ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ಜಗಿಯಲ್ಲಿ ಮಂಗಗಳ ಕಾಟ-ವೋ ಕಾಟ, ಜನರಿಗೆ ಪೀಕಲಾಟ

By Staff
|
Google Oneindia Kannada News

Its monkey mania in Karjagiಹಾವೇರಿ : ನಗರದಿಂದ 14 ಕಿ.ಮೀ. ದೂರದಲ್ಲಿರುವ ಕರ್ಜಗಿ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಚೀರಾಟ. ಯಾವುದೋ ಡಕಾಯಿತಿ ನಡೆಯುತ್ತಿದೆ ಎಂಬಷ್ಟು ಭಯ. ಹಣ್ಣು ಇಟ್ಟಲ್ಲಿ ಇಲ್ಲ. ಪರ್ಸು ಹರಿದು ಬೀದಿಯಲ್ಲಿ ಬಿದ್ದಿರುತ್ತದೆ. ಇದ್ದಕ್ಕಿದ್ದಂತೆ ರಂಗಯ್ಯನ ಮುಖದಲ್ಲಿ ತರಚು. ಇದು ಬಾನೆಟ್‌ ಮೆಕ್ಯಾಕ್‌ ಎಂಬ ಮಂಗಗಳ ಮಂಗಚೇಷ್ಟೆ.

ಹತ್ತಿರದ ಕಾಡಿನಿಂದ ನೀರು ಹುಡುಕಿಕೊಂಡು ಬಂದ ಸುಮಾರು 40 ಮಂಗಗಳಿಗೆ ಹಳ್ಳಿ ಜೀವನ ಸುಖಿಸಿತು ಅನಿಸುತ್ತದೆ. ನೀರು ಕುಡಿದ ನಂತರವೂ ಊರಲ್ಲೇ ಠಿಕಾಣಿ. ಮಂಗಗಳು ಸುಮ್ಮನಿರುತ್ತವೆಯೇ? ಎಲ್ಲರ ಮನೆಗಳೂ ತಮ್ಮವೇ. ಎಲ್ಲೆಲ್ಲೂ ಮಂಗಾಟವೇ. ಆದರೆ, ಈ ಮಂಗಗಳ ಚೇಷ್ಟೆಯ ಸ್ವರೂಪ ಭಯಾನಕ. ಹೆದರಿಕೆ ಅನ್ನುವುದು ಕಿಂಚಿತ್ತೂ ಇಲ್ಲ. ತಮ್ಮನ್ನು ಅಟ್ಟಲು ಬಂದ ಸುಮಾರು ಹತ್ತು ಹದಿನೈದು ಮಂದಿಯ ಮೂತಿ ಕೆತ್ತಿದವು. ವಾರ ಕಾಲ ಇವುಗಳ ಉಪಟಳದಿಂದ ತತ್ತರಿಸಿದ ಜನ ಅರಣ್ಯಾಧಿಕಾರಿಗಳಿಗೆ ದೂರು ಕೊಟ್ಟರು. ಪಂಚಾಯಿತಿ ಕಚೇರಿಯ ಬಾಗಿಲು ತಟ್ಟಿದರು. ಆದರೆ, ಕೋತಿ ಚೇಷ್ಟೆಯನ್ನು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ.

ಬೇಸತ್ತ ಜನ ರಸ್ತೆ ತಡೆಗೆ ಕೂತರು. ಅದಕ್ಕೂ ತಕ್ಷಣವೇ ಅರಣ್ಯಾಧಿಕಾರಿಗಳು ಸ್ಪಂದಿಸಲಿಲ್ಲ. ಕೊನೆಗೆ, ಅರಣ್ಯಾಧಿಕಾರಿಗಳ ಜೀಪಿನ ಗಾಳಿ ಕಿಟಕಿಯನ್ನು ಮುರಿದು ಹಾಕಿದರು. ಆಗ ಅರಣ್ಯ ಇಲಾಖೆಯ ಸಿಬ್ಬಂದಿಯ ತಂಡ ಹಳ್ಳಿಗೆ ಹೋಗಿ, 25 ಕೋತಿಗಳನ್ನು ಹಿಡಿದು, ಉತ್ತರ ಕನ್ನಡದ ಧುಂಡಸಿ ವನ್ಯ ಧಾಮಕ್ಕೆ ಸಾಗಿಸಿದರು. ಇನ್ನೂ 15 ಮಂಗಗಳು ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಮು ತಿನ್ನಿಸುತ್ತಿವೆ!

ಈ ಮಂಗಗಳ ಚೇಷ್ಟೆ ಹೊಸತೇನಲ್ಲ. ಸುಮಾರು ವರ್ಷಗಳ ಹಿಂದೆ ಬಾದಾಮಿಯಲ್ಲಿ ಮಂಗಗಳು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದವು. ಪತ್ರಿಕೆಗಳ ಓದುಗರ ವಿಭಾಗದಲ್ಲಿ ಹಲವಾರು ಬಾರಿ ಪತ್ರಗಳು ಪ್ರಕಟವಾದ ನಂತರವೇ ಅದರ ತೀವ್ರತೆ ಅರಣ್ಯಾಧಿಕಾರಿಗಳ ಗಮನಕ್ಕೆ ಬಂದಿತ್ತು. ಅಷ್ಟರಲ್ಲಿ ಸಾಕಷ್ಟು ಹಾನಿಯಾಗಿತ್ತು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X