• search

ಅಯೋಧ್ಯೆಯಲ್ಲಿ ‘ಅಳಿಲು’ ಸೇವಕರು! ಶಿವರಾತ್ರಿ ಸಂದರ್ಭದಲ್ಲೊಂದು ರಾಮಕಥೆ!

By Super
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಸೀತೆಯನ್ನು ರಾವಣ ರಾಜ್ಯದಿಂದ ಬಿಡಿಸಿ ತರಲು ರಾಮ ಸೇತುವೆ ಕಟ್ಟುತ್ತಿದ್ದ ಕಾಲ. ಎಲ್ಲ ಕಪಿಗಳೂ ಬಂಡೆ, ಮರ, ಮರಳುಗಳನ್ನು ಸಮುದ್ರಕ್ಕೆ ತಂದು ಹಾಕಿ ಸೇತುವೆ ಸಿದ್ಧಗೊಳಿಸುತ್ತಿದ್ದವು. ಆಹೋರಾತ್ರಿಯ ಮಹಾ ಕಾರ್ಯ. ರಾಮ ತನಗಾಗಿ ದುಡಿಯುತ್ತಿರುವವರನ್ನು ನೋಡುತ್ತಿದ್ದ.

    ಆಗ ಅಳಿಲೊಂದು ಅವನ ಕಣ್ಣಿಗೆ ಬಿತ್ತು. ಒದ್ದೆ ಮೈಯ್ಯಲ್ಲಿ ಮರಳ ಮೇಲೆ ಉರುಳಿ, ಸೇತುವೆ ಮೇಲೆ ಮತ್ತೆ ಮೈ ಕೊಡವುತ್ತಿತ್ತು. ಸೇತುವೆ ಕಟ್ಟಲು ಅಳಿಲ ಸೇವೆ ಇದು. ಈ ದೃಶ್ಯ ಕಂಡು ರಾಮನಿಗೆ ಪ್ರೀತಿ ಉಕ್ಕಿ , ಅಳಿಲ ಬೆನ್ನು ನೇವರಿಸಿದ. ಈಗ ಅಳಿಲ ಬೆನ್ನ ಮೇಲಿರುವ ಮೂರು ಗೀಟುಗಳು ರಾಮನ ಮುದ್ದಿನ ಸಂಕೇತ- ಎನ್ನುತ್ತದೆ ಪುರಾಣ.

    ಹೀಗೆ ತಾವೂ ಅಳಿಲ ಸೇವೆ ಮಾಡುತ್ತೇವೆಂದು ಅಯೋಧ್ಯೆಯಲ್ಲಿ ಈಗ ಸಾಲು ನಿಂತವರ ಸಂಖ್ಯೆ ಸಾವಿರಗಳಾಚೆಗೆ ಇದೆ. ಅಲ್ಲೀಗ ಸುಮಾರು ಮೂರು ಲಕ್ಷಕ್ಕೂ ಮಿಕ್ಕಿ ಇಟ್ಟಿಗೆಗಳು ರಾಮಮಂದಿರ ನಿರ್ಮಾಣಕ್ಕಾಗಿ ಕಾಯುತ್ತಿವೆ. ಆ ಇಟ್ಟಿಗೆಗಳನ್ನು ಕಾಯುವ ಜವಾಬ್ದಾರಿ ಹೊತ್ತಿರುವ ಸಾಧುಗಳ ಸಂಖ್ಯೆಯೇ ದೊಡ್ಡದಿದೆ. ಪ್ರತಿ ಕಲ್ಲುಗಳ ಮೇಲೆ ಶ್ರೀ ರಾಮ ಎಂಬ ಕೆತ್ತನೆ. ಇಟ್ಟಿಗೆಗಳ ಒಂದು ರಾಶಿಯನ್ನು ಕಾಯುತ್ತಿರುವ ಸಾಧು, ಚೈತನ್ಯ ಮಹಾರಾಜ್‌ ಹೇಳುವುದು- 'ನಾನು ಕಳೆದ 14ವರ್ಷದಿಂದ ಈ ಇಟ್ಟಿಗೆಗಳನ್ನು ಕಾಯುತ್ತಿದ್ದೇನೆ" .

    'ಪ್ರತಿ ಇಟ್ಟಿಗೆಯಲ್ಲಿಯೂ ಕೋಟಿಗಟ್ಟಲೆ ರಾಮಭಕ್ತರ ಸೂಕ್ಷ್ಮ ಭಾವನೆಗಳಿವೆ. ಅಂತಹ ಒಂದು ಇಟ್ಟಿಗೆಯನ್ನು ಕಾಯುವುದು ಮಹತ್ತರವಾದ ಕೆಲಸ. ನನಗದು ಇಟ್ಟಿಗೆ ಕಾಯುವ ಕೆಲಸವಾಗಿ ಕಾಣಿಸುವುದಿಲ್ಲ. ಅದು ರಾಮನ ಕೈಂಕರ್ಯ ". ದೇಶಾದ್ಯಂತ ಮೂರು ಲಕ್ಷ ಹಳ್ಳಿಗಳಿಂದ ಈ ಇಟ್ಟಿಗೆಗಳು ಬಂದಿವೆ. ಪ್ರತಿ ಇಟ್ಟಿಗೆಯೂ ಗ್ರಾಮಸ್ಥರಿಂದ ಪೂಜೆ ಸ್ವೀಕರಿಸಿದೆ. ಎಷ್ಟೊಂದು ಜನ ಭಕ್ತರು ಈ ಒಂದೊಂದು ಇಟ್ಟಿಗೆಯ ಮುಂದೆಯೂ ರಾಮ ಯಜ್ಞ ಮಾಡಿ, ಉದ್ದಂಡ ನಮಸ್ಕಾರ ಹಾಕಿದ್ದಾರೆ.

    ಇಟ್ಟಿಗೆಗಳು ಭಾರತದಿಂದ ಮಾತ್ರ ಬಂದಿಲ್ಲ ..
    ಇಲ್ಲಿರುವುದು ಭಾರತೀಯ ಭಕ್ತರು ಅರ್ಪಿಸಿದ ಇಟ್ಟಿಗೆಗಳಷ್ಟೇ ಅಲ್ಲ - ಅಮೆರಿಕಾ, ಇಂಗ್ಲೆಂಡ್‌, ಜಪಾನ್‌, ನೆದರ್‌ಲ್ಯಾಂಡ್‌, ಕೆನಡಾ ದೇಶಗಳಿಂದಲೂ ಇಟ್ಟಿಗೆಗಳು ಪೂಜೆಗೊಂಡು ಬಂದಿವೆ. ಅವೆಲ್ಲ ಎಲ್ಲಿಂದ ಬಂದಿವೆ ಎನ್ನುವುದಕ್ಕಿಂತ ಎಷ್ಟೊಂದು ಮಂದಿಯ ಭಾವನೆಗಳನ್ನು ಹೊತ್ತು ತಂದಿವೆ ಎನ್ನುವುದು ಮುಖ್ಯ ಎಂದು ಚೈತನ್ಯ ಸಾಧು ಹೇಳುತ್ತಾರೆ.

    ಶ್ರೀ ರಾಮ ನಾಮವನ್ನು ಈ ಇಟ್ಟಿಗೆಗಳ ಮೇಲೆ ಕನಿಷ್ಠ 12 ಭಾಷೆಗಳಲ್ಲಿ ಕೆತ್ತಲಾಗಿದೆ. ರಾಶಿ ಇಟ್ಟಿಗೆಗಳೊಂದಿಗೆ 8 ಲಕ್ಷ ರೂಪಾಯಿ ಕಾಣಿಕೆಯೂ ರಾಮದೇಗುಲಕ್ಕಾಗಿ ಬಂದಿದೆ. ಚೈತನ್ಯ ಮಹಾರಾಜ್‌ ಸ್ವಾಮೀಜಿ ಇಟ್ಟಿಗೆಗಳಿಗೆ ಒಂದಿಷ್ಟು ಗೀರು ಬೀಳದಂತೆ ಕಾಯುವುದಲ್ಲದೆ, ಪ್ರತಿ ವಾರ ಅವುಗಳ ಹೊಳಪು ಮಾಸದಂತೆ ಸ್ವಚ್ಛಮಾಡುತ್ತಾರೆ. ದೇವರ ಮನೆಯಲ್ಲಿರುವ ಪುಟ್ಟ ಸಾಲಿಗ್ರಾಮವನ್ನು ನೋಡಿಕೊಂಡ ಹಾಗೆಯೇ ಕಾಳಜಿ ಮಾಡುತ್ತಾರೆ.

    ಇಷ್ಟೆಲ್ಲಾ ಆದರೂ, ಸುಮಾರು 200 ಇಟ್ಟಿಗೆಗಳು ಪುಡಿಯಾಗಿವೆ. ಇಟ್ಟಿಗೆಗಳನ್ನು ಪೇರಿಸಿಟ್ಟ ವಲಯದಲ್ಲಿ ಮಂಗಗಳು ಓಡಾಡಿ, ಇಟ್ಟಿಗೆಗಳನ್ನು ಪುಡಿಗಟ್ಟಿವೆ. ಮಂಗಗಳೆಂದರೆ ರಾಮಸೇವಕರು. ಆದ್ದರಿಂದ ಕಾವಲುಗಾರರು ಇವುಗಳನ್ನು ಗುಂಡಿಟ್ಟು ಕೊಲ್ಲುವ ಹಾಗೂ ಇಲ್ಲ. ಯಾವಾಗ ಈ ಇಟ್ಟಿಗೆಗಳು ಉಪಯೋಗಿಸಲ್ಪಡುತ್ತವೆ ಎಂದು ಚೈತನ್ಯ ಸಾಧುಗಳನ್ನು ಕೇಳಿದರೆ, 'ಸ್ವಲ್ಪ ಸಮಯ ಕಾದರೆ ಎಲ್ಲವೂ ಸರಿ ಹೋಗುತ್ತವೆ. ರಾಮಮಂದಿರ ನಿರ್ಮಾಣವಾಗಿಯೇ ಆಗುತ್ತದೆ " ಎಂದು ವಿಶ್ವಾಸದಿಂದ ಚೈತನ್ಯ ಸ್ವಾಮೀಜಿ ಹೇಳುತ್ತಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Ramamandir controversy : As temple issue rages, 300,000 bricks wait in Ayodhya

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more