ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೆಜಿಲ್‌ನ ಡರ್ಸಿ ಗಾನ್‌ಕಾಲ್ವ್ಸ್‌ ಎಂಬ ನಿತ್ಯ ಸುಂದರಿಯ ಬೆತ್ತಲೆ ಪ್ರಹಸನ

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

‘ನನ್ನ ಬೆತ್ತಲೆ ಫೋಟೋಗಳನ್ನು ನೋಡಿ ಖುಷಿಯಾಯಿತು. ಸ್ಟಿಲ್‌ ಐ ಆ್ಯಮ್‌ ಸೆಕ್ಸಿ !’

ಏಳು ದಶಕಗಳ ಕಾಲ ಹಿರಿತೆರೆ, ಕಿರುತೆರೆಗಳಲ್ಲಿ ಜನರ ರಂಜಿಸಿದ ಡರ್ಸಿ ಗಾನ್‌ಕಾಲ್ವ್ಸ್‌ ಎಂಬ ಬ್ರೆಜಿಲಿಯನ್‌ ನಿತ್ಯ ಸುಂದರಿಯ ಮಾತಿದು. ಹುಣಿಸೆ ಮರಕ್ಕೆ ಮುಪ್ಪಾದರೂ ಹುಳಿಗೆಂಥಾ ಮುಪ್ಪು ಎಂಬುದು ಈಕೆಯ ಧ್ಯೇಯ ವಾಕ್ಯ. ಚಿಕ್ಕ ವಯಸ್ಸಿನಲ್ಲೇ ಪುಟ್ಟ ಪುಟ್ಟ ಪಾತ್ರಗಳನ್ನು ಮಾಡಿಕೊಂಡು, ಕೊನೆಗೆ ಕಮಿಡಿಯನ್‌ ಎಂಬ ಪಟ್ಟ ಗಿಟ್ಟಿಸಿದ ಈಕೆ ಬಿಚ್ಚಮ್ಮ. ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಅಂತ ಮೊನ್ನೆವರೆಗೂ ಹೇಳಿಕೊಂಡು ಬಂದಿದ್ದ ಈಕೆ ಈಗ ಸಂಪೂರ್ಣ ಬೆತ್ತಲು. ಬ್ರೆಜಿಲ್‌ನ ಪಡ್ಡೆ ಹುಡುಗರ ಅಡ್ಡಾಗಳಲ್ಲಿ ಈಕೆಯದೇ ಮಾತು.

ಈಕೆಯ ಬೆತ್ತಲೆ ಚಿತ್ರ ಕಾಣಿಸಿದ್ದು ಪೆಂಟ್‌ಹೌಸ್‌ ಎಂಬ ನಿಯತಕಾಲಿಕದಲ್ಲಿ. 1,70,000 ಡಾಲರ್‌ ಮೊತ್ತದ ಜಾಹೀರಾತು ಪ್ರಚಾರದ ಹಣದಲ್ಲಿ ಡರ್ಸಿ ಗಾನ್‌ಕಾಲ್ವ್ಸ್‌ ಥೈಲಿಗೆ ಸಾಕಷ್ಟು ಸೇರಿದೆ. ಈಕೆಯ ಫೋಟೋಗಳ ದೆಸೆಯಿಂದ ‘ಪೆಂಟ್‌ಹೌಸ್‌’ ಮಾಲೀಕ ಆಸ್ಕರ್‌ ಮೊರೋನ್‌ ಖಜಾನೆಯೂ ಖಚಾಖಚಿ ತುಂಬಿದೆ.

ವಯಸ್ಸಿಗೂ ವರ್ತನೆಯೂ ಸಂಬಂಧವೇ ಇಲ್ಲ ಎನ್ನುವಂತಿರುವ, ಈಗಲೂ ಹದಿಹರೆಯದ ಮೊನಚಿನ ಮಾತಾಡುವ ತುಂಟ ಹೆಂಗಸು ಡರ್ಸಿ ಗಾನ್‌ಕಾಲ್ವ್ಸ್‌. ಮಾತು ವಿಚಿತ್ರ; ನಡಾವಳಿ ಬಲು ಅಪರೂಪ. ಡರ್ಸಿ ಗಾನ್‌ಕಾಲ್ವ್ಸ್‌ ಮಾತುಗಳ ಕೇಳಿ...

‘ನಾನು ಬೆತ್ತಲೆಯಾಗಿ ಕೆಮೆರಾ ಮುಂದೆ ನಿಂತಿದ್ದು, ವಯಸ್ಸಾದವರೂ ಸೆಕ್ಸಿಗಳೆಂಬುದನ್ನು ಸಾಬೀತು ಮಾಡಲು. ವಯಸ್ಸಿಗೂ ಸೌಂದರ್ಯಕ್ಕೂ ಸಂಬಂಧವಿಲ್ಲ. ನಾನು ಹುಡುಗರ ಜೊತೆ ಸಂಬಂಧ ಇಟ್ಟುಕೊಳ್ಳುವುದನ್ನು ಬಿಟ್ಟದ್ದು ವಯಸ್ಸು 60 ಆದ ಮೇಲೆ. ನನ್ನ ಪ್ರಕಾರ, ಜೀವನ ಶುರುವಾಗುವುದೇ ಆಗ. ತೆರೆಗೆ ಬಂದ ಮೊದಲ ದಿನಗಳಲ್ಲಿ ಕೇವಲ ಟೂ ಪೀಸ್‌ ತೊಟ್ಟು ನಿಂತುಕೊಳ್ಳಲು ಹಿಂದೂಮುಂದೂ ನೋಡುತ್ತಿರಲಿಲ್ಲ. ಆದರೆ, ಬೆತ್ತಲಾಗಲು ಹಿಂಜರಿಯುತ್ತಿದ್ದೆ. ಈಗ ಯಾವುದೇ ಅಳುಕಿಲ್ಲ. ಹಿರಿಯ ಹೆಂಗಸರು ಯಾರಿಗೇನು ಕಡಿಮೆ ಅನ್ನೋದನ್ನ ನಾನು ತೋರಿದ್ದೇನೆ. ಫೋಟೋ ನೋಡಿದ ಮೇಲೆ ಅನಿಸುತ್ತಿದೆ- ನಾನಿನ್ನೂ ಚಿಕ್ಕವಳು. ಇವತ್ತೂ ಸೆಕ್ಸಿ ಆಗೇ ಇದ್ದೇನೆ’.

ಅಂದಹಾಗೆ, ಡರ್ಸಿ ಗಾನ್‌ಕಾಲ್ವ್ಸ್‌ ವಯಸ್ಸು ಕೇವಲ 94!

ನಾಳೆ (ಮಾರ್ಚ್‌ 08) ಮಹಿಳೆಯರ ದಿನ. ಡರ್ಸಿ ಗಾನ್‌ಕಾಲ್ವ್ಸ್‌ನಂಥಾ ಇನ್ನಾವುದೋ ಅನನ್ಯ, ಅಪರೂಪ, ವಿಚಿತ್ರ ಹೆಂಗಸು ನಿಮಗೂ ಗೊತ್ತಿರಬಹುದು. ಮಹಿಳೆಯ ಸ್ವಾಯತ್ತತೆಯ ಬಗೆಗೆ ಯಾವುದೋ ವಿಚಾರವೂ ನಿಮ್ಮಲ್ಲಿ ಹುದುಗಿರಬಹುದು. ಈಗಿಂದೀಗಲೇ ಬರೆಯುವ ಮನಸ್ಸು ಮಾಡಿ.

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X