• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಕ್ಷಣ ತಜ್ಞ ಎಚ್ಚೆನ್‌ ಸೇರಿದಂತೆ ಮೂವರಿಗೆ ಸರ್‌ ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ

By Staff
|

ಬೆಂಗಳೂರು : ವಿದ್ಯಾರ್ಥಿಗಳಲ್ಲಿ ವಿಜ್ಞಾನ ಜಾಗೃತಿ ಮೂಡಿಸಿರುವ ಶಿಕ್ಷಣ ತಜ್ಞ ಎಚ್‌.ನರಸಿಂಹಯ್ಯ ಸೇರಿದಂತೆ ಮೂವರು ವಿಜ್ಞಾನಿಗಳಿಗೆ 1999ನೇ ಇಸವಿಯ ಸರ್‌.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಯುವ ವಿಜ್ಞಾನಿಗಳಿಗೆ ಕೊಡುವ ಸರ್‌ ಸಿ.ವಿ.ರಾಮನ್‌ ಪ್ರಶಸ್ತಿಗೆ 14 ಮಂದಿಯನ್ನು ಆರಿಸಲಾಗಿದೆ. ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಕ್ಷೇತ್ರದ ಡಾ.ಆರ್ಕಾಟ್‌ ರಾಮಚಂದ್ರನ್‌ ಹಾಗೂ ಗಣಿತ ವಿಜ್ಞಾನಿ ಡಾ.ಕೆ.ವೆಂಕಟಾಚಲಯ್ಯಂಗಾರ್‌ ಸರ್‌.ಎಂ.ವಿ ಪ್ರಶಸ್ತಿಗೆ ಆಯ್ಕೆಯಾಗಿರುವ ಇತರ ಇಬ್ಬರು. ಭೌತಶಾಸ್ತ್ರ ವಿಜ್ಞಾನವನ್ನು ಜನಪ್ರಿಯಗೊಳಿಸಿರುವುದಕ್ಕಾಗಿ ಎಚ್ಚೆನ್‌ ಅವರಿಗೆ ಈ ಪ್ರಶಸ್ತಿ ಸಲ್ಲಲಿದೆ. ತಮ್ಮ ಸಂಶೋಧನೆಯನ್ನು ಸರ್‌.ಸಿ.ವಿ.ರಾಮನ್‌ ಜಗತ್ತಿಗೆ ತಿಳಿಸಿದ ದಿನ, ಫೆ.28ರಂದು ಟಾಟಾ ಸಭಾಂಗಣದಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪ್ರಶಸ್ತಿ ಪ್ರದಾನ ಮಾಡುವರು ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯದರ್ಶಿ ಪ್ರೊ.ಡಿ.ಕೆ.ಸುಬ್ರಮಣಿಯನ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಆರ್‌.ನರಸಿಂಹ ನೇತೃತ್ವದ ಸಮಿತಿ ಅನೇಕ ವಿಜ್ಞಾನಿಗಳ ಸಾಧನೆಯನ್ನು ಒರೆಗೆ ಹಚ್ಚಿ, ಈ ಪೈಕಿ ಮೂವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಸರ್‌.ಎಂ.ವಿ. ಪ್ರಶಸ್ತಿಯು 50 ಸಾವಿರ ರುಪಾಯಿ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಸರ್‌ ಸಿ.ವಿ.ರಾಮನ್‌ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರತಿಯಾಬ್ಬರಿಗೂ 25 ಸಾವಿರ ರುಪಾಯಿ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ಸರ್‌.ಎಂ.ವಿ.ಪ್ರಶಸ್ತಿಗೆ ಆಯ್ಕೆಯಾಗಿರುವವ ಸಾಧನೆಯ ಹಾದಿ...

ಎಚ್‌.ನರಸಿಂಹಯ್ಯ : 1962ರಲ್ಲಿ ಬೆಂಗಳೂರು ಸೈನ್ಸ್‌ ಫೋರಂ ಹುಟ್ಟುಹಾಕಿದ ಎಚ್‌.ನರಸಿಂಹಯ್ಯ ವಿಜ್ಞಾನವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ 1700 ಉಪನ್ಯಾಸಗಳನ್ನು ಆಯೋಜಿಸಿದರು. 500ಕ್ಕೂ ಹೆಚ್ಚು ವೈಜ್ಞಾನಿಕ ಚಿತ್ರಗಳನ್ನು ಪ್ರದರ್ಶಿಸಿದರು. ಪ್ರತಿವರ್ಷ ಜುಲೈ ತಿಂಗಳಲ್ಲಿ ಒಂದು ವಿಶೇಷ ಉಪನ್ಯಾಸ ಗ್ಯಾರಂಟಿ. ಇದನ್ನು 23 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.
ಬೆಂಗಳೂರಿನ ನ್ಯಾಷನಲ್‌ ಕಾಲೇಜಿನ ಪ್ರೊಫೆಸರ್‌, ಬೆಂಗಳೂರು ವಿವಿ ಉಪ ಕುಲಪತಿ, ವಿದೇಶೀ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸಿರುವ ಎಚ್ಚೆನ್‌ ಪವಾಡ ವಿರೋಧಿ ವಾದಿ. ಜ್ಯೋತಿಷ್ಯ ಶಾಸ್ತ್ರ ಅವೈಜ್ಞಾನಿಕ ಎಂದು ನಿಖರವಾಗಿ ಪ್ರತಿಪಾದಿಸಿರುವ ಎಚ್ಚೆನ್‌ ಮಾತುಗಳು ವೈಜ್ಞಾನಿಕ ನೆಲೆಗಟ್ಟಿನವು.

ಅಯ್ಯಂಗಾರ್‌ ಹಾಗೂ ಆರ್ಕಾಟ್‌ : ರೇಖಾ ಗಣಿತದ ನಿಯಮಗಳನ್ನು ಬೋಧಿಸುವ ಉಪಕರಣಗಳ ಮಾದರಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ರಚಿಸಿದ ಪ್ರಥಮರು, ಸರ್‌.ಎಂ.ವಿ. ಪ್ರಶಸ್ತಿಗೆ ಆಯ್ಕೆಯಾಗಿರುವ ಇನ್ನೊಬ್ಬ ವಿಜ್ಞಾನಿ ಡಾ.ಕೆ.ವೆಂಕಟಾಚಲಯ್ಯಂಗಾರ್‌. ಅನೇಕ ವೈಜ್ಞಾನಿಕ ಕೇಂದ್ರಗಳನ್ನು ಸ್ಥಾಪಿಸುವುದರ ಮೂಲಕ ಸಂಶೋಧನೆಯಲ್ಲಿ ಸದಾ ತೊಡಗಿಸಿಕೊಂಡಿ, ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಬುಟ್ಟಿಗೆ ಹಾಕಿಕೊಂಡಿರುವವರು ಡಾ.ಆರ್ಕಾಟ್‌ ರಾಮಚಂದ್ರನ್‌.

ಸರ್‌ ಸಿ.ವಿ.ರಾಮನ್‌ ಪ್ರಶಸ್ತಿಗೆ ಆಯ್ಕೆಯಾದವರು...
ಡಾ.ಜೋಸೆಫ್‌ ಸ್ಯಾಮ್ಯುಯಲ್‌ (ಭೌತಶಾಸ್ತ್ರ), ಡಾ.ಜಿ.ಯು. ಕುಲಕರ್ಣಿ (ರಸಾಯನ ವಿಜ್ಞಾನ), ಡಾ.ಸಿದ್ಧರಾಮಯ್ಯ (ರಾಸಾಯನಿಕ ತಂತ್ರಜ್ಞಾನ), ಡಾ.ಡಿ.ನರಸಿಂಹರಾವ್‌ (ಜೀವ ವಿಜ್ಞಾನ), ಡಾ.ಜಿ.ಆರ್‌.ಕಾಂತರಾಜ್‌ (ವೈದ್ಯಕೀಯ ವಿಜ್ಞಾನ), ಸಂಜಯ್‌ ಬರ್ಮನ್‌ (ಸಂವಹನ ಎಂಜಿನಿಯರಿಂಗ್‌), ಡಾ.ಪಿ.ಎಸ್‌.ಶಾಸ್ತ್ರಿ (ಕಂಪ್ಯೂಟರ್‌ ವಿಜ್ಞಾನ), ಬಿ.ಎಸ್‌.ಚಂದ್ರಶೇಖರ್‌ (ಕಂಪ್ಯೂಟರ್‌ ತಂತ್ರಜ್ಞಾನ), ಪ್ರೊ.ಸಿ.ಎಸ್‌.ಮನೋಹರ್‌ (ಸಿವಿಲ್‌ ಎಂಜಿನಿಯರಿಂಗ್‌), ಡಾ.ಎಂ.ಜಯಾನಂದ (ಭೂಗರ್ಭಶಾಸ್ತ್ರ), ಡಾ.ಶೀಲಾ ಕೆ. ರಾಮಶೇಷ (ವಸ್ತು ವಿಜ್ಞಾನ), ಪ್ರೊ.ಜಯವಂತ ಹೆಚ್‌.ಅರಕೇರಿ (ಮೆಕ್ಯಾನಿಕಲ್‌ ಎಂಜಿನಿಯರಿಂಗ್‌), ರಾಕೇಶ್‌ ಮೋಹನ್‌ ಝಾ (ವೈಮಾನಿಕ ಎಂಜಿನಿಯರಿಂಗ್‌), ಡಾ.ಬಸವರಾಜ ಎಂ.ಖಡಿ (ಕೃಷಿ ವಿಜ್ಞಾನ).

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more