• search

ತಡೆಯಾಜ್ಞೆಗಳ ಸುಳಿಗೆ ಸಿಲುಕಿ ಹಲವು ಅಭಿವೃದ್ಧಿ ಕಾರ್ಯಗಳು ಕುಂಠಿತ: ಕೃಷ್ಣ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು : ಮಾತೃಭಾಷೆ ಬದುಕಿನ ಮುಖ್ಯವಾಹಿನಿ, ಮಾತೃಭಾಷೆ ನಾವು ಚಿಂತಿಸುವ ಹಾಗೂ ನಮ್ಮ ಮನಸ್ಸಿನ ಭಾಷೆಯೂ ಹೌದು. ಎಷ್ಟೇ ಭಾಷೆ ಕಲಿತಿದ್ದರೂ, ಅದು ಮಾತೃಭಾಷೆಯಷ್ಟು ವಾಹಕವಲ್ಲ. ಮಾತೃಭಾಷೆಯ ವಿರುದ್ಧ ಸೆಣಸಾಡುವುದು ಯಾರಿಂದಲೂ ಸಾಧ್ಯವಿಲ್ಲ. ಈ ವಸ್ತು ಸ್ಥಿತಿ ಅರಿತು, ಭಾಷಾಭಿಮಾನದ ಹೆಸರಲ್ಲಿ ಗೊಂದಲದ ಹೇಳಿಕೆ ನೀಡುವುದನ್ನು ನಿಲ್ಲಿಸಿ ಎಂದು ಮುಖ್ಯಮಂತ್ರಿ ಕನ್ನಡ ಹೋರಾಟಗಾರರಿಗೆ ಕರೆ ನೀಡಿದರು.

    ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಏರ್ಪಡಿಸಿದ್ದ, ಅಂತಾರಾಷ್ಟ್ರೀಯ ಮಾತೃಭಾಷೆ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಭಾಷಾಭಿಮಾನದ ಹೆಸರಿನಲ್ಲಿ ಇನ್ನೊಂದು ಭಾಷೆಯ ಬಗ್ಗೆ ಗೊಂದಲಮಯ ಹೇಳಿಕೆ ನೀಡುವ ಪ್ರವೃತ್ತಿಯನ್ನು ಖಂಡಿಸಿದರು.

    ಒಂದರಿಂದ ಐದನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ಮಾಧ್ಯಮ ಇರಬೇಕು ಎಂಬುದು ರಾಜ್ಯ ಸರಕಾರದ ಖಚಿತ ನಿಲುವು. ಖಾಸಗಿ ಶಾಲೆಗಳಲ್ಲಿ ಮಾತೃಭಾಷೆ ಕಲಿಸುವ ಬಗ್ಗೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ ಎಂದು ಕೃಷ್ಣ ವಿವರಿಸಿದರು. ಅನಗತ್ಯವಾಗಿ ಭಾಷೆ ಹೆಸರಿನಲ್ಲಿ ಗೊಂದಲದ ಹೇಳಿಕೆ ನೀಡುವುದನ್ನು ನಿಲ್ಲಿಸಿದರೆ, ಅದು ಕನ್ನಡಕ್ಕೆ ಮಾಡಿದ ದೊಡ್ಡ ಸೇವೆ ಆಗುತ್ತದೆ ಎಂದೂ ಮುಖ್ಯಮಂತ್ರಿ ಹೇಳಿದರು.

    ಶಿಕ್ಷಣ ಮಾಧ್ಯಮ ವಿಚಾರದಲ್ಲಿ ಸರ್ಕಾರದ ತೀರ್ಮಾನದ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಧೋರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೃಷ್ಣ, ನ್ಯಾಯಾಲಯದ ತಡೆಯಾಜ್ಞೆಗಳ ಸುಳಿಗೆ ಸಿಲುಕಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟಾಗಿದೆ ಎಂದರು. ನ್ಯಾಯಾಲಯದ ನಡೆಯನ್ನು ಪ್ರಶ್ನಿಸುವ ಉದ್ದೇಶ ನನ್ನದಲ್ಲ. ಹಾಗೆ ಅರ್ಥೈಸಲೂ ಬೇಡಿ. ಆದರೆ, ವಸ್ತು ನಿಷ್ಠವಾಗಿ ಯೋಚಿಸಿದರೆ ಇದರ ಅರಿವಾಗುತ್ತದೆ ಎಂದು ಕೃಷ್ಣ ಹೇಳಿದರು.

    ಬ್ಯೂರೋಕ್ರೆಟಿಕ್‌ ಪೈಪ್‌ ಲೈನ್‌ನಲ್ಲಿ ಸಿಲುಕಿ ಬರಗೂರು ರಾಮಚಂದ್ರಪ್ಪ ಅವರ ಕೆಲವು ಶಿಫಾರಸುಗಳು ಜಾರಿಯಾಗದೇ ಉಳಿದಿವೆ. ಇವನ್ನು ಆದಷ್ಟು ಬೇಗ ಜಾರಿಮಾಡಲಾಗುವುದು ಎಂದೂ ಕೃಷ್ಣ ಹೇಳಿದರು. ಕನ್ನಡ ಪರವಾದ ಸಲಹೆ, ಶಿಫಾರಸು ಜಾರಿಗೆ ತರಲು ಅಧಿಕಾರಿಶಾಹಿ ವ್ಯವಸ್ಥೆ ಅಡ್ಡಿಯಾಗಿದೆ ಎಂದೂ ಕೃಷ್ಣ ಅಭಿಪ್ರಾಯಪಟ್ಟರು.

    ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌, ಶಿಕ್ಷಣ ಇಲಾಖೆ ಆಯುಕ್ತ ತ.ಮ. ವಿಜಯಭಾಸ್ಕರ್‌, ಶಿಕ್ಷಣ ಇಲಾಖೆ ಕಾರ್ಯದರ್ಶಿ ಮೀರಾ ಸಕ್ಸೇನಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಮೊದಲಾದವರು ಪಾಲ್ಗೊಂಡಿದ್ದರು.

    (ಇನ್‌ಫೋ ವಾರ್ತೆ)

    ಮುಖಪುಟ / ಕೃಷ್ಣಗಾರುಡಿ

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more