ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕೇ ನಾಲ್ಕು : ಬಹುರೂಪಿ ಸುಮತೀಂದ್ರ ನಾಡಿಗರೊಂದಿಗೆ ಮಾತುಕತೆ

By Staff
|
Google Oneindia Kannada News

*ಹರ್ಷ ಹೆಗಡೆ

ಕನ್ನಡ ಸಾರಸ್ವತ ಲೋಕದಲ್ಲಿ ಸುಮತೀಂದ್ರ ನಾಡಿಗರದ್ದು ದೊಡ್ಡ ಹೆಸರು. ‘ ನಗಿಸುವ ನಾಡಿಗರು’ ಎಂದೇ ಹೆಸರಾಗಿರುವ ಅವರಿಗೆ ಈಗ 68 ರ ಸಂಭ್ರಮ. ಕಥೆ- ಕವಿತೆ-ವಿಮರ್ಶೆ-ಚುಟುಕು ಈ ಎಲ್ಲಾ ರಂಗದಲ್ಲೂ ಕೈಯಾಡಿಸಿರುವ ನಾಡಿಗ್‌ ಮಾತಿಗೆ ಶುರುವಿಟ್ಟರೆ ಕ್ಷಣಕ್ಕೊಂದು ನಗೆ ಚಟಾಕಿ.

1. ನೀವು ನಿಮ್ಮ ಸ್ನೇಹಿತರೆಲ್ಲರ ಪತ್ರಗಳನ್ನು 30-40 ವರ್ಷದಿಂದ ಇಟ್ಟುಕೊಂಡಿದ್ದೀರಿ ಯಾಕೆ?

ಪ್ರೀತಿಸಿದವರು ಪ್ರೀತಿಯ ಗುರುತಾಗಿ ಕಾಗದಗಳನ್ನು ಕಾಪಾಡಿಕೊಂಡು ಬರುತ್ತಾರಲ್ಲ ಹಾಗೆ, ನನ್ನ ಗೆಳೆಯರ ಸ್ನೇಹದ ಗುರುತಾಗಿ ಅವರ ಪತ್ರಗಳನ್ನು ಇಟ್ಟುಕೊಂಡಿದ್ದೇನೆ.

2. ಯುವ ಲೇಖಕರಿಗೆ ಏನು ಹೇಳುತ್ತೀರಿ?

ದೊಡ್ಡ ಲೇಖಕರನ್ನು ಓದಿ ಅವರು ಹೇಗೆ ಬೆಳೆದರು ಅಂತ ನೋಡಿ, ಅವರ ಹಾಗೆ ಬೆಳೆಯಬೇಕೇ ಹೊರತು, ಅವರ ಶೈಲಿಯನ್ನು ಅನುಕರಿಸಬಾರದು. ನಮ್ಮ ಕಾಲದಲ್ಲಿ ಯಾರು ದೊಡ್ಡ ಲೇಖಕರು ಅಂತ ಪ್ರಸಿದ್ಧರಾಗಿದ್ದರೋ, ಅವರನ್ನು ಕುವೆಂಪು, ಕಾರಂತ, ಮಾಸ್ತಿ , ಬೇಂದ್ರೆ ಮತ್ತು ಅಡಿಗರ ಜೊತೆಗೆ ಹೋಲಿಸಿ ನೋಡಬೇಕು.

3. ಬೆಂಗಳೂರಿನ ಬಗ್ಗೆ ಏನು ಹೇಳುತ್ತೀರಿ?

ಸುಮಾರು 50 ವರ್ಷದ ಹಿಂದೆ ನಾನು ಬಂದಾಗ ಆದರ್ಶ ನಗರವಾಗಿತ್ತು . ನಾನು ಶೇಷಾದ್ರಿಪುರಂನಿಂದ ಜಯನಗರಕ್ಕೆ ನಡೆದುಕೊಂಡು ಹೋಗಿ ಬರುತ್ತಿದ್ದೆ . ಇವತ್ತು ಅರ್ಧ ಮೈಲಿಯೂ ನಡೆಯಲಿಕ್ಕೆ ಬಿಡದಷ್ಟು ವಾಹನ ಸಂಚಾರ ಹೆಚ್ಚಾಗಿದೆ. ಯಾರಿಗೆ ಹೇಳೋದು ?

4. ಸಾಹಿತ್ಯ ಸಮ್ಮೇಳನಗಳ ಬಗ್ಗೆ ನಿಮಗೆ ಏನನ್ನಿಸುತ್ತೆ ?

ಮೂವತ್ತು ವರ್ಷಗಳ ಹಿಂದೆ ಒಂದೆರಡು ಸಮ್ಮೇಳನಗಳಿಗೆ ಹೋಗಿದ್ದೆ . ಆಗ ಸಾಹಿತ್ಯದಲ್ಲಿ ಆಸಕ್ತಿಯಿದ್ದ ಜನರಿದ್ದರು. ತುಂಬಾ ಓದಿದ ವ್ಯಕ್ತಿಗಳಿದ್ದರು. ಪ್ರತಿಭಾವಂತರಿದ್ದರು. ಅದಕ್ಕೊಂದು ಗಾಂಭೀರ್ಯ ಇತ್ತು . ಹೊಸ ವಿಷಯಗಳನ್ನು ಹೇಳುವವರಿದ್ದರು. ಆದರೆ ಈಗ...

(ವಿಜಯ ಕರ್ನಾಟಕ)

ವಾರ್ತಾ ಸಂಚಯ
ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X