ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂಡ್ಲಿಗಿ ತಾಲ್ಲೂಕಿನ ರೆವೆನ್ಯೂ ದಾಖಲೆಗಳೀಗ ಕಂಪ್ಯೂಟರ್‌ನಲ್ಲಿ ಸೆರೆ

By Staff
|
Google Oneindia Kannada News

ಕೂಡ್ಲಿಗಿ : ಕಾಲಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಕಂಪ್ಯೂಟರೀಕರಣದಲ್ಲಿ ಮುಂಚೂಣಿಯಲ್ಲಿದೆ. ತಾಲ್ಲೂಕಿನ ಎಲ್ಲ ರೆವೆನ್ಯೂ ದಾಖಲೆಗಳ ಕಂಪ್ಯೂಟರೀಕರಣ ಈಗ ಪೂರ್ಣವಾಗಿದೆ.

ರಾಜ್ಯ ಸರ್ಕಾರದ ನಿರ್ದೇಶನದ ಅನ್ವಯ ಈ ಕಂಪ್ಯೂಟರೀಕರಣ ಕಾರ್ಯವನ್ನು ಪೂರ್ಣಗೊಳಿಸಲಾಗಿದ್ದು , ಸಾರ್ವಜನಿಕರ ಉಪಯೋಗಕ್ಕಾಗಿ ಈಗ ಎಲ್ಲ ದಾಖಲೆಗಳೂ ಕಂಪ್ಯೂಟರ್‌ನಲ್ಲಿ ಲಭ್ಯವಿವೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಜಾವೇದ್‌ ಅಖ್ತರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭೂಮಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಗಣಕೀಕೃತ ದಾಖಲೆಗಳು ಮಾತ್ರ ಅಧಿಕೃತವಾಗಿವೆ. ಸರ್ಕಾರಿ ಅಧಿಕಾರಿಗಳು ಹಾಗೂ ಸ್ಥಳೀಯ ಸಮಿತಿಗಳು ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಇನ್ನು ಮುಂದೆ ಕಂಪ್ಯೂಟರ್‌ ಆರ್‌ಟಿಸಿಎಸ್‌ ದಾಖಲೆಗಳನ್ನೇ ಪರಿಗಣಿಸಬೇಕು ಎಂದು ಅಖ್ತರ್‌ ತಿಳಿಸಿದ್ದಾರೆ. ಈ ಮುನ್ನ ರೆವೆನ್ಯೂ ಅಧಿಕಾರಿಗಳು ತಾವೇ ಸಿದ್ಧಪಡಿಸಿ ನೀಡುತ್ತಿದ್ದ ಆರ್‌ಟಿಸಿಎಸ್‌ಗಳು ವ್ಯಾಪಕ ಅವ್ಯವಹಾರಗಳಿಗೆ ಎಡೆ ಮಾಡಿಕೊಟ್ಟಿತ್ತು .

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X