ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರಿನ ಕಸ್ತೂರ್‌ಬಾ ಸದನಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕಾರ

By Super
|
Google Oneindia Kannada News

ಬೆಂಗಳೂರು : ಮಹಿಳೆಯರ ಅಭಿವೃದ್ಧಿಗಾಗಿ ದುಡಿಯುವ ಸಂಸ್ಥೆಗಳಿಗೆ ಪ್ರತಿ ವರ್ಷ ಸರಕಾರ ನೀಡುತ್ತಿರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಈ ಬಾರಿ ಚಿಕ್ಕಮಗಳೂರಿನ ಕಸ್ತೂರಬಾ ಸದನ ಸಂಸ್ಥೆ ಆಯ್ಕೆಯಾಗಿದೆ.

ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಮಹಿಳಾ ಅಭಿವೃದ್ಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ವೈಯಕ್ತಿಕ ಪ್ರಶಸ್ತಿಗೆ ಬೆಂಗಳೂರಿನ ಸಿ. ಶಾರದಾ, ಬಾಗಲಕೋಟೆಯ ಗುರವ್ವ, ಚಿಕ್ಕಮಗಳೂರಿನ ಬಿದರಹಳ್ಳಿಯ ಟಿ. ಕಮಲಾಕ್ಷಿ ಆಯ್ಕೆಯಾಗಿದ್ದಾರೆ.

ಕಲಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಸಾಧಕರಿಗೆ ನೀಡುವ ಪುರಸ್ಕಾರಕ್ಕೆ ಮೈಸೂರಿನ ಅಂಧ ಕಲಾವಿದೆ,ಜನೀನಾ, ಸಾಹಿತ್ಯ ಕ್ಷೇತ್ರದಿಂದ ಶಿರಸಿಯ ಭಾಗಿರಥಿ ಹೆಗಡೆ, ಶಿಕ್ಷಣ ಕ್ಷೇತ್ರದಿಂದ ಬೆಂಗಳೂರಿನ ಎಚ್‌. ಎನ್‌. ಶುಭದಾ ಮತ್ತು ಕ್ರೀಡಾ ಕ್ಷೇತ್ರದಿಂದ ಬೆಂಗಳೂರಿನ ಕೋಕಿಲಾ ಸುಧಾ ಅವರನ್ನು ಆಯ್ಕೆ ಮಾಡಲಾಗಿದೆ.

ವೈಯಕ್ತಿಕ ಪ್ರಶಸ್ತಿ ತಲಾ 10 ಸಾವಿರ ರೂಪಾಯಿ ಮತ್ತು ಪ್ರಶಸ್ತಿ ಪಲಕವನ್ನೊಳಗೊಂಡಿರುತ್ತದೆ. (ಇನ್ಫೋ ವಾರ್ತೆ)

English summary
Women Empowerment : Kastur ba Sadana of Chikkamagalur bags Kittur rani award
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X