ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಯಂ ಘೋಷಿತ ಆಸ್ತಿ ತೆರಿಗೆ : ಮಂಡ್ಯದಲ್ಲಿ ಬಂದ್‌ ಆಚರಣೆ

By Staff
|
Google Oneindia Kannada News

ಮಂಡ್ಯ : ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು ಜಾರಿಗೆ ತರುವ ನಗರಸಭೆಯ ತೀರ್ಮಾನವನ್ನು ಪ್ರತಿಭಟಿಸಿ, ಮಂಗಳವಾರ ಮಂಡ್ಯದಲ್ಲಿ ಬಂದ್‌ ಆಚರಿಸಲಾಯಿತು. ಮಂಡ್ಯದ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಇನ್ನಿತರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು.

ಬಂದ್‌ ಕರೆಗೆ ಓಗೊಟ್ಟ ಅಂಗಡಿ ಮಾಲಿಕರು, ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. ನಗರದ ಹೊಟೆಲ್‌ಗಳು, ಸಿನಿಮಾ ಮಂದಿರಗಳು ಮಂಗಳವಾರ ಮುಚ್ಚಿದ್ದವು. ವಾಣಿಜ್ಯ ವಹಿವಾಟು ಸ್ತಬ್ಧಗೊಂಡಿತ್ತು.

ಆದರೆ, ಆವಶ್ಯಕ ಸೇವೆಗಳಾದ ಔಷಧದ ಅಂಗಡಿಗಳು, ಆಸ್ಪತ್ರೆಗಳು, ನರ್ಸಿಂಗ್‌ ಹೋಂಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಬಂದ್‌ಗೆ ಕರೆ ನೀಡಿದ್ದ ನಾಗರಿಕ ಹಿತರಕ್ಷಣಾ ಸಮಿತಿಯು ಸ್ವಯಂ ಘೋಷಿತ ಆಸ್ತಿ ತೆರಿಗೆ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಸರಕಾರವನ್ನು ಆಗ್ರಹಿಸಿತು. ಬಂದ್‌ ಒಟ್ಟಾರೆಯಾಗಿ ಶಾಂತಿಯುತವಾಗಿತ್ತು.

(ಪಿ.ಟಿ.ಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X