ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶೀಮಠಕ್ಕೆ ಯೋಗ್ಯ ಶಿಷ್ಯರ ಆಯ್ಕೆಗೆ ಜಿಎಸ್‌ಬಿ ಬಾಂಧವರ ಮೊರೆ

By Staff
|
Google Oneindia Kannada News

ಮಂಗಳೂರು: ಕಾಶೀ ಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಅವರ ಶಿಷ್ಯರ ನಡುವೆ ನಡೆಯುತ್ತಿರುವ ಹಣಾಹಣಿಯಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಇಕ್ಕಟ್ಟನ್ನು ನಿವಾರಿಸಲು ತಮ್ಮ ಪಟ್ಟಕ್ಕೆ ಸರಿಯಾದ ಯೋಗ್ಯ ಶಿಷ್ಯರೊಬ್ಬರನ್ನು ಸ್ವಾಮೀಜಿಗಳು ಘೋಷಿಸಬೇಕು ಎಂದು ಅಖಿಲ ಭಾರತ ಜಿಎಸ್‌ಬಿ ಸಮಾವೇಶ, ಕಾಶೀ ಸ್ವಾಮೀಜಿಗಳನ್ನು ಆಗ್ರಹಿಸಿದೆ.

ಮಂಗಳವಾರ ಸಂಜೆ ಸಂಘ ನಿಕೇತನದಲ್ಲಿ ಮುಕ್ತಾಯಗೊಂಡ ಸಮಾವೇಶದಲ್ಲಿ ಐದು ಸಾವಿರಕ್ಕೂ ಹೆಚ್ಚು ಮಂದಿ ಜಿಎಸ್‌ಬಿ ಬಾಂಧವರು ಭಾಗವಹಿಸಿದ್ದರು. ಮಣಿಪಾಲ ಸಮೂಹಗಳ ಅಧ್ಯಕ್ಷ ಕೆ.ಕೆ. ಪೈ, ಶಾಸಕ ಎನ್‌. ಯೋಗೀಶ್‌ ಭಟ್‌, ಭದ್ರಗಿರಿ ಅಚ್ಯುತದಾಸ್‌ ಮತ್ತಿತರ ಗಣ್ಯರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಮೂರ್ನಾಲ್ಕು ವರ್ಷಗಳಲ್ಲಿ ಜಿಎಸ್‌ಬಿ ಸಮಾಜದಲ್ಲಿರುವ ಒಗ್ಗಟ್ಟು ಕಳೆದುಹೋಗುತ್ತಿದೆ. ಈ ಬಗ್ಗೆ ಸ್ವಾಮೀಜಿಗಳು ಗಮನ ಹರಿಸಿ ಪರಿಹಾರ ಸೂಚಿಸಬೇಕು ಎಂದು ಸಮಾವೇಶದಲ್ಲಿ ಒಮ್ಮತದ ಆಗ್ರಹವನ್ನು ಮಂಡಿಸಲಾಯಿತು. ಜಗಳಗಳೇನಿದ್ದರೂ ನ್ಯಾಯಲಯದ ಹೊರಗೇ ಇತ್ಯರ್ಥವಾಗುವಂತೆ ನೋಡಿಕೊಳ್ಳಬೇಕು ಎಂದು ಕೆ.ಕೆ. ಪೈ ಕರೆ ನೀಡಿದರು.

ಉದ್ವಿಗ್ನತೆಯಿಂದ ಸಣ್ಣ ಪುಟ್ಟ ಸಮಸ್ಯೆಗಳನ್ನು ಮತ್ತಷ್ಟು ಹದಗೆಡಿಸುವುದು ಸಲ್ಲದೆಂದು ಶಾಸಕ ಯೋಗೀಶ್‌ ಭಟ್‌ ಹೇಳಿದರು. ಇಂದು ರಾಷ್ಟ್ರದ ಏಳು ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಖ್ಯಸ್ಥರರು ಜಿಎಸ್‌ಬಿ ಸಮಾಜದವರಾಗಿದ್ದಾರೆ. ಉದ್ಯಮ ಕ್ಷೇತ್ರದಲ್ಲಿನ ಸಾರ್ವಭೌಮತ್ವವನ್ನು ಸಾಮರಸ್ಯದಿಂದ ಉಳಿಸಿಕೊಳ್ಳಬೇಕು ಎಂದು ಉದ್ಯಮಿ ದಯಾನಂದ ಪೈ ಕರೆ ನೀಡಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X