ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋದಿಂದ ಬೆಂಗಳೂರಿನ ಮೇಷ್ಟ್ರುಗಳಿಗೆ ಕಂಪ್ಯೂಟರ್‌ ಸೃಜನಶೀಲತೆಯ ಪಾಠ

By Staff
|
Google Oneindia Kannada News

ಬೆಂಗಳೂರು : ನಗರದ ಪ್ರತಿಷ್ಠಿತ ಶಾಲೆಗಳ 118 ಅಧ್ಯಾಪಕ(ಕಿ)ರಿಗೆ ಕಂಪ್ಯೂಟರ್‌ ಸಾಫ್ಟ್‌ವೇರ್‌ ಕಂಪನಿ ವಿಪ್ರೋ ಕಂಪ್ಯೂಟರ್‌ ಸೃಜನಶೀಲತೆಯ ಪಾಠ ಹೇಳುತ್ತಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಕಂಪನಿ ಪ್ರಾರಂಭಿಸಿದ ‘ವಿಪ್ರೋ ಅಪ್ಲೈಯಿಂಗ್‌ ಥಾಟ್‌ ಇನ್‌ ಸ್ಕೂಲ್ಸ್‌ ’ ಕಾರ್ಯಕ್ರಮದ ಮುಂದುವರೆದ ಭಾಗವಿದು. ವಿದ್ಯಾರ್ಥಿಗಳನ್ನು ಕಂಪ್ಯೂಟರ್‌ ಕಲಿತವರನ್ನಾಗಿಸುವ ಮುನ್ನ ಅವರಿಗೆ ಪಾಠ ಮಾಡುವವರಿಗೆ ಸಂಪೂರ್ಣ ಮಾನಸಿಕ ತಾಕತ್ತು ಇರಬೇಕು ಎಂಬುದು ಕಂಪನಿಯ ನಂಬುಗೆ.

ಪ್ರಾಯಶಃ ಕಳೆದ ವರ್ಷ ಕಂಪನಿಯ ಈ ಕಾರ್ಯಕ್ರಮ ಶುರುವಾದಾಗಿನಿಂದ ಈವರೆಗೆ ಕಂಡಿರುವ ಕೊರತೆ ಸೃಜನಶೀಲತೆಯದ್ದಿರಬೇಕು. ಅದಕ್ಕೇ ಮಕ್ಕಳಿಗೆ ಪಾಠ ಹೇಳುವ ಮೇಷ್ಟ್ರುಗಳನ್ನೇ ಕ್ಲಾಸ್‌ ರೂಮಿಗೆ ತಂದು ಕೂರಿಸಿ, ಕಂಪ್ಯೂಟರ್‌ ಪಾಠ ಹೇಳಿ, ಕಮ್ಮಟಗಳನ್ನೂ ಕಂಪನಿ ಆಯೋಜಿಸುತ್ತಿದೆ. ಇದಕ್ಕೆ ಕಂಪನಿ ಒಂದಿಷ್ಟು ಮತ್ತು ಆಯಾ ಶಾಲೆಗಳು ಒಂದಷ್ಟು ಹಣವನ್ನು ವಿನಿಯೋಗಿಸುತ್ತಿವೆ.

ಅದಿರಲಿ, ಸೃಜನಶೀಲತೆ ತಂತಾನೇ ಬರುವಂಥದಲ್ಲವೇ? ಉಗುರು ತೋರಿಸಿದರೆ ಹಸ್ತ ನುಂಗುತ್ತಾರಲ್ಲಾ, ಹಾಗೆ. ಪಾಠ ಹೇಳುವುದರ ಮೂಲಕ ಸೃಜನಶೀಲತೆ ಮೂಡಿಸುವುದು ಸಾಧ್ಯವೇ? ಕಂಪನಿಯೇನೋ ಹೌದು ಎನ್ನುತ್ತಿದೆ. ತಮ್ಮಂತೆ ಗುರುಗಳೂ ಪಾಠ ಕೇಳುವುದನ್ನು ಕಂಡು ವಿದ್ಯಾರ್ಥಿಗಳು ಆನಂದ ಪಡುತ್ತಿರುವುದೂ ಸುಳ್ಳಲ್ಲ.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X