ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಕಪುರ : ಡಿ.ಕೆ.ಶಿವಕುಮಾರ್‌ 5000 ಮತಗಳಿಂದ ಮುಂದೆ

By Super
|
Google Oneindia Kannada News

ಬೆಂಗಳೂರು : ಕನಕಪುರ ಲೋಕಸಭೆ ಉಪ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ 5000ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಉತ್ತರಹಳ್ಳಿಯ ಮೊದಲ ಸುತ್ತಿನ ಎಣಿಕೆ ಮುಗಿದ ತರುವಾಯ (ಬೆಳಗ್ಗೆ 10 ಗಂಟೆ ಹೊತ್ತಿನಲ್ಲಿ ) ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ಒಟ್ಟು 23,339 ಮತಗಳಿಸಿದ್ದರೆ, 18,331 ಮತಗಳಿಸಿರುವ ದೇವೇಗೌಡರಿಗಿಂತ ಸುಮಾರು 5,000 ಮತಗಳಿಂದ ಮುಂದಿದ್ದರು.

ಇದಕ್ಕೂ ಮುನ್ನ ಜಾತ್ಯತೀತ ಜನತಾದಳದ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರು ಮೊದಲ ಸುತ್ತಿನ ಮತಎಣಿಕೆಯಲ್ಲಿ ರಾಮನಗರ ಹಾಗೂ ಮಳವಳ್ಳಿಯಲ್ಲಿ ಮುನ್ನಡೆ ಸಾಧಿಸಿದ್ದರು. ರಾಮನಗರದಲ್ಲಿ ಗೌಡರು 5176 ಮತಗಳನ್ನು ಪಡೆದಿದ್ದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ 4,376 ಮತಗಳನ್ನು ಗಳಿಸಿದ್ದರು.

ಮಳವಳ್ಳಿಯಲ್ಲಿ ಗೌಡರಿಗೆ 5374 ಮತಗಳು ಲಭ್ಯವಾಗಿದ್ದರೆ, ಡಿ.ಕೆ.ಶಿವಕುಮಾರ್‌ 3,033 ಮತಗಳನ್ನು ಗಳಿಸಿದ್ದಾರೆ. ಭಾರತೀಯ ಜನತಾಪಕ್ಷದ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ಮೂರನೇ ಸ್ಥಾನದಲ್ಲಿದ್ದಾರೆ.(ಇನ್‌ಫೋ ವಾರ್ತೆ)

English summary
D.K. shivakumar establishes initial lead over 5000 votes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X