ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿಕೇರಿ ಕಾಡಲ್ಲಿ ಕಾಳ್ಗಿಚ್ಚು ,ಅಗ್ನಿಶಾಮಕ ದಳ ವೈಫಲ್ಯಕ್ಕೆ ನಾಗರಿಕರ ರೊಚ್ಚು

By Staff
|
Google Oneindia Kannada News

ಮಡಿಕೇರಿ: ಜಿಲ್ಲೆಯ ಕುಶಾಲನಗರ ಮತ್ತು ಮಡಿಕೇರಿ ತಾಲ್ಲೂಕುಗಳ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ಹತ್ತಿಕೊಂಡಿದ್ದು, ಬೆಂಕಿ ಆರಿಸಲು ಅಗ್ನಿ ಶಾಮಕ ದಳ ಹೆಣಗುತ್ತಿದೆ.

ಮಡಿಕೇರಿಯ ವೆಲ್‌ಕಂ ಹಿಲ್‌ನಲ್ಲಿ ಮಂಗಳವಾರ ಹೊತ್ತಿಕೊಂಡ ಕಾಳ್ಗಿಚ್ಚು ಇತರ ಕಾಡುಗಳಿಗೂ ಹಬ್ಬಲಾರಂಭಿಸಿತು. ಹತ್ತಿರದ ಜನರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ, ಬೆಂಕಿ ಹ್ಚೆಚುತ್ತಿರುವುದನ್ನು ಕಂಡು ಅಗ್ನಿ ಶಾಮಕ ದಳವನ್ನು ಕರೆಸಿದಾಗ್ಯೂ ಹೊತ್ತಿ ಉರಿಯುತ್ತಿರುವ ಕಿಚ್ಚನ್ನು ನಂದಿಸುವುದು ಸಾಧ್ಯವಾಗಲಿಲ್ಲ .

ಅಗ್ನಿ ಶಾಮಕ ದಳದವರು ಬೆಂಕಿ ನಿಯಂತ್ರಿಸಲು ವಿಫಲ ಯತ್ನ ನಡೆಸುತ್ತಿರುವುದನ್ನು ಕಂಡ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಾಕಷ್ಟು ಮಂದಿ ನೌಕರರು ಲಭ್ಯರಿಲ್ಲದ ಕಾರಣ ಬೆಂಕಿ ನಂದಿಸುವುದು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳಿದ್ದಾರೆ.

ಬೆಂಕಿ ನಂದಿಸಲು ನೀರು ಸರಬರಾಜು ಮಾಡಲು ಸಾಕಷ್ಟು ವಾಹನಗಳ ಕೊರತೆ ಎದುರಾಗಿದೆ. ಈ ನಡುವೆ ಕಾಳ್ಗಿಚ್ಚು ಇತರ ಅರಣ್ಯಗಳನ್ನೂ ಆಕ್ರಮಿಸುತ್ತಿದ್ದು, ಕುಶಾಲನಗರದ ಆನೆಕಾಡು ರಕ್ಷಿತ ಅರಣ್ಯ ಪ್ರದೇಶದಲ್ಲೂ ಸಣ್ಣ ಪ್ರಮಾಣದಲ್ಲಿ ಬೆಂಕಿ ಹತ್ತಿಕೊಂಡಿದೆ. ಕಾಳ್ಗಿಚ್ಚಿನಿಂದಾಗಿ ವನ್ಯ ಜೀವಿಗಳು ಜೀವಭಯ ಎದುರಿಸುತ್ತಿವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X