• search

ಹೊಟ್ಯಪುರದ ಹಿರೇಮಠಕ್ಕೆ ನೂತನ ಶ್ರೀಗಳಾಗಿ ಸತೀಶ ಶಿವಾಚಾರ್ಯ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ದಾವಣಗೆರೆ : ಇಲ್ಲಿನ ಹೊಟ್ಯಪುರದ ಹಿರೇಮಠದಲ್ಲಿ ಶ್ರೀ ಸತೀಶ ಶಿವಾಚಾರ್ಯ ಸ್ವಾಮೀಜಿಗಳ ಪೀಠಾರೋಹಣ ಕಾರ್ಯಕ್ರಮವು ಮಾರ್ಚ್‌ 23ರಂದು ಉಜ್ಜಯಿನಿಯ ಜಗದ್ಗುರು ಮರುಳಸಿದ್ಧ ಸ್ವಾಮೀಜಿಯ ಸಮ್ಮುಖದಲ್ಲಿ ನಡೆಯಲಿದೆ.

    ಹೊಸದಾಗಿ ಪೀಠಾರೋಹಣ ಮಾಡಲಿರುವ ಸ್ವಾಮೀಜಿಗಳ ಅಡ್ಡ ಪಲ್ಲ ಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮಾರ್ಚ್‌ 23ರ ಶನಿವಾರ ನಡೆಯಲಿದೆ. ಅಲ್ಲದೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನೂ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಿರೇಮಠದ ಪ್ರಕಟಣೆ ತಿಳಿಸಿದೆ.

    ಗ್ರಾಮದಲ್ಲಿ ನಡೆಯಲಿರುವ ಎರಡು ದಿನಗಳ ಉತ್ಸವದಲ್ಲಿ ಉಜ್ಜಯಿನಿಯ ಸ್ವಾಮೀಜಿಗಳೂ ಭಾಗವಹಿಸಲಿದ್ದು, ಹೊನ್ನಳ್ಳಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಈ ಅಡ್ಡಪಲ್ಲಕ್ಕಿ ಉತ್ಸವದ ನೇತೃತ್ವ ವಹಿಸಲಿದ್ದಾರೆ. ಮಾರ್ಚ್‌ 24ರಂದು ಶ್ರೀ ಸತೀಶ ಶಿವಾಚಾರ್ಯ ಸ್ವಾಮೀಜಿಗಳು ಪೀಠಾರೋಹಣ ಮಾಡಲಿದ್ದಾರೆ.

    (ಇನ್ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more