ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಕಾವೇರಿಭವನ ಮುತ್ತಿಗೆ ವಾಪಸ್ಸು, ಕರ ನಿರಾಕರಣೆ ಚಳವಳಿಗೆ ಅಸ್ತು

By Staff
|
Google Oneindia Kannada News

ಬೆಂಗಳೂರು: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯ ತಾರತಮ್ಯವನ್ನು ವಿರೋಧಿಸಿ ಕಳೆದ ಮೂರು ವಾರಗಳಿಂದ ಕಾವೇರಿ ಭವನದ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌) ಮುಖ್ಯ ಕಚೇರಿ ಎದುರು ನಡೆಸುತ್ತಿರುತ್ತದ್ದ ಧರಣಿ ಸತ್ಯಾಗ್ರಹವನ್ನು ರಾಜ್ಯ ರೈತ ಸಂಘ ವಾಪಸ್ಸು ಪಡೆದಿದೆ.

ಸಮಾನ ವಿದ್ಯುತ್‌ ನೀತಿ ಜಾರಿಗೊಳಿಸುವವರೆಗೂ ರಾಜ್ಯದ ಎಲ್ಲ ಗ್ರಾಮಗಳಲ್ಲಿ ವಿದ್ಯುತ್‌ ಕರ ನಿರಾಕರಣ ಚಳವಳಿ ಹಮ್ಮಿಕೊಳ್ಳಲಾಗುವುದು. ಆದ್ದರಿಂದ ಕಾವೇರಿ ಭವನಕ್ಕೆ ಹಾಕಿದ್ದ ಮುತ್ತಿಗೆಯನ್ನು ವಾಪಸ್ಸು ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ರೈತಸಂಘದ ಅಧ್ಯಕ್ಷ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ವಿದ್ಯುತ್‌ ಪೂರೈಸುವಲ್ಲ ವಿಫಲವಾಗಿರುವ ರೈತ ವಿರೋಧಿ ಸರ್ಕಾರ, ವಿದ್ಯುತ್‌ ಕಳವಿಗೆ ಸಂಬಂಧಿಸಿದಂತೆ ನೂತನ ಕಾಯ್ದೆ ಜಾರಿಗೆ ತರುತ್ತಿರುವ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದಾಗಿ ಹೇಳಿದ ಅವರು, ಕಾನೂನನ್ನು ಸಂಪೂರ್ಣವಾಗಿ ಉಲ್ಲಂಘಿಸುವಂತೆ ರೈತರಿಗೆ ಕರೆ ಕೊಟ್ಟರು. ನೆರೆಯ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದ ವಿದ್ಯುತ್‌ ಖರೀದಿಸಲಾಗಿದ್ದು , ಇದರ ಬಳಕೆಯನ್ನು ಗುಟ್ಟಾಗಿಟ್ಟಿರುವ ಸಮಾನ ವಿದ್ಯುತ್‌ ಪೂರೈಕೆ ನೀತಿ ಅನುಸರಿಸಲು ಅಲಕ್ಷ್ಯ ತೋರುತ್ತಿದೆ ಎಂದು ನಂಜುಂಡಸ್ವಾಮಿ ಆಪಾದಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X