• search

ದೇವನಹಳ್ಳಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಟಿಪ್ಪೂ ಸುಲ್ತಾನರ ಪ್ರತಿಮೆ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    Mysore Tiger Tippu Sultan(ವಿಶೇಷ ವರದಿ)

    ದೇವನಹಳ್ಳಿ : ಬೆಂಗಳೂರು ಮಹಾನಗರದಿಂದ 35 ಕಿ.ಮೀಟರ್‌ ದೂರದಲ್ಲಿರುವ ದೇವನಹಳ್ಳಿಯಲ್ಲಿ ಸ್ಥಾಪಿಸಲಾಗಿರುವ ಮೈಸೂರು ಹುಲಿ ಟಿಪ್ಪೂ ಸುಲ್ತಾರ ಪ್ರತಿಮೆ ಇಂದು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. 1997ರಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರು ಈ ಪ್ರತಿಮೆಯನ್ನು ಉದ್ಘಾಟಿಸಿದ್ದರು.

    ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ವೀರ, ದೇಶಪ್ರೇಮಿ ಟಿಪ್ಪೂ ಸುಲ್ತಾನರಿಗೆ ಮನ್ನಣೆ ನೀಡುವ ಸಲುವಾಗಿ 1997ರಲ್ಲಿ ದೇವನಹಳ್ಳಿ ವಿಜಯಪುರ - ಟಿಪ್ಪೂ ಉತ್ಸವ ಕಾಲದಲ್ಲಿ ಪ್ರತಿಮೆಯನ್ನು ಪ್ರತಿಷ್ಠಾಪಿಲಾಗಿತ್ತು. ಪ್ರತಿಷ್ಠಾಪನೆಯ ಬಳಿಕ, ಸರಕಾರ ಹಾಗೂ ಸಾರ್ವಜನಿಕರು ಟಿಪ್ಪೂ ಪ್ರತಿಮೆಯನ್ನು ಮರೆತೇ ಬಿಟ್ಟರು.

    ಸ್ಥಳೀಯ ಪುರಸಭೆ ಕೂಡ ಈ ಪ್ರತಿಮೆಯ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಪ್ರತಿಮೆ ಇರುವ ವಿಶಾಲ ಜಾಗದಲ್ಲಿ ಆವರಣ ಗೋಡೆ ಇಲ್ಲದಿರುವ ಕಾರಣ ಆ ಪ್ರದೇಶ ಮಲಿನಗೊಂಡಿದೆ. ಹಾದಿಹೋಕರ, ಪುಂಡಾಡಿಗಳ, ಜೂಜುಕೋರರ, ದನಕರುಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ.

    ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆಯೇ ಇರುವ ಈ ಸ್ಥಳವನ್ನು ಸ್ವಚ್ಛಗೊಳಿಸಿ, ಸುಂದರ ಉದ್ಯಾನವೊಂದನ್ನು ನಿರ್ಮಿಸಿದರೆ, ಕಲಾತ್ಮಕವಾದ ಕೋಟೆಯೂ ಇರುವ ದೇವನಹಳ್ಳಿಯನ್ನು ಒಂದು ಸುಪ್ರಸಿದ್ಧ ಪ್ರವಾಸಿ ತಾಣವಾಗಿ ಪರಿವರ್ತಿಸಬಹುದು ಎಂಬುದು ಇಲ್ಲಿನ ಕೆಲವು ನಾಗರಿಕರ ಅಳಲು. ಪ್ರತಿಮೆಗೆ ಧಕ್ಕೆಯಾಗುವ ಮೊದಲೇ ಸರಕಾರ ಎಚ್ಚೆತ್ತುಕೊಳ್ಳುತ್ತದೆಯೇ ಕಾದು ನೋಡಬೇಕು?

    ಪ್ರತಿಮೆಗಳನ್ನು ಪ್ರತಿಷ್ಠಾಪಿಸುವ ಸರಕಾರ ಅದನ್ನು ನಿರ್ಲಕ್ಷಿಸುವುದು ಸರಿಯೇ?

    (ಇನ್‌ಫೋ ವಾರ್ತೆ)

    ಕೋಟೆಯ ನೋಡಿಹಿರಾ, ದೇವನಹಳ್ಳಿ ಕೋಟೆಯ...

    ಮುಖಪುಟ / ನೋಡು ಬಾ ನಮ್ಮೂರ


    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more