• search

ವಿಶ್ವದ ಅತಿದೊಡ್ಡ ‘ರೋಪ್‌ ವೇ’ ತಿರುಪತಿಯಲ್ಲಿ ಸಾಕಾರಗೊಳ್ಳುತ್ತಿದೆ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    Lord Venkateshwaraಹೈದರಾಬಾದ್‌ : ಭಗವಂತನ ದರ್ಶನ ಸುಲಭವಾಗಿ ಎಲ್ಲರಿಗೂ ದಕ್ಕಿದರೆ ಹೇಗೆ? ಹೀಗಾಗಿ ನಮ್ಮ ಪೂರ್ವಿಕರು ದೇವರನ್ನು ಬೆಟ್ಟಗಳ ಮೇಲೆ, ಗಿರಿಪರ್ವತಗಳ ತುತ್ತ ತುದಿಯಲ್ಲಿ ಪ್ರತಿಷ್ಠಾಪಿಸುತ್ತಿದ್ದರು. ಋಷಿ ಮುನಿಗಳು ದೇವರನ್ನು ಕಾಣಲು ಕಠಿಣ ತಪಸ್ಸನ್ನು ಆಚರಿಸುವಾಗ, ಭಗವಂತನ ದರ್ಶನಕ್ಕೆ ಬರುವ ಭಕ್ತರು ಕೊಂಚವಾದರೂ ದೇಹ ದಂಡಿಸಲಿ ಎಂಬುದು ಅವರ ಉದ್ದೇಶವಾಗಿದ್ದಿರಬೇಕು.

    ಆದರೆ, ಈ ಹೊತ್ತು ವಿಜ್ಞಾನ - ತಂತ್ರಜ್ಞಾನ ಬೆಳೆದಂತೆ ಬೆಟ್ಟ, ಗುಡ್ಡ ಅಷ್ಟೇಕೆ ಹಿಮವತ್ಪರ್ವತದ ತುತ್ತತುದಿಯಲ್ಲಿರುವ ದೇವಾಲಯಕ್ಕೂ ಆಯಾಸವಿಲ್ಲದೆ ಹೋಗಿ ಬರುವ ಅವಕಾಶವಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕೂಡ ಬೆಟ್ಟ ಹತ್ತುವ ಅಗತ್ಯ ಇರುವುದಿಲ್ಲ.

    ಖಾಸಗಿ ಸಂಸ್ಥೆಯಾಂದು ವಿಶ್ವದಲ್ಲೇ ಅತ್ಯಂತ ಬೃಹತ್‌ ಆದ ‘ರೋಪ್‌ ವೇ’ಯನ್ನು ತಿರುಪತಿ-ತಿರುಮಲದಲ್ಲಿ ನಿರ್ಮಿಸುತ್ತಿದೆ. ವಾಸ್ತವವಾಗಿ ಈ ಯೋಜನೆಯ ಪರಿಕಲ್ಪನೆ ಮೂಡಿದ್ದು ಮುವತ್ತು ವರ್ಷಗಳ ಹಿಂದೆ. ಆದರೆ, ಇದು ಕಾರ್ಯಗತವಾಗುತ್ತಿರುವುದು ಈಗ.

    6 ಕಿಲೋ ಮೀಟರ್‌ಗಳ ಬೃಹತ್‌ ರೋಪ್‌ವೇ ಮಾರ್ಗ ನಿರ್ಮಾಣಕ್ಕೆ ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆ ತನ್ನ ತಾಂತ್ರಿಕ ಒಪ್ಪಿಗೆ ನೀಡಿದೆ. ಅತ್ಯಂತ ಪ್ರತಿಷ್ಠೆಯ ಈ ಯೋಜನೆಯನ್ನು ಬಾಲಾಜಿ ಪ್ರವಾಸೋದ್ಯಮ ಖಾಸಗಿ ಸಂಸ್ಥೆಯು ಆಸ್ಟ್ರಿಯಾದ ದೊಪ್ಪಾಲಿ ಮಾಯರ್‌ ಎಂಬ ಮತ್ತೊಂದು ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ನೂರು ಕೋಟಿ ರುಪಾಯಿ ವೆಚ್ಚದಲ್ಲಿ ರೋಪ್‌ವೇ ನಿರ್ಮಿಸುತ್ತಿದೆ.

    2002ರ ಮಾರ್ಚ್‌ ತಿಂಗಳಿನಲ್ಲೇ ಆರಂಭಗೊಳ್ಳಲಿರುವ ಈ ಯೋಜನೆ, ಮುಂದಿನ 18 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಈ ವಿಷಯವನ್ನು ಇಲಾಖೆಯ ವ್ಯವಸ್ಥಾಪಕ - ನಿರ್ದೇಶಕ ಸಿ. ಆಂಜನೇಯ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    (ಇನ್‌ಫೋವಾರ್ತೆ)

    ವಾರ್ತಾ ಸಂಚಯ

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more