ಬೆಂಗಳೂರು : ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಚರ್ಚಿಸಲು ಅಂತರರಾಷ್ಟ್ರೀಯ ಸಮಾವೇಶ ‘ಬೆಂಗಳೂರು ಬಯೋ-2002’ , ಏಪ್ರಿಲ್‌ 15ರಿಂದ ಆರಂಭವಾಗಲಿದೆ.

ವಿವಿಧ ದೇಶಗಳ ಸುಮಾರು 75 ಕ್ಕೂ ಹೆಚ್ಚು ಕಂಪೆನಿಗಳು ಈ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲಿವೆ ಎಂದು ರಾಜ್ಯ ಜೈವಿಕ ತಂತ್ರಜ್ಞಾನ ಕಾರ್ಯಪಡೆಯ ಮುಖ್ಯಸ್ಥ ಕಿರಣ್‌ ಮಜುಂದಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಸಮಾವೇಶ ಎರಡನೇ ಬಾರಿಗೆ ಬೆಂಗಳೂರಿನಲ್ಲಿ ನಡೆಯತ್ತಿದೆ.

ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಬಯೋ ಟೆಕ್ನಾಲಜಿ ವಸ್ತು ಪ್ರದರ್ಶನ, ವಿಚಾರ ಸಂಕಿರಣಗಳು, ಬಿಟುಬಿ ಕಾರ್ಯಾಗಾರಗಳು, ಸಿಇಓ ಕಾಂಕ್ಲೇವ್‌ ಮತ್ತು ಪ್ರಶಸ್ತಿ ವಿತರಣಾ ಸಮಾರಂಭಗಳು ನಡೆಯಲಿವೆ. ಮೇಳದ ಬಗ್ಗೆ ಮಾಹಿತಿ ನೀಡಲು ಮತ್ತು ಆನ್‌ಲೈನ್‌ ನೋಂದಣಿಗಾಗಿ ವೆಬ್‌ಸೈಟ್‌ನ್ನು ರೂಪಿಸಲಾಗಿದೆ - www.bangalorebio2002.com

ಸಂಪರ್ಕಿಸ ಬಹುದಾದ ವ್ಯಕ್ತಿಗಳು - ವಸಂತ್‌ ಡೇವಿಸ್‌- 98453 62208, ದೀಪಕ್‌ ನಾಯರ್‌ 98451 42585, ಜಿಮ್ಮಿ ಜೋಸೆಫ್‌ 98450 73129 ಅಥವಾ 2201106, 2201107, 566244.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X