• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರ್ಕಳ: ಸರ್ವಸಂಗ ಪರಿತ್ಯಾಗಿ ಬಾಹುಬಲಿಗೆ 1008 ಕಲಶಗಳ ತಲೆಸ್ನಾನ

By Staff
|

ಕಾರ್ಕಳ : ಸೋಮವಾರ ಸಂಜೆಯಾಗುತ್ತಿದ್ದಂತೆಯೇ ಬಾಹುಬಲಿ ನಿಂತಿರುವ ಕಲ್ಲಿನ ಬೆಟ್ಟದಲ್ಲಿ ಜನರು ಗಿಜಿಗುಡುತ್ತಿದ್ದರು. ಸರ್ವ ಸಂಗ ಪರಿತ್ಯಾಗಿ ಬಾಹುಬಲಿಯ ಮಹಾಮಜ್ಜನವನ್ನು ನೋಡಲು ಊರು ಜಾತಿಗಳ ಬೇಧವಿಲ್ಲದೆಯೇ ಭಕ್ತರು ಬಂದಿದ್ದರು.

ಬೆಳಗ್ಗೆಯಿಂದಲೇ ಮಹಾಮಜ್ಜನದ ಪುಣ್ಯ ದೃಶ್ಯವನ್ನು ನೋಡಲು ಭಕ್ತರು ಸುಡು ಬಂಡೆಯ ಮೆಟ್ಟಿಲುಗಳ್ನೇರಿ ಬಂದು ನೆರೆದಿದ್ದರು. ಸಂಜೆ ಹೊತ್ತು 1008 ಕಲಶಗಳ ಮಹಾಮಸ್ತಕಾಭಿಷೇಕ ನಡೆಯಿತು.

ಮಸ್ತಕದ ಮೇಲೆ ಹಾಲು, ಅರಿಶಿಣ, ಶ್ರೀಗಂಧ ಹಾಗೂ ಚಂದನದ ಧಾರೆಯೆರೆದು ಜೈನ ಭಕ್ತರು ಸಂಭ್ರಮಿಸಿದರು. ಒಂದೊಂದು ಬಗೆಯ ಅಭಿಷೇಕಕ್ಕೂ ಒಂದೊಂದು ಬಗೆಯ ಬಣ್ಣ. 42 ಅಡಿ ಎತ್ತರದ ಬೃಹತ್‌ ಮೂರ್ತಿ ಕ್ಷಣಕ್ಕೊಂದು ಬಣ್ಣದಿಂದ ಕಂಗೊಳಿಸುತ್ತಿತ್ತು. ಅರಿಶಿಣದ ಧಾರೆಯಲ್ಲಿ ಹಳದಿಯಾದರೆ, ಮತ್ತೆ ಹಾಲು ಲೇಪಿಸಿಕೊಂಡ ಅಮೃತ ಶಿಲೆಯ ಮೂರ್ತಿಯಂತೆ, ಮತ್ತೆ ನಾರಿಕೇಳಾಭಿಷೇಕದಿಂದ ನಿಜರೂಪದಲ್ಲಿ .

ಮೂರ್ತಿಗಿಂತಲೂ ಎತ್ತರದ ಅಟ್ಟಳಿಗೆಯ ಮೇಲಿಂದ ಅಭಿಷೇಕ ಕಾರ್ಯ ನಡೆಯುತ್ತಿರುವಂತೆಯೇ ವಾದ್ಯಘೋಷ, ಮಂತ್ರ ಪಠಣ, ನೃತ್ಯ ಸೇವೆ, ಭಜನೆ, ಕೀರ್ತನೆಗಳ ನಾದ ಆಗಸ ಮುಟ್ಟಿತು. ಅಭಿಷೇಕದ ನಂತರ ಸಾಂಕೇತಿಕವಾಗಿ ಉತ್ಸವ ಮೂರ್ತಿಗೆ ಬೇಳೆ, ಬೆಲ್ಲ, ಕಬ್ಬಿನ ಹಾಲು, ತುಪ್ಪ ಅರ್ಪಿಸಲಾಯಿತು.

ಕ್ಷೀರಾಭಿಷೇಕದ ಬಳಿಕ, ಮಂದಸ್ಮಿತ ಬಾಹು ಬಲಿಯ ಗುಣಗಾನ ನಡೆಯಿತು. ಮತ್ತೆ ಪುಷ್ಪವೃಷ್ಟಿ. 42 ಅಡಿ ಎತ್ತರದ ಮೂರ್ತಿಗೆ 80 ಅಡಿ ಉದ್ದ ಹೂಮಾಲೆಯನ್ನು ರಾಟೆ ಮೂಲಕ ಇಳಿ ಬಿಡಲಾಯಿತು. ಅದೇ ಮಾದರಿಯಲ್ಲಿ ಮಹಾನ್‌ ಮೂರ್ತಿಯ ಎದೆಮಟ್ಟದ ವರೆಗೆ ಮೂರು ಬಾರಿ ಆರತಿ ತಟ್ಟೆಯ ಮೂಲಕ ಆರತಿ ಬೆಳಗಲಾಯಿತು.

ಲೋಕ ಸುಖವಾಗಿರಲಿ, ಭೂಮಿ ಸುಭಿಕ್ಷವಾಗಿರಲಿ ಎಂಬ ಶಾಂತಿ ಮಂತ್ರದೊಂದಿಗೆ ಮಹಾ ಮಸ್ತಕಾಭಿಷೇಕಕ್ಕೆ ಅಂತಿಮ ಪರದೆ ಬಿತ್ತು. ಅಂದ ಹಾಗೆ ಇದು ಸಹಸ್ರ ಮಾನದ ಮೊದಲ ಮಸ್ತಕಾಭಿಷೇಕ. ಮತ್ತೆ 12 ವರ್ಷಗಳ ನಂತರ ಬಾಹುಬಲಿಗೆ ತರಾವಳಿಯ ತಲೆಸ್ನಾನ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more