ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಜಗನ್ಮೋಹನ ಅರಮನೆಯಲ್ಲಿ ಮಾ.15ರಿಂದ ನಟರಾಜೋತ್ಸವ

By Staff
|
Google Oneindia Kannada News

Natarajaಮೈಸೂರು: ರಾಷ್ಟ್ರೀಯ ಪುರುಷ ಪ್ರಧಾನ ಶಾಸ್ತ್ರೀಯ ಸಂಗೀತ ನೃತ್ಯೋತ್ಸವವಾದ ನಟರಾಜೋತ್ಸವ -2002 ಮಾರ್ಚ್‌ 15ರಂದು ಜಗನ್ಮನೋಹನ ಅರಮನೆಯಲ್ಲಿ ಆರಂಭವಾಗಲಿದೆ.

ವಸುಂಧರ ಪ್ರದರ್ಶನ ಕಲೆಗಳ ಕೇಂದ್ರದ 17 ವಾರ್ಷಿಕ ನೃತ್ಯೋತ್ಸವವಾದ ಈ ನಟರಾಜೋತ್ಸವ ಮೂರು ದಿನಗಳ ಕಾಲ ನಡೆಯಲಿದೆ. ಮಾರ್ಚ್‌ 15ರಂದು ಸಂಜೆ 6 ಗಂಟೆಗೆ ಉತ್ಸವ ಉದ್ಘಾಟನೆಯಾಗಲಿದ್ದು, ಪ್ರಸಿದ್ಧ ಕವಯಿತ್ರಿ, ಸ್ತ್ರೀ ಶಕ್ತಿ ಪ್ರತಿಷ್ಠಾನದ ಅಧ್ಯಕ್ಷೆ ಮಂಗಳಾ ಸತ್ಯನ್‌ಭಾಗವಹಿಸುತ್ತಾರೆ. ಸ್ಥಳೀಯ ಪತ್ರಿಕೆ ಆಂದೋಳನದ ಸಂಪಾದಕ ರಾಜಶೇಖರ್‌ ಕೋಠಿ ಮತ್ತು ಮೈಸೂರು ಮಹಾನಗರ ಪಾಲಿಕೆಯ ಮಹಾ ಪೌರ, ಬಿ.ಕೆ. ಪ್ರಕಾಶ್‌ ಅವರೂ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ.

ನಟರಾಜೋತ್ಸವದಲ್ಲಿ ಆರ್‌. ಶೇಖರ್‌, ಸುರೇಶ್‌ ಜಿ, ಚಿತ್ರನಟ ಡಾ. ಸಂಜಯ್‌ ಶಾಂತಾರಾಮ್‌, ರಘುನಂದನ್‌ ಎಸ್‌, ರಾಜಶ್ರೀ ಶ್ರೀನಾಥ್‌ ಶಣೈ ಮುಂತಾದ ಕಲಾವಿದರು ನೃತ್ಯ ಪ್ರದರ್ಶಿಸಲಿದ್ದಾರೆ ಎಂದು ವಸುಂಧರ ಪ್ರದರ್ಶನ ಕಲೆಗಳ ಕೇಂದ್ರದ ಪ್ರಕಟಣೆ ತಿಳಿಸಿದೆ. ಉತ್ಸವಕ್ಕೆ ಉಚಿತ ಪ್ರವೇಶವಿದ್ದು, ಪ್ರತಿದಿನ ಸಂಜೆ 6 ಗಂಟೆಯಿಂದ 9 ಗಂಟೆಯವರೆಗೆ ಕಾರ್ಯಕ್ರಮಗಳು ನಡೆಯುತ್ತವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X