ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಷ್ಯನ್‌ ಬಿಲಿಯರ್ಡ್ಸ್‌ ಕ್ರೀಡಾಕೂಟಕ್ಕೆ ಅತಿರಥ ಮಹಾರಥರ ದಂಡು

By Staff
|
Google Oneindia Kannada News

ಬೆಂಗಳೂರು : ಏಳು ರಾಷ್ಟ್ರಗಳ ಅಗ್ರಗಣ್ಯ ಬಿಲಿಯರ್ಡ್ಸ್‌ ಪಟುಗಳು ಪಾಲ್ಗೊಳ್ಳುವ ಏಷ್ಯನ್‌ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ ಕ್ರೀಡಾಕೂಟ ಮಾರ್ಚ್‌ 18 ರಿಂದ ನಗರದಲ್ಲಿ ಪ್ರಾರಂಭವಾಗಲಿದೆ.

ಭಾರತದೊಂದಿಗೆ ಥೈಲ್ಯಾಂಡ್‌, ಸಿಂಗಪೂರ್‌, ಮಯನ್ಮಾರ್‌, ಇಂಡೋನೇಷ್ಯಾ, ಶ್ರೀಲಂಕಾ ಹಾಗೂ ನೇಪಾಳ ರಾಷ್ಟ್ರಗಳು ಏಷ್ಯನ್‌ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತವೆ ಎಂದು ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಅಸೋಸಿಯೇಷನ್‌ನ ಕಾರ್ಯದರ್ಶಿ ಸುಬಾಹು ಆರ್‌.ದೇಸಾಯಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

10 ರಿಂದ 12 ರಾಷ್ಟ್ರಗಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತವೆಂದು ನಾವು ನಿರೀಕ್ಷಿಸಿದ್ದವು. ಆದರೆ, ಏಳು ರಾಷ್ಟ್ರಗಳು ಮಾತ್ರ ಕೂಟದಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿವೆ ಎಂದು ದೇಸಾಯಿ ಹೇಳಿದರು. ಮಾರ್ಚ್‌ 24 ರಂದು ಕೊನೆಗೊಳ್ಳುವ ಈ ಕೂಟದಲ್ಲಿ 18 ಸ್ಪರ್ಧಿಗಳು ಹಣಾಹಣಿ ನಡೆಸುವರು.

ಭಾರತದ ಪರ ಅಶೋಕ್‌ ಶಾಂಡಿಲ್ಯ, ಅಲೋಕ್‌ ಕುಮಾರ್‌, ಗೀತ್‌ ಸೇಥಿ ಹಾಗೂ ದೇವೇಂದ್ರ ಜೋಷಿ ಕೂಟದಲ್ಲಿ ಭಾಗವಹಿಸುವರು. ಬೆಂಗಳೂರಿನ ಭರವಸೆಯ ಆಟಗಾರ ಪಂಕಜ್‌ ಅದ್ವಾನಿ ಕ್ರೀಡಾಕೂಟದಲ್ಲಿ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X