• search

ಉಡುಪಿ ಪೇಜಾವರ ಮಠದ ಪರ್ಯಾಯ ದರ್ಬಾರಿನಲ್ಲಿ ನಷ್ಟವೋ ನಷ್ಟ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    Vishweshteertha Swamijiಉಡುಪಿ: ಪರ್ಯಾಯ ಪೀಠ ನಿರ್ವಹಿಸುತ್ತಿದ್ದಾಗ ಪೇಜಾವರ ಮಠದ ಆಯವ್ಯಯದಲ್ಲಿ ನಷ್ಟ ಉಂಟಾಗಿರುವುದಾಗಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

    ಪರ್ಯಾಯ ಅವಧಿಯಲ್ಲಿ ಮಠವು ಒಟ್ಟು 4.17 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು, 4.38 ಕೋಟಿ ರೂಪಾಯಿ ಹಣ ವ್ಯಯವಾಗಿದೆ. ಈ ಕೊರತೆಯನ್ನು ತುಂಬಲು ತಮ್ಮ ಪಾದ ಪೂಜೆಯ ಸಂದರ್ಭದಲ್ಲಿ ಸಂಗ್ರಹವಾದ 14 ಲಕ್ಷ ರೂಪಾಯಿ ಹಣವನ್ನು ಬಳಸಿಕೊಳ್ಳಲಾಗಿದೆ. ಉಳಿದಂತೆ ವ್ಯಾಪಾರಿಗಳಿಗೆ ನೀಡಬೇಕಿದ್ದ 7 ಲಕ್ಷ ರೂಪಾಯಿ ಸಾಲ ಇನ್ನೂ ತೀರಿಲ್ಲ ಎಂದು ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಲೆಕ್ಕ ಒಪ್ಪಿಸಿದರು.

    ಪರ್ಯಾಯ ಪೀಠ ವಹಿಸಿಕೊಂಡಿದ್ದ ಸಂದರ್ಭದಲ್ಲಿ ಪೇಜಾವರ ಮಠದ ಅಭಿವೃದ್ಧಿಗಾಗಿ 1.46 ಕೋಟಿ ರೂಪಾಯಿ ದೇಣಿಗೆ ಬಂದಿದೆ. ಅನಂತರ 92 ಲಕ್ಷ ರೂಪಾಯಿಗಳು ದೊರೆತಿವೆ. 19 ಲಕ್ಷ ರೂಪಾಯಿ ಸರಕಾರದ ಕಡೆಯಿಂದ ಸಿಕ್ಕಿದೆ. ಹೀಗೆ ಒಟ್ಟು 2.72 ಕೋಟಿ ರೂಪಾಯಿಗಳು ದೇಣಿಗೆ ರೂಪದಲ್ಲಿ ಬಂದಿವೆ.

    ಇದರಲ್ಲಿ 95 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀಕೃಷ್ಣ ಪರಿಸರ ಟ್ರಸ್ಟ್‌ಗಾಗಿ ಜಾಗ ಖರೀದಿಸಲಾಗಿದೆ. 1.25 ಕೋಟಿ ರೂಪಾಯಿಗಳಲ್ಲಿ ರಾಜಾಂಗಣ ನಿರ್ಮಾಣ, 59 ಲಕ್ಷ ರೂಪಾಯಿಯಲ್ಲಿ ಕನಕ ಮಂಟಪ, ಯಜ್ಞ ಶಾಲಾ, ಮಾಧ್ವ ಮಂಟಪ ಮತ್ತಿತರ ಕೆಲಸಗಳನ್ನು ಪೂರೈಸಲಾಗಿದೆ. 34 ಲಕ್ಷ ರೂಪಾಯಿ ಮಠದ ದಿನನಿತ್ಯದ ಕೆಲಸಗಳಿಗೆ ವ್ಯಯವಾಗಿದೆ ಎಂದು ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

    ಮಠದ ಕಿರಿಯ ಸ್ವಾಮೀಜಿ ವಿಜಯಧ್ವಜತೀರ್ಥರು ಆರ್ಥಿಕವಾಗಿ ಕುಸಿದ ಸಂದರ್ಭದಲ್ಲಿ ಅವರಿಗೆ 12 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದ ಸ್ವಾಮೀಜಿ ತಮ್ಮ ಮತ್ತು ವಿಜಯಧ್ವಜತೀರ್ಥರ ನಡುವಿನ ಬಾಂಧವ್ಯ ಅನ್ಯೋನ್ಯವಾಗಿದೆ ಎಂದರು.

    (ಇನ್ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more