• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದ ಯೋಜನೆಗಳಿಗೆ ಮರೀಚಿಕೆಯಾದ 2002-03ರ ರೈಲ್ವೆ ಬಜೆಟ್‌

By Staff
|

ಬೆಂಗಳೂರು : ಕೇಂದ್ರ ರೈಲ್ವೆ ಸಚಿವ ನಿತೀಶ್‌ ಕುಮಾರ್‌ ಅವರು, ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ ರೈಲ್ವೆ ಬಜೆಟ್‌ 2002-03 ಕರ್ನಾಟಕ ವಿರೋಧಿ ಆಗಿದೆ ಎಂದು ರಾಜ್ಯ ಸಂಸತ್‌ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಅಳುವ ಕಂದನ ತುಟಿಗೆ ತುಪ್ಪ ಸವರುವ ರೀತಿಯಲ್ಲಿ ಬೆಂಗಳೂರು - ಹುಬ್ಬಳ್ಳಿ ನಡುವೆ ಇಂಟರ್‌ಸಿಟಿ ‘ಜನ ಶತಾಬ್ದಿ’ ರೈಲೊಂದನ್ನು ಹೊರತು ಪಡಿಸಿದರೆ, ರಾಜ್ಯಕ್ಕೆ ಈ ಬಾರಿಯ ರೈಲ್ವೆ ಬಜೆಟ್‌ ಯಾವುದೇ ರೀತಿಯಿಂದಲೂ ಸಹಕಾರಿಯಾಗಿಲ್ಲ ಎಂದು ಸಂಸತ್‌ಸದಸ್ಯ ಪುಟ್ಟಸ್ವಾಮಿ ಗೌಡ ಹೇಳಿದ್ದಾರೆ.

ಕೇವಲ ಭರವಸೆಗಳ, ಅನುಷ್ಠಾನಕ್ಕೆ ಬಾರದ ಪೊಳ್ಳು ಭರವಸೆಗಳ ಗೊತ್ತು ಗುರಿ ಇಲ್ಲದ ಬಜೆಟ್‌ ಆಗಿದೆ ಎಂಬುದು ಹಲವು ಪ್ರತಿಪಕ್ಷಗಳ ನಾಯಕರ ಹೇಳಿಕೆಯಾಗಿದೆ. ಇದು ಶ್ರೀಮಂತರಿಗೆ ನೆರವಾಗುತ್ತದೆಯೇ ಹೊರತು, ಜನಸಾಮಾನ್ಯನಿಗೆ ಮಂಡಿಸಿದ ಬಜೆಟ್‌ ಅಲ್ಲ ಎಂದು ಅವರು ಹೇಳಿದ್ದಾರೆ.

ಪ್ರತಿವರ್ಷವೂ ಕೊನೆಯ ಆದ್ಯತೆಯಿಂದ ತೃಪ್ತಿಪಡುವ ಕರ್ನಾಟಕಕ್ಕೆ ಈ ಬಾರಿ ಇನ್ನೂ ಅನ್ಯಾಯವಾಗಿದೆ. ಕರ್ನಾಟಕದ ಬೇಡಿಕೆ ಹೆಚ್ಚೇನೂ ಇಲ್ಲದಿದ್ದರೂ, ರಾಜ್ಯ ಮುಂದಿಟ್ಟ ಗೇಜ್‌ ಪರಿವರ್ತನೆ ಬೇಡಿಕೆಗೂ ಮನ್ನಣೆ ದೊರಕದಿರುವುದು ಕನ್ನಡಿಗರಿಗೆ ತೀವ್ರ ಅಸಮಾಧಾನ ಉಂಟು ಮಾಡಿದೆ.

ರಾಜ್ಯದಲ್ಲಿ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ವಿವಿಧ ರೈಲ್ವೆ ಯೋಜನೆಗಳಿಗೆ ಈ ಬಜೆಟ್‌ನಲ್ಲಿ ಯಾವುದೇ ಆದ್ಯತೆ ನೀಡಲಾಗಿಲ್ಲ. ನಾಲ್ಕು ಮಾರ್ಗಗಳ ಗೇಜ್‌ ಪರಿವರ್ತನೆ ಹಾಗೂ ಹೊಸ ರೈಲುಗಳ ನಿರೀಕ್ಷೆ ಹುಸಿಯಾಗಿದೆ. ಬಿಜಾಪುರ-ಗದಗ್‌ ನಡುವಿನ ಮಾರ್ಗಪರಿವರ್ತನೆ, ಬೆಂಗಳೂರು -ಬೀದರ್‌, ಬೆಂಗಳೂರು -ಗುಲ್ಬಾರ್ಗ ನಡುವೆ ಹೊಸ ರೈಲು ಸಂಚಾರದ ನಿರೀಕ್ಷೆ ಮತ್ತೆ ನೆನೆಗುದಿಗೆ ಬಿದ್ದಿದೆ.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 220 ಕೋಟಿ ರುಪಾಯಿ ವೆಚ್ಚದ ಸಕಲೇಶಪುರ - ಮಂಗಳೂರು ನಡುವಿನ ರೈಲು ಮಾರ್ಗಕ್ಕೆ ಆದ್ಯತೆ ಸಿಕ್ಕಿದ್ದು, ಇನ್ನಾದರೂ ಅದು ಪೂರ್ಣಗೊಳ್ಳುತ್ತದೆಯೇ ಕಾದು ನೋಡಬೇಕು. ಈ ಮಧ್ಯೆ ಅಂಕೋಲ-ಹುಬ್ಬಳ್ಳಿ ರೈಲು ಮಾರ್ಗದ ಬಗ್ಗೆ ಪ್ರಸಕ್ತ ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲದಿರುವುದು ಸಂಸದರ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಾರೆಯಾಗಿ ಮಂಗಳವಾರ ಮಂಡಿಸಲಾದ ರೈಲ್ವೆ ಬಜೆಟ್‌ ಕರ್ನಾಟಕದ ಪಾಲಿಗಂತೂ ಮಂಗಳಕರವಾಗಿಲ್ಲ. ಈ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿರುವ ಪ್ರಾತಿನಿಧ್ಯ ಶೂನ್ಯ. ಜನಶತಾಬ್ದಿ ಇಂಟರ್‌ಸಿಟಿ ರೈಲೊಂದಾದರೂ ಕರ್ನಾಟಕದ ಪಾಲಿಗೆ ಸಿಕ್ಕಿತಲ್ಲ ಎಂಬುದೇ ಸಮಾಧಾನದ ಅಂಶ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more