• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರಿಟ್ನಿ ಸ್ಪಿಯರ್ಸ್‌ ಈಗ ಒಬ್ಬಂಟಿ,‘ಕಿಸ್‌ ಮಿ ಬೇಬಿ’ ಅನ್ನುವವರ ಸಾಲು ದೊಡ್ಡದು

By Staff
|

Britney and Justin timberlakeಜಸ್ಟಿನ್‌ ಟಿಂಬರ್‌ಲೇಕ್‌ ಕೊಟ್ಟಿದ ಲಕ್ಷ ಪೌಂಡ್‌ ಬೆಲೆಯ ಉಂಗುರವನ್ನು ಬ್ರಿಟ್ನಿ ಸ್ಪಿಯರ್ಸ್‌ ಕಳಚಿಟ್ಟಿದ್ದಾಳೆ. ಕೆರಿಯರ್ರಿಗೆ ಮುಖ, ದೀರ್ಘ ಕಾಲಿಕ ಒಡನಾಟಕ್ಕೆ ಬೆನ್ನು. ಇದು ಜಸ್ಟಿನ್‌ ಟಿಂಬರ್‌ ನಿರ್ಧಾರ. ಘಾಸಿಯಾದರೂ, ವಿಧಿಯಿಲ್ಲ ಎಂಬಂತೆ ಬ್ರಿಟ್ನಿ ತಲೆಯಾಡಿಸಿದ್ದಾಳೆ.

ಬ್ರಿಟನ್ನಿನ ಪತ್ರಿಕೆಗಳಲ್ಲಿ , ಟ್ಯಾಬ್ಲಾಯ್ಡ್‌ಗಳಲ್ಲಿ ಈ ಪ್ರಣಯ ಭಂಗ ಸುದ್ದಿ ಮುಖಪುಟದ್ದು. ಬ್ರಿಟ್ನಿ ತನ್ನ ಮೊದಲ ಪಾಪ್‌ ಆಲ್ಬಂ ಬಿಡುಗಡೆ ಮಾಡಿದಾಗ ಇನ್ನೂ ಷೋಡಶಿ. ಸಾಹಿತ್ಯ ಬರೆದು, ಟ್ಯೂನ್‌ ಹಾಕಿ, ಸುಶ್ರಾವ್ಯವಾಗಿ ಹಾಡಬಲ್ಲ ಅಪರೂಪದ ಪ್ರತಿಭೆ ಬ್ರಿಟ್ನಿ. ಅಷ್ಟೇ ಅಲ್ಲ ಸ್ಫುರದ್ರೂಪಿ. ತಾಳಕ್ಕೆ ತಪ್ಪದ ಹಸನು ಕುಣಿತ. ಇವೆಲ್ಲಾ ಈಕೆಯನ್ನು ಹಾಲಿವುಡ್‌ ಬಾಗಿಲಿಗೆ ತಂದು ನಿಲ್ಲಿಸಿರುವ ಹೊತ್ತಲ್ಲೇ ದೀರ್ಘ ಕಾಲದ ಪ್ರಣಯ ಭಂಗವಾಗಿದೆ. ಅಂದಹಾಗೆ, ಈಕೆಯ ವಯಸ್ಸಿನ್ನೂ ಇಪ್ಪತ್ತು !

ಜಸ್ಟಿನ್‌ ಟಿಂಬರ್‌ಲೇಕ್‌ ಕೂಡ ಒಬ್ಬ ಗಾಯಕ. ವರ್ಷಗಳ ಹಿಂದೆ ಇಬ್ಬರ ನಡುವೆ ಒಡನಾಟ ಹುಟ್ಟಿತ್ತು. ಇಬ್ಬರದ್ದೂ ಗಳಸ್ಯ ಕಂಠಸ್ಯ ಎನ್ನುವಂಥಾ ಸ್ನೇಹ. ಎಷ್ಟೋ ರಾತ್ರಿಗಳನ್ನು ಇಬ್ಬರು ಒಟ್ಟಾಗಿ ಕಳೆದಿದ್ದರು. ಅದು ಹೇಗಿದ್ದಿರಬಹುದು ಎಂಬುದೇ ಬ್ರಿಟ್ನಿ ಅಭಿಮಾನಿಗಳ ಚರ್ಚೆಯ ವಸ್ತು.

ಇದು ಜಸ್ಟಿನ್‌ನನ್ನು ಘಾಸಿಗೊಳಿಸಿದೆ. ಯಾವುದೇ ಸಂದರ್ಶನದ ಮೊದಲ ಪ್ರಶ್ನೆಯಾದರೂ, ಬ್ರಿಟ್ನಿ ಹಾಗೂ ಬೆಡ್‌ ರೂಂ ಕುರಿತದ್ದೇ. ಕಂಡಕಂಡವರ ಕಿಚಾವಣೆಗೆ ಸಿಕ್ಕು ಮಾನಸಿಕವಾಗಿ ತತ್ತರಿಸಿಹೋದೆ ಅನ್ನುವುದು ಜಸ್ಟಿನ್‌ ಅಳಲು. ಜೀವದ ಗೆಳೆಯ ಹೀಗೆ ನಡುನೀರಲ್ಲಿ ಕೈ ಬಿಟ್ಟನಲ್ಲಾ ಅನ್ನುವುದು ಬ್ರಿಟ್ನಿ ಅಳಲು. ಎಲ್ಲರ ಮಾತಿಗೆ ವಸ್ತುವಾಗಿದ್ದ ಈ ಇಬ್ಬರೂ ಈಗ ಅಕ್ಷರಶಃ ಬೇರೆ ಬೇರೆ. ಅದಕ್ಕೇ ಒಂದು ಪತ್ರಿಕೆ ‘ಸ್ಪ್ಲಿಟ್ನಿ ಸ್ಪಿಯರ್ಸ್‌’ ಎಂಬ ಶೀರ್ಷಿಕೆ ಕೊಟ್ಟಿದೆ.

ಬೆಂಗಳೂರಲ್ಲೂ ಒಂದು ಹಿಡಿ ಅಭಿಮಾನಿಗಳನ್ನು ಬ್ರಿಟ್ನಿ ಗಿಟ್ಟಿಸಿಕೊಂಡಿದ್ದಾಳೆ. ಬ್ರಿಟ್ನಿ ಪ್ರಣಯ ಭಂಗ ಸುದ್ದಿ ಕೇಳುತ್ತಲೇ ಲಕ್ಷಾಂತರ ಅಭಿಮಾನಿಗಳು ‘ಕಿಸ್‌ ಮಿ ಬೇಬಿ ಒನ್‌ ಮೋರ್‌ ಟೈಂ’ ಅಂತ ಅಲವತ್ತುಕೊಳ್ಳುತ್ತಿದ್ದಾರಂತೆ. ಟಿಂಬರ್‌ಲೇಕ್‌ ಜಾಗೆ ತುಂಬಲು ಈಗ ನಾ ಮುಂದು ತಾಮುಂದು.

ಚಿಕ್ಕ ಹುಡುಗಿಯ ಗಗನಚುಂಬಿ ಸಾಧನೆಗೆ ಏನೆಲ್ಲ ಎಡರು. ಇದರ ನಡುವೆಯೂ ಆಕೆ ನಗುನಗುತ್ತಲೇ, ನಾನು ನಟಿಯಾಗಿ ಬರುತ್ತಿದ್ದೇನೆ ಅಂತ ಹೇಳುತ್ತಾರೆ. ಇಂಥಾ ಸುದ್ದಿ ಸ್ಫೋಟಿಸುವ ಕೆಲವೇ ತಿಂಗಳ ಮುಂಚೆ ನಮ್ಮೂರಿನ ಯಶಸ್ವಿ ಗಾಯಕ ರಾಜೇಶ್‌ ಕೃಷ್ಣನ್‌, ತಾವು ಮದುವೆಯಾಗಿದ್ದ ಬಿ.ಕೆ.ಸುಮಿತ್ರಾ ಅವರ ಮಗಳಿಗೆ ಡೈವೋರ್ಸ್‌ ಮಾಡಿದ್ದು ಎಲ್ಲೋ ಸಣ್ಣಗೆ ಕೇಳಿತ್ತು.

(ಇನ್ಫೋ ವಾರ್ತೆ)

ಮುಖಪುಟ / ಲೋಕೋಭಿನ್ನರುಚಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more