ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಬ್ಲ್ಯುಟಿಸಿ - ಸಂಸತ್‌ ಮೇಲಿನ ದಾಳಿಯನ್ನು ಅಮೆರಿಕ ಸಂಸ್ಥೆ ಸಿನಿಮಾ ಮಾಡ್ತಿದೆ

By Staff
|
Google Oneindia Kannada News

ಮುಂಬಯಿ: ವಿಶ್ವವನ್ನೇ ನಡುಗಿಸಿದ ಭಯೋತ್ಪಾದಕ ಕೃತ್ಯ ಈ ಹೊತ್ತು ಚಲನಚಿತ್ರಗಳ ಕಥಾವಸ್ತು ಆಗಿದೆ. ಸೆಪ್ಟೆಂಬರ್‌ 11ರಂದು ಅಮೆರಿಕದ ವಿಶ್ವವಾಣಿಜ್ಯ ಕೇಂದ್ರ ಹಾಗೂ ಡಿಸೆಂಬರ್‌ 13ರಂದು ಭಾರತದ ಸಂಸತ್‌ ಭವನದ ಮೇಲೆ ನಡೆದ ದಾಳಿ ಕುರಿತು ಇಂಗ್ಲಿಷ್‌ ಚಲನಚಿತ್ರವೊಂದು ತಯಾರಾಗುತ್ತಿದೆ.

ಅಮೆರಿಕೆಯಲ್ಲಿ ನೆಲೆಸಿಹ ಭಾರತೀಯ ಲೇಖಕಿ ಮೃದುಲಾ ಮಿತ್ರಾ ವ್ಯಾಸ್‌ಅವರ ‘ಎ ವೂಂಡೆಡ್‌ ಟೈಗ್ರೆಸ್‌’ ಕಾದಂಬರಿ ಆಧರಿಸಿ ನಿರ್ಮಿಸಲಾಗುತ್ತಿರುವ ಈ ಆಂಗ್ಲ ಚಿತ್ರದಲ್ಲಿ ಬಾಲಿವುಡ್‌ನ ಖ್ಯಾತ ತಾರೆ ಮೊನಿಷಾ ಕೊಯಿರಾಲಾ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.

ಅಮೆರಿಕೆಯ ಟೈಟಾನ್‌ ಫೈನಾನ್ಸ್‌ ಗ್ರೂಪ್‌ ಈ ಸತ್ಯಕಥೆ ಆಧಾರಿತ ಚಲನಚಿತ್ರವನ್ನು ತೆರೆಗರ್ಪಿಸುವ ಸಿದ್ಧತೆಯಲ್ಲಿ ತೊಡಗಿದೆ. ಇನ್ನೂ ಹೆಸರಿಡದ ಈ ಚಲನಚಿತ್ರದ ಚಿತ್ರೀಕರಣ ಭಾರತ ಹಾಗೂ ಅಮೆರಿಕೆಯಲ್ಲಿ ನಡೆಯಲಿದೆ. ಈ ಚಿತ್ರವನ್ನು ಹಿಂದಿ ಭಾಷೆಗೆ ಡಬ್‌ ಮಾಡುವ ಇರಾದೆಯೂ ಸಂಸ್ಥೆಗಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಉಜ್ವಲ್‌ ಚಟ್ಟೋಪಾಧ್ಯಾಯ ಚಿತ್ರದ ನಿರ್ದೇಶಕರು. ಅಂದಹಾಗೆ 2002ರ ಮೇ 27ರಿಂದ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಆರಂಭಗೊಳ್ಳಲಿದೆ. ಈ ವಿಷಯವನ್ನು ಉದ್ದೇಶಿತ ಚಿತ್ರದ ವಕ್ತಾರ ಪೀಟರ್‌ ಮಾರ್ಟಿನ್‌ ಸುದ್ಧಿ ಸಂಸ್ಥೆಗೆ ತಿಳಿಸಿದ್ದಾರೆ.

(ಪಿ.ಟಿ.ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X