ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ ಪರಿಸ್ಥಿತಿ ತಿಳಿ : ಈವರೆಗೆ ಸತ್ತವರ ಸಂಖ್ಯೆ ಅಧಿಕೃತವಾಗಿ 432

By Staff
|
Google Oneindia Kannada News

ಅಹ್ಮದಾಬಾದ್‌ : ಹಿಂದೂ- ಮುಸ್ಲಿಂ ಘರ್ಷಣೆಯಲ್ಲಿ 432, ಪೊಲೀಸ್‌ ದಾಳಿಯಲ್ಲಿ 91 ಮಂದಿ ಹತರಾದ ನಂತರ ಸೋಮವಾರ ಗುಜರಾತ್‌ ರಾಜ್ಯ ತಣ್ಣಗಾಗಿದೆ. ಇದು ರಾಜ್ಯಭಾರ ಮಾಡುವವರು ನೀಡಿರುವ ವರದಿ. ಪ್ರಕೃತಿ ವಿಕೋಪ, ಗಲಭೆಗಳಲ್ಲಿ ಸತ್ತವರ ಲೆಕ್ಕ ಇಡಬಾರದು!

ಫೆಬ್ರವರಿ 27ರಂದು ಗೋದ್ರಾದಲ್ಲಿ ಸಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟು, 58 ಪ್ರಯಾಣಿಕರು ಸತ್ತ ನಂತರ ಭುಗಿಲೆದ್ದ ಗಲಭೆಯಿಂದ ಈವರೆಗೆ ಅಹ್ಮದಾಬಾದ್‌ನಲ್ಲೇ 198 ಮಂದಿ ಸತ್ತಿದ್ದಾರೆ. ಈ ಪೈಕಿ ಪೊಲೀಸ್‌ ಗುಂಡೇಟಿಗೆ ಸತ್ತವರು 30. ಐದು ದಿನಗಳ ಗಲಭೆಗಳಿಂದ ತತ್ತರಿಸಿದ್ದ ಗುಜರಾತ್‌ ಪರಿಸ್ಥಿತಿ ಈಗ ಸಾಕಷ್ಟು ತಿಳಿ. ಆದರೆ, ಗಲಭೆ ನಂತರದ ಮೌನ ದಟ್ಟ.

ಅಹ್ಮದಾಬಾದ್‌ನ 9 ಪ್ರದೇಶಗಳಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ಸಂಪೂರ್ಣ ತೆರವು. 4 ಜಾಗೆಗಳಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕರ್ಫ್ಯೂ ಅವಧಿಯಲ್ಲಿ ಸಡಿಲಿಕೆ. 7 ಪ್ರದೇಶಗಳಲ್ಲಿ ಬೆಳಗ್ಗೆ ಒಂಬತ್ತು ಗಂಟೆಯಿಂದ ಏಳು ತಾಸು ಹೆಂಗಸರು ಮತ್ತು ಮಕ್ಕಳಿಗೆ ಮಾತ್ರ ಅಡ್ಡಾಡುವ ಅವಕಾಶ. ಓಧವ್‌ ಮತ್ತು ಮೆಘಾನಿನಗರ್‌ ಪ್ರದೇಶಗಳಲ್ಲಿ ಮಾತ್ರ ದಿನ ಪೂರ್ತಿ ಕರ್ಫ್ಯೂ ಜಾರಿ.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X