ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಟೆಸ್ಟ್‌ : ಉಸ್ಸಪ್ಪಾ ಅನ್ನುವಂಥಾ ಪಂದ್ಯದಲ್ಲಿ ಭಾರತಕ್ಕೆ ಕೊನೆಗೂ ಜಯ!

By Staff
|
Google Oneindia Kannada News

ನವದೆಹಲಿ : ಚೆಂಡಿನ ತಿರುಗುವಿಕೆ ಅತಿಯಾಗಿದ್ದ ಫಿರೋಜ್‌ ಷಾ ಕೋಟ್ಲ ಮೈದಾನದಲ್ಲಿ ಜಿಂಬಾಬ್ವೆ ವಿರುದ್ಧದ ಎರಡನೇ ಹಾಗೂ ಅಂತಿಮ ಕ್ರಿಕೆಟ್‌ ಟೆಸ್ಟ್‌ನಲ್ಲಿ ಭಾರತ ಕಷ್ಟಪಟ್ಟು ಗೆದ್ದಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಸೇರಿದಂತೆ ಪಂದ್ಯದಲ್ಲಿ 8 ವಿಕೆಟ್‌ ಪಡೆದ ಹಾಗ ಗೆಲುವಿಗೆ ಕಾರಣರಾದ ಹರ್ಭಜನ್‌ ಸಿಂಗ್‌ ಪಂದ್ಯ ಪುರುಷೋತ್ತಮರಾದರು. ಸರಣಿಯಲ್ಲಿ ಒಟ್ಟು 16 ವಿಕೆಟ್‌ ಪಡೆದು, ಬ್ಯಾಟಿಂಗ್‌ ಕೂಡ ಚೆನ್ನಾಗಿ ಮಾಡಿದ ಅನಿಲ್‌ ಕುಂಬ್ಳೆಗೆ ಸರಣಿ ಶ್ರೇಷ್ಠ ಗೌರವ ಸಂದಿತು.

ಪಂದ್ಯದ ಅಂತಿಮ ದಿನವಾದ ಸೋಮವಾರ ಭಾರತ 122 ರನ್‌ಗಳ ಗುರಿಯನ್ನು ಮುಟ್ಟಲು ತಡಕಾಡಿತು. ನಾಲ್ಕನೇ ವಿಕೆಟ್‌ಗೆ ಸಚಿನ್‌ ಹಾಗೂ ಶಿವಸುಂದರ್‌ ದಾಸ್‌ 57 ರನ್‌ಗಳನ್ನು ಕಲೆ ಹಾಕದಿದ್ದಲ್ಲಿ ಈ ಗೆಲುವು ಅಸಾಧ್ಯವಾಗುವ ಸಾಧ್ಯತೆಯಿತ್ತು. ಭಾರತದ ನಾಲ್ಕನೇ ವಿಕೆಟ್‌ ಬಿದ್ದದ್ದು 93 ರನ್‌ಗಳಿಗೆ; ಅದೂ ಸಚಿನ್‌ ಅವರದ್ದು. ನಾಲ್ಕನೇ ವಿಕೆಟ್‌ನ ಜೊತೆಯಾಟದಲ್ಲಿ 42 ರನ್‌ಗಳ ಕಾಣಿಕೆಯಿತ್ತಿದ್ದ ಸಚಿನ್‌ ಬಿರುಸಾಗಿಯೇ ಆಡಿದರೂ, ಪ್ರೆೃಸ್‌ ಎಸೆತಗಳಿಗೆ ದಿಟ್ಟ ಉತ್ತರ ಕೊಡಲಾಗಲಿಲ್ಲ. ಮೊದಲ ಇನ್ನಿಂಗ್ಸ್‌ನಂತೆಯೇ ಎರಡನೇ ಇನ್ನಿಂಗ್ಸ್‌ನಲ್ಲೂ ಸಚಿನ್‌ ಪ್ರೆೃಸ್‌ ಎಸೆತಕ್ಕೆ ಎಲ್‌ಬಿಡಬ್ಲ್ಯು ಔಟ್‌ ಆದರು.

ನಂತರ ಬಂದ ದ್ರಾವಿಡ್‌ ಗಳಿಸಿದ್ದು ಕೇವಲ 6 ರನ್‌. ಎಸ್‌.ಎಸ್‌.ದಾಸ್‌(31) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. 105 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿದ್ದ ಭಾರತ, ಗೆಲುವಿನ ಬಾಗಿಲ ಬಳಿ ಎಡರುವ ಸೂಚನೆ ಕಂಡುಬಂತು. ಆಗ ಬಂದ ಹರ್ಭಜನ್‌ ಸಿಂಗ್‌(14 ನಾಟೌಟ್‌), ಬಂಗಾರ್‌(3 ನಾಟೌಟ್‌) ಜೊತೆ ಸೇರಿ ಸಿಕ್ಸರ್‌ ಹೊಡೆಯುವ ಮೂಲಕ ಗೆಲುವನ್ನು ತಂದಿತ್ತರು.

ನಾಲ್ಕನೇ ದಿನದಾಟದಲ್ಲಿ ಎಡಗೈಗೆ ಪೆಟ್ಟು ಮಾಡಿಕೊಂಡಿರುವ ವೀರೇಂದ್ರ ಷೆವಾಗ್‌ಗೆ ದೀರ್ಘ ಕಾಲದ ವಿಶ್ರಾಂತಿ ಬೇಕಿದ್ದು, ಅವರು ಜಿಂಬಾಬ್ವೆ ವಿರುದ್ಧದ ಒಂದು ದಿನದ ಸರಣಿಯಲ್ಲಿ ಆಡುವುದು ಅನುಮಾನ.

ಸಂಕ್ಷಿಪ್ತ ಸ್ಕೋರು
ಜಿಂಬಾಬ್ವೆ: ಮೊದಲ ಇನ್ನಿಂಗ್ಸ್‌ - 329. ಎರಡನೇ ಇನ್ನಿಂಗ್ಸ್‌- 146
ಭಾರತ : ಮೊದಲ ಇನ್ನಿಂಗ್ಸ್‌- 354, ಎರಡನೇ ಇನ್ನಿಂಗ್ಸ್‌ - 6 ವಿಕೆಟ್‌ ನಷ್ಟಕ್ಕೆ 126

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X