ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್‌: ಓದುವ ಮಕ್ಕಳ ಕುರಿತು ಕೆಪಿಟಿಸಿಎಲ್‌ಗೆ ಪ್ರೀತಿ, ಆದರೆ...

By Staff
|
Google Oneindia Kannada News

ಬೆಂಗಳೂರು : ನಗರ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌)ದ ವ್ಯವಸ್ಥಾಪಕ ನಿರ್ದೇಶಕ ವಿ.ಪಿ. ಬಳಿಗಾರ್‌, ಓದುವ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಗ್ರಾಮಾಂತರ ಪ್ರದೇಶಗಳಿಗೆ ಪ್ರತಿದಿನ 18 ಗಂಟೆಗಳ ಕಾಲ ವಿದ್ಯುತ್‌ ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮುಂಗಾರು ಮಳೆ ಅಥವಾ ಅನಿರೀಕ್ಷಿತ ಮಳೆ ಬಂದಲ್ಲಿ ವಿದ್ಯುತ್‌ ಉತ್ಪಾದನಾ ಪ್ರಮಾಣ ಹೆಚ್ಚಾಗುವ ಕುರಿತು ಬಳಿಗಾರ್‌ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ನಗರದ ಕಾವೇರಿ ಭವನದ ಆವರಣದಲ್ಲಿರುವ ಕಚೇರಿ ಮುಂಭಾಗದಲ್ಲಿ ಸೋಮವಾರ ಜರುಗಿದ ವಿದ್ಯುತ್‌ ಸಂಪರ್ಕಗಳನ್ನು ಸಕ್ರಮಗೊಳಿಸುವ ಕಾರ್ಯಕ್ರಮದಲ್ಲಿ ಬಳಿಗಾರ್‌ ಮಾತನಾಡುತ್ತಿದ್ದರು.

ಗೃಹ ಬಳಕೆ ಹಾಗೂ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಬೇಡಿಕೆಯ ಪ್ರಮಾಣ ಹೆಚ್ಚಾಗಿದೆ. ಮಾರ್ಚ್‌ ತಿಂಗಳ ಕೊನೆಯವರೆಗೂ ಪರಿಸ್ಥಿತಿ ನಿಭಾಯಿಸಿದಲ್ಲಿ ಆನಂತರ ವಿದ್ಯುತ್‌ ಸಮಸ್ಯೆ ತಹಬಂದಿಗೆ ಬರುವ ನಿರೀಕ್ಷೆಯಿದೆ ಎಂದರು.

ವಿದ್ಯುತ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕ ಎಷ್ಟೇ ಗಣ್ಯನಾಗಿದ್ದರೂ, ಬಾಕಿ ವಸೂಲಿಯಿಂದ ವಿನಾಯಿತಿ ಇಲ್ಲ. ನಿಗಮದ ದೃಷ್ಟಿಯಲ್ಲಿ ಗ್ರಾಹಕರೆಲ್ಲರೂ ಸಮಾನ ಎಂದ ಬಳಿಗಾರ್‌, ರಾಜ್ಯದಲ್ಲಿ 5 ಲಕ್ಷ ಅಕ್ರಮ ವಿದ್ಯುತ್‌ ಸಂಪರ್ಕಗಳಿರುವುದಾಗಿ ಪ್ರಶ್ನೆಯಾಂದಕ್ಕೆ ಉತ್ತರಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X