• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನಕಪುರ :ಯಾವುದೇ ಮತಗಟ್ಟೆಯಿಂದಲೂ ಮರುಮತದಾನ ಕೋರಿಕೆ ಬಂದಿಲ್ಲ

By Staff
|

ಬೆಂಗಳೂರು : ಕಾಂಗ್ರೆಸ್‌ ಪಕ್ಷವು ಕನಕಪುರ ಲೋಕಸಭೆಯ ಉಪಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ಅಕ್ರಮ ಮತದಾನ ಮಾಡಿಸಿದೆ. ಹೀಗಾಗಿ ಕನಿಷ್ಠ 10 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆ ಆಯೋಗವನ್ನು ಒತ್ತಾಯಿಸಿದ್ದಾರೆ.

ಆದರೆ, ಈ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರ ಬಳಸಿರುವ ಕಾರಣ ಅಕ್ರಮ ಮತದಾನಕ್ಕೆ ಅವಕಾಶವೇ ಇಲ್ಲ. ಯಾವುದೇ ಮತಗಟ್ಟೆ ಅಧಿಕಾರಿಯಿಂದಾಗಲೀ ಅಥವಾ ಯಾವುದೇ ಅಭ್ಯರ್ಥಿಯಿಂದ ಮರುಮತದಾನಕ್ಕೆ ಲಿಖಿತ ಕೋರಿಕೆ ಬಂದಿಲ್ಲ ಎಂದು ರಾಜ್ಯ ಚುನಾವಣೆ ಅಧಿಕಾರಿ ಜಿ.ಎಸ್‌. ನಾರಾಯಣ ಸ್ವಾಮಿ ತಿಳಿಸಿದ್ದಾರೆ.

ಮತದಾನದ ನಂತರ ದೇವೇಗೌಡರು ತಮ್ಮನ್ನು ಭೇಟಿ ಮಾಡಿ ಮಾತಕತೆ ನಡೆಸಿದರು. 8-10 ಮತಗಟ್ಟೆಗಳನ್ನು ಹೆಸರಿಸಿ ಅಲ್ಲಿ ಅಕ್ರಮ ಮತದಾನ ನಡೆದಿದೆ ಎಂದರು. ಆದರೆ ಅವರು ಲಿಖಿತ ಮನವಿ ನೀಡಲು ನಿರಾಕರಿಸಿದರು ಎಂದು ಚುನಾವಣಾಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ರಾಮನಗರದಲ್ಲಿ ಪ್ರತಿಶತ 60, ಸಾತನೂರಿನಲ್ಲಿ ಶೇ.55, ಕನಕಪುರದಲ್ಲಿ ಶೇ.60, ಆನೇಕಲ್‌ ಮತ್ತು ಮಾಗಡಿಗಳಲ್ಲಿ ತಲಾ 55, ಚನ್ನಪಟ್ಟಣದಲ್ಲಿ ಶೇ.50 ಹಾಗೂ ಮಳವಳ್ಳಿಯಲ್ಲಿ ಶೇ. ಅರವತ್ತರಷ್ಟು ಮತದಾನ ನಡೆದಿದೆ ಎಂದೂ ಅವರು ತಿಳಿಸಿದರು.

ಗುರುವಾರ ಬೆಳಗ್ಗೆ ಛತ್ರವೊಂದರಲ್ಲಿ 300ಕ್ಕೂ ಹೆಚ್ಚು ನಕಲಿ ಮತದಾರರನ್ನು ಬಂಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಾರಾಯಣ ಸ್ವಾಮಿ ಅವರು, ನಕಲಿ ಮತ ಚಲಾಯಿಸುವಾಗ ಸಿಕ್ಕಿಬಿದ್ದರೆ ಮಾತ್ರ ಆ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಬಹುದು. ಆದರೆ, ನಕಲಿ ಮತದಾನಕ್ಕೆ ಬಂದಿದ್ದಾರೆ ಎಂದು ಶಂಕಿಸಿ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಈ ಆರೋಪ ಸಾಬೀತು ಪಡಿಸಲೂ ಕಷ್ಟವಾಗುತ್ತದೆ ಎಂದರು.

ಬಿಗಿ ಕಾವಲು : ಮತಯಂತ್ರಗಳನ್ನು ಸಂಗ್ರಹಿಸಿಡಲಾಗಿರುವ ಮತಎಣಿಕೆ ಕೇಂದ್ರವಾದ ನಗರದ ಮಹಾರಾಣಿ ಕಲಾ ಕಾಲೇಜ್‌ನಲ್ಲಿ ಮೂರು ಸುತ್ತಿನ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. 100 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ದಳಕ್ಕೆ ಅನುಮತಿ : ಈ ಮಧ್ಯೆ ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಪೊಲೀಸರೊಂದಿಗೆ ತಾವೂ ಸಿದ್ಧವಿರುವುದಾಗಿ ಜೆಡಿಎಸ್‌ ಮಾಡಿಕೊಂಡ ಮನವಿಯನ್ನು ಮುಖ್ಯ ಚುನಾವಣೆ ಆಯುಕ್ತರು ಪುರಸ್ಕರಿಸಿದ್ದಾರೆ ಎಂದು ಜೆಡಿಎಸ್‌ ಮೂಲಗಳು ಹೇಳಿವೆ. ಈ ಸಂಬಂಧ ಮಾಜಿ ಪ್ರಧಾನಿ ದೇವೇಗೌಡರು ದಿಲೀಪ್‌ರಾವ್‌ ಅವರಿಗೆ ಪತ್ರ ಬರೆದಿದ್ದರು.

ದಳ ಎಸ್‌, ತಲಾ ಆರು ಕಾರ್ಯಕರ್ತರ ಮೂರು ತಂಡ ರಚಿಸಿದ್ದು, ಈ ಕಾರ್ಯಕರ್ತರು ಪೊಲೀಸರೊಂದಿಗೆ ಮತಯಂತ್ರಗಳನ್ನು ಇಟ್ಟಿರುವ ಮಹಾರಾಣಿ ಕಲಾ ಕಾಲೇಜಿನಲ್ಲಿ ಕಾವಲು ಕಾಯುತ್ತಿದ್ದಾರೆ.

(ಇನ್‌ಫೋ ವಾರ್ತೆ)

ಮುಖಪುಟ / ಕನಕಪುರವೆಂಬ ಕುರುಕ್ಷೇತ್ರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more