ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ - ರಾಜ್ಯ ಸರ್ಕಾರಗಳಿಗೆ ಮತದಾರರು ಕಲಿಸಿದ ಪಾಠ : ದೇವೇಗೌಡ

By Staff
|
Google Oneindia Kannada News

ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರಕಾರಗಳ ತಪ್ಪು ನಡೆವಳಿಕೆಯಿಂದ ಆಕ್ರೋಶಗೊಂಡಿರುವ ಜನಸಾಮಾನ್ಯರು ನೀಡಿರುವ ತೀರ್ಪು ಇದಾಗಿದೆ ಎಂದು ಕನಕಪುರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದ್ದಾರೆ.

ತಮ್ಮ ಗೆಲುವಿನ ನಂತರ ಅಭಿಮಾನಿಗಳು ನೀಡಿದ ಅಭಿನಂದನೆ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಗೌಡರು, ಮತದಾರರು ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡಕ್ಕೂ ತಕ್ಕ ಪಾಠ ಕಲಿಸಿದ್ದಾರೆ. ಈಗಲಾದರೂ, ಸರಕಾರಗಳು ಎಚ್ಚೆತ್ತು ಜನಪರ ಕಾರ್ಯ ಹಮ್ಮಿಕೊಳ್ಳಲಿ. ಇನ್ನಾದರೂ ಅವರಿಬ್ಬರಿಗೂ ಜ್ಞಾನೋದಯ ಆಗಲಿ ಎಂದು ಆಶಿಸಿದರು.

ಈ ಮಧ್ಯೆ ಚುನಾವಣಾ ಆಯೋಗವು ಎಚ್‌.ಡಿ. ದೇವೇಗೌಡರ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಮೂವರು ಪ್ರಮುಖ ಅಭ್ಯರ್ಥಿಗಳು ಗಳಿಸಿದ ಮತಗಳ ವಿವರವನ್ನೂ ನೀಡಿದೆ. ಈ ಅಂಕಿ-ಸಂಖ್ಯೆಗಳ ರೀತ್ಯ ದೇವೇಗೌಡರು ತಮ್ಮ ಸಮೀಪದ ಪ್ರತಿಸ್ಪರ್ಧಿ ರಾಜ್ಯ ಸಹಕಾರ ಸಚಿವ ಡಿ.ಕೆ. ಶಿವಕುಮಾರ್‌ರಿಗಿಂತ 53,490 ಹೆಚ್ಚು ಮತಗಳಿಸಿ ಜಯಶಾಲಿಗಳಾಗಿದ್ದಾರೆ.

ಎಚ್‌.ಡಿ. ದೇವೇಗೌಡರಿಗೆ 5,81,589 ಮತಗಳು ಬಿದ್ದಿದ್ದರೆ, ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ 5,28,099 ಮತಗಳನ್ನು ಗಳಿಸಿದ್ದಾರೆ. ಮೂರನೆ ಸ್ಥಾನವನ್ನು ಪಡೆದಿರುವ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಹಾಗೂ ಭಾರತೀಯ ಜನತಾಪಕ್ಷದ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ಅವರು 2,28,122 ಮತಗಳನ್ನು ಗಳಿಸಿದ್ದಾರೆ.

(ಇನ್‌ಫೋ ವಾರ್ತೆ)

ಮುಖಪುಟ / ಕನಕಪುರವೆಂಬ ಕುರುಕ್ಷೇತ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X