ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್‌ ಕ್ವೆ ೖದಾ ಈಗಲೂ ಚುರುಕು : ಅಮೆರಿಕಕ್ಕೆ ಇನ್ನಷ್ಟು ದಾಳಿಗಳ ಆತಂಕ

By Staff
|
Google Oneindia Kannada News

ವಾಷಿಂಗ್ಟನ್‌ : ಅಮೆರಿಕ ಈಗಲೂ ನೆಮ್ಮದಿಯ ನಿದ್ರೆ ಮಾಡುವಂತಿಲ್ಲ. ಯಾಕೆಂದರೆ, ಅಲ್‌ ಕ್ವೆ ೖದಾ ಸಂಘಟನೆ ಇನ್ನೂ ಪೂರ್ಣವಾಗಿ ಮಲಗಿಲ್ಲ. ಅಮೆರಿಕಾ ಮೇಲೆ ಎರಗಲು ಹುನ್ನಾರಗಳನ್ನು ಹೊಸೆಯುತ್ತಿದೆ !

ಫೆಡರಲ್‌ ಬ್ಯೂರೋ ಆಫ್‌ ಇನ್‌ವೆಸ್ಟಿಗೇಷನ್‌ (ಎಫ್‌ಬಿಐ) ನಿರ್ದೇಶಕ ರಾಬರ್ಟ್‌ ಮುಲ್ಲರ್‌ ಅಮೆರಿಕಾ ಪ್ರತಿನಿಧಿಗಳ ಸಭೆಯ ಸಮಿತಿಯಾಂದರ ಮುಂದೆ ಈ ಹೇಳಿಕೆಯನ್ನು ಮಂಡಿಸಿದ್ದಾರೆ. ಮೈಯೆಲ್ಲಾ ಕಣ್ಣಾಗಿರುವ ಬೇಹುಗಾರಿಕಾ ಸಂಸ್ಥೆ ಎಫ್‌ಬಿಐ ಮಂಂಡಿಸಿರುವ ಮಹತ್ವದ ವಿಚಾರಗಳು ಹೀಗಿವೆ...

  • ಒಸಾಮ ಏನಾದನೋ ಇನ್ನೂ ಗೊತ್ತಿಲ್ಲ. ಹಾಗಂತ ಸತ್ತಿದ್ದಾನೆಂದು ಸುಖಾಸುಮ್ಮನೆ ಅಂದುಕೊಳ್ಳುವುದು ತಪ್ಪು.
  • ಅಲ್‌ ಕ್ವೆ ೖದಾ ಸಂಘಟನೆಯ ತರಪೇತಿ ಕೇಂದ್ರಗಳು ಇನ್ನೂ ಕೆಲವೆಡೆ ಇರುವ ಸೂಚನೆಗಳಿವೆ. ಅವುಗಳ ತಲಾಷು ಮಾಡಬೇಕು.
  • ಸಂಘಟನೆಯಲ್ಲಿ ಕಂಪ್ಯೂಟರ್‌ ಹಾಗೂ ಇಂಟರ್ನೆಟ್‌ ಜಾಣರಿದ್ದಾರೆ. ಅವರು ಕಂಪ್ಯೂಟರ್‌ ಮೂಲಕವೇ ಹುನ್ನಾರಗಳನ್ನು ಹೆಣೆಯುವ ಆತಂಕವಿದೆ.
  • ಅಮೆರಿಕ ಮೇಲೆ ಯಾವುದೇ ಕ್ಷಣ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ. ಅದಕ್ಕೆ ಬೇಹುಗಾರಿಕಾ ಹಾಗೂ ರಕ್ಷಣಾ ದಳಗಳು ತೀವ್ರ ಜಾಗರೂಕತೆಯಿಂದ ಇರಬೇಕು.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X