• search
For Quick Alerts
ALLOW NOTIFICATIONS  
For Daily Alerts

    ಮಾ.1ರಂದು ನವೀಕರಣಗೊಂಡ ಸೆಂಟ್ರಲ್‌ ಕಾಲೇಜು ನಾಡಿಗರ್ಪಣೆ

    By Staff
    |

    ಬೆಂಗಳೂರು : ಭವ್ಯ ಪರಂಪರೆಯ, ಸಿರಿವಂತ ವಾಸ್ತುಶಿಲ್ಪದ ಪುರಾತನ ಕಟ್ಟಡಗಳು - ಸ್ಮಾರಕಗಳು ಬೆಂಗಳೂರಿನಲ್ಲಿ ಬಹಳಷ್ಟಿವೆ. ಇಂತಹ ಭವ್ಯ ಪರಂಪರೆಯ ಕಟ್ಟಡಗಳ ಪೈಕಿ ಸೆಂಟ್ರಲ್‌ ಕಾಲೇಜು ಕಟ್ಟಡವೂ ಒಂದು. 18ನೆಯ ಶತಮಾನದ ಈ ಕಟ್ಟಡ ಇಂದು ಮತ್ತೆ ತನ್ನ ಹಿಂದಿನ ವೈಭವವನ್ನು ಪಡೆದುಕೊಂಡಿದೆ.

    ಮೂಲ ಸೌಂದರ್ಯಕ್ಕೆ ಚ್ಯುತಿಯಾಗದ ರೀತಿಯಲ್ಲಿ ನವೀಕರಣಗೊಂಡು, ಸುಣ್ಣ-ಬಣ್ಣಗಳಿಂದ ಕಂಗೊಳಿಸುತ್ತಿದೆ. ಶಿಥಿಲಾವಸ್ಥೆಯ ಅಂಚಿನಲ್ಲಿದ್ದ ಈ ಪಾರಂಪರಿಕ ಕಟ್ಟಡವನ್ನು ಮೂರು ಕೋಟಿ ರುಪಾಯಿಗಳ ವೆಚ್ಚದಲ್ಲಿ ಮೂಲಸ್ವರೂಪ, ವಾಸ್ತು ವಿನ್ಯಾಸ - ವೈಭವಕ್ಕೆ ಕಿಂಚಿತ್ತೂ ಚ್ಯುತಿ ಬಾರದ ರೀತಿಯಲ್ಲಿ ನವೀಕರಣ ಮಾಡಲಾಗಿದೆ.

    ಸೆಂಟ್ರಲ್‌ ಕಾಲೇಜು : ಸುಂದರ ಹಾಗೂ ಭವ್ಯ ವಾಸ್ತು ವೈಭವದ ಈ ಕಟ್ಟಡ ನಿರ್ಮಾಣವಾದದ್ದು 1858ರಲ್ಲಿ. ಆನಂತರ ಕಟ್ಟಡ 1906ರಲ್ಲಿ ಮದ್ರಾಸ್‌ ವಿಶ್ವವಿದ್ಯಾಲಯದ ಅಧೀನ ಕಾಲೇಜುಗಳ ಪೈಕಿ ಒಂದಾಗಿತ್ತು. ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾದ ಬಳಿಕ 1916ರಲ್ಲಿ ಈ ಕಟ್ಟಡ ಅದರ ಅಧೀನಕ್ಕೆ ಬಂತು.

    1964ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬಂದ ಕಟ್ಟಡದಲ್ಲಿ ಹಲವು ಹಾಗೂ ಪ್ರಮುಖ ಸ್ನಾತಕೋತ್ತರ ವಿಭಾಗಗಳು ತಲೆ ಎತ್ತಿದವು. 1973ರಲ್ಲಿ ಬೆಂಗಳೂರು-ಮೈಸೂರು ರಸ್ತೆಯ ಕೆಂಗೇರಿಯ ಬಳಿಯ ಜ್ಞಾನಭಾರತಿ ಸಮುಚ್ಚಯಕ್ಕೆ ವಿ.ವಿ. ಸ್ಥಳಾಂತರಗೊಂಡ ಬಳಿಕವೂ ಸೆಂಟ್ರಲ್‌ಕಾಲೇಜು ಕಟ್ಟಡದಲ್ಲಿ ಹಲವು ಸ್ನಾತಕೋತ್ತರ ವಿಭಾಗಗಳು ಹಾಗೂ ವಿ.ವಿ.ಯ ಆಡಳಿತ ಕಚೇರಿಗಳು ಕಾರ್ಯನಿರ್ವಹಿಸಿದವು. ಈಗಲೂ ನಿರ್ವಹಿಸುತ್ತಿವೆ.

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more