• search

ಕನಕಪುರ ಉಪ ಚುನಾವಣೆ : ದೇವೇಗೌಡರ ಪ್ರಚಂಡ ಜಯಭೇರಿ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು : ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಕನಕಪುರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಪ್ರಚಂಡ ಜಯಭೇರಿ ಬಾರಿಸಿದ್ದಾರೆ. ಗೌಡರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ಅವರಿಗಿಂತ 80 ಸಾವಿರಕ್ಕೂ ಅಧಿಕ ಮತಗಳಿಸಿ ಜಯ ಸಾಧಿಸಿದ್ದಾರೆ. ಅಧಿಕೃತ ಪ್ರಕಟಣೆ ಶೀಘ್ರವೇ ಹೊರಬೀಳಲಿದೆ.

    ಭಾನುವಾರ ಬೆಳಗ್ಗೆ ಮತಎಣಿಕೆ ಆರಂಭವಾದಗಲೇ ಆರಂಭಿಕ ಮುನ್ನಡೆ ಸಾಧಿಸಿದ್ದ ಗೌಡರು, ಎರಡನೇ ಸುತ್ತಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಶಿವಕುಮ್‌ ಅವರಿಗಿಂತ 5 ಸಾವಿರ ಮತಗಳಿಂದ ಹಿಂದಿದ್ದರು. ಆದರೆ, ನಂತರದ ಸುತ್ತುಗಳಲ್ಲಿ ಏಕಪ್ರಕಾರವಾಗಿ ಮುನ್ನಡೆ ಕಾಯ್ದುಕೊಂಡ ದೇವೇಗೌಡರು ಎಂಟನೇ ಸುತ್ತಿನ ಹೊತ್ತಿಗೆ 88 ಸಾವಿರ ಮತಗಳ ಮುನ್ನಡೆ ಸಾಧಿಸಿದಾಗಲೇ ಅವರ ಗೆಲುವು ಖಚಿತವಾಯಿತು.

    ದೇವೇಗೌಡರು ಮುನ್ನಡೆ ಸಾಧಿಸುತ್ತಿದ್ದಾಗಲೇ, ಮತಎಣಿಕೆ ಕೇಂದ್ರದ ಎದುರು ಕುಣಿದು ಕುಪ್ಪಳಿಸುತ್ತಿದ್ದ ದಳ ಕಾರ್ಯಕರ್ತರು ಅವರ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪಟಾಕಿಗಳನ್ನು ಸಿಡಿಸಿ ವಿಜಯೋತ್ಸವ ಆಚರಿಸಿದರು. ಗೆದ್ದರಪ್ಪ ಗೆದ್ದರು, ದೇವೇಗೌಡರು ಗೆದ್ದರು.. ಎಂಬ ಕಾರ್ಯಕರ್ತರ ಘೋಷಣೆ ಮುಗಿಲು ಮುಟ್ಟಿತ್ತು.

    ಈಶ್ವರಪ್ಪ ಅಭಿನಂದನೆ : ದೇವೇಗೌಡರು ಮುನ್ನಡೆ ಸಧಿಸಿದ್ದ ಸಂದರ್ಭದಲ್ಲಿ ಮಹಾರಾಣಿ ಕಲಾ ಕಾಲೇಜ್‌ನ ಮತಎಣಿಕೆ ಕೇಂದ್ರಕ್ಕೆ ಬಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ಅವರು, ದೇವೇಗೌಡರಿಗೆ ಅಡ್ವಾನ್ಸ್‌ ಅಭಿನಂದನೆ ಸಲ್ಲಿಸಿದರು.

    ಈ ಚುನಾವಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರದ ಮತದಾರು ಕಾಂಗ್ರೆಸ್‌ ವಿರುದ್ಧ ಜನಾದೇಶ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ. ಶಿವಕುಮಾರ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಈಶ್ವರಪ್ಪ ಒತ್ತಾಯಿಸಿದ್ದಾರೆ.

    ಈ ಚುನಾವಣೆಯಲ್ಲಿ ದೇವೇಗೌಡರ ಗೆಲುವಿಗೆ ಅನುಕಂಪದ ಮತಗಳೇ ಕಾರಣ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದು ದಳ ಬಣಗಳ ರಾಜಕೀಯ ಧ್ರುವೀಕರಣಕ್ಕೆ ನಾಂದಿ ಹಾಡಲಿದೆ ಎಂದೂ ಅವರು ಹೇಳಿದ್ದಾರೆ.

    (ಇನ್‌ಫೋ ವಾರ್ತೆ)

    ಮುಖಪುಟ / ಕನಕಪುರವೆಂಬ ಕುರುಕ್ಷೇತ್ರ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more