• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಂಗಾರುಪೇಟೆಯಲ್ಲಿ ಹಿಂಸಾಚಾರ: ಅಲ್ಪಸಂಖ್ಯಾಕರ 50 ಅಂಗಡಿ ಭಸ್ಮ

By Staff
|

ಕೋಲಾರ : ಗೋಧ್ರಾದಲ್ಲಿ ರಾಮಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಿ, ಸಜೀವವಾಗಿ ಸುಟ್ಟ ಘಟನೆಯನ್ನು ಖಂಡಿಸಿ, ಬಂಗಾರುಪೇಟೆಯಲ್ಲಿ ಸೋಮವಾರ ನಡೆದ ಬಂದ್‌ ಹಾಗೂ ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಮೂವರು ಗಾಯಗೊಂಡಿದ್ದು, ತರಕಾರಿ ಮಾರುಕಟ್ಟೆಯ 50ಕ್ಕೂ ಹೆಚ್ಚು ಅಂಗಡಿಗಳು ಭಸ್ಮವಾಗಿವೆ.

ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಬಂಗಾರುಪೇಟೆಯಲ್ಲಿ ಸೋಮವಾರ ಬೆಳಗ್ಗಿನಿಂದಲೇ ಬಿಗುವಿನ ವಾತಾವರಣ ಇತ್ತು. ಬೆಳಗ್ಗೆ 10 ಗಂಟೆಗೆ ಕುವೆಂಪು ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾದಾಗ ಶಾಂತಿಯುತವಾಗಿದ್ದ ಸ್ಥಿತಿ ತಹಶೀಲ್ದಾರರಿಗೆ ಮನವಿ ಪತ್ರ ಅರ್ಪಿಸುವ ಕೊನೆಯ ಘಟ್ಟದಲ್ಲಿ ಕದಡಿತು.

ಮೆರವಣಿಗೆಯಿಂದ ಪ್ರತ್ಯೇಕಗೊಂಡ ದೊಡ್ಡ ಗುಂಪೊಂದು ಪಟ್ಟಣದ ಸೇಠ್‌ ಕಾಂಪೌಂಡ್‌ ಕಡೆಗೆ ಹೋಗಲು ಪ್ರಯತ್ನಿಸಿದಾಗ ಪೊಲೀಸರು ತಡೆದದ್ದೇ ಪರಿಸ್ಥಿತಿ ಕೈಮೀರಲು ಕಾರಣವಾಯಿತು. ಬಲವಂತವಾಗಿ ಒಳನುಗ್ಗಲು ಯತ್ನಿಸಿದ ಗುಂಪಿನ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು, ಈ ಘಟನೆಯಲ್ಲಿ ಇಬ್ಬರಿಗೆ ತೀವ್ರ ಸ್ವರೂಪದ ಗಾಯವಾಯಿತು.

ಇದರಿಂದ ರೊಚ್ಚಿಗೆದ್ದ ಗುಂಪು ಮಾದಯ್ಯ ರಸ್ತೆಯಲ್ಲಿರುವ ಹಣ್ಣು ಮತ್ತು ತರಕಾರಿ ಮಾರುಕಟ್ಟೆಗೆ ಬೆಂಕಿ ಹಚ್ಚಿತು. ಅಗ್ನಿಕಾಂಡದಲ್ಲಿ 50ಕ್ಕೂ ಹೆಚ್ಚು ಅಲ್ಪ ಸಂಖ್ಯಾಕರ ಅಂಗಡಿಗಳು ಸುಟ್ಟು ಭಸ್ಮವಾದವು. ಇದರಿಂದ ಹತ್ತು ಲಕ್ಷ ರುಪಾಯಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆಯಾದರೂ, ಮಾ.6ರವರೆಗೆ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ದೊಡ್ಡ ಬಳ್ಳಾಪುರ : ದೊಡ್ಡ ಬಳ್ಳಾಪುರದಲ್ಲಿ ಬಿಜೆಪಿ ಮತ್ತು ವಿಶ್ವಹಿಂದೂ ಪರಿಷತ್‌ ಕರೆ ನೀಡಿದ್ದ ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ. ಆದರೆ, ಕೆಲವು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದ ಪರಿಣಾಮವಾಗಿ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.

ಬಂದ್‌ ಹಿನ್ನೆಲೆಯಲ್ಲಿ ಪಟ್ಟಣದ ಶಾಲೆ-ಕಾಲೇಜು, ಹೊಟೆಲ್‌, ಸಿನಿಮಾ ಮಂದಿರ, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸಂಚಾರ ವಿರಳವಾಗಿತ್ತು. ಸಂಜೆಯವರೆಗೂ ಬೆಂಗಳೂರಿನಿಂದ ಗೌರಿಬಿದನೂರು ಮತ್ತು ಆಂಧ್ರದ ಕಡೆಗೆ ಹೋಗುವ ಬಸ್‌ಗಳು ಸಂಚರಿಸಲಿಲ್ಲ. ಗೋಧ್ರಾ ನರಮೇಧ ಖಂಡಿಸಿ ಭಾರೀ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಚಾಮರಾಜನಗರ ಯಳಂದೂರಿನಲ್ಲಿ ಸೋಮವಾರ ಬಂದ್‌ ಸಂಪೂರ್ಣ ಯಶಸ್ವಿಯಾಯಿತು. ಬಂದ್‌ ಶಾಂತಿಯುತವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more