• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಸಾರ್‌ಗೆ‘ಅನಕೃ-ನಿರ್ಮಾಣ್‌’, ನಿಟ್ಟೂರರಿಗೆ ‘ಆಲೂರು’ ಪ್ರಶಸ್ತಿ

By Staff
|

ಬೆಂಗಳೂರು: ನಿತ್ಯೋತ್ಸವದ ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ಅವರು 2001 ನೇ ಇಸವಿಯ ಅನಕೃ- ನಿರ್ಮಾಣ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಾದಂಬರಿ ಸಾರ್ವಭೌಮ ಅ.ನ.ಕೃಷ್ಣರಾಯರ ನೆನಪಿನಲ್ಲಿ ನಗರದ ಅನಕೃ ಪ್ರತಿಷ್ಠಾನ ಹಾಗೂ ನಿರ್ಮಾಣ್‌ ಶೆಲ್ಟರ್ಸ್‌ ಸಂಸ್ಥೆ ಜಂಟಿಯಾಗಿ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿ 25 ಸಾವಿರ ರುಪಾಯಿ ನಗದು, ಸ್ವರ್ಣ ಫಲಕ ಹಾಗೂ ಅಭಿನಂದನಾ ಪತ್ರವನ್ನು ಒಳಗೊಂಡಿದೆ. ಮಾರ್ಚ್‌ ಕೊನೆಯ ವಾರದಲ್ಲಿ ಜಯನಗರದ ಎಚ್ಚೆನ್‌ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ಜಿ.ಎನ್‌.ರಂಗನಾಥರಾವ್‌, ಎಚ್‌.ಎಸ್‌.ವೆಂಕಟೇಶಮೂರ್ತಿ ಹಾಗೂ ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರಿದ್ದ ಆಯ್ಕೆ ಸಮಿತಿ, ನಿಸಾರ್‌ ಅವರನ್ನು ಅನಕೃ- ನಿರ್ಮಾಣ್‌ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ನಿಟ್ಟೂರು ಶ್ರೀನಿವಾಸರಾಯರಿಗೆ ಆಲೂರು ಪ್ರಶಸ್ತಿ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಿಟ್ಟೂರು ಶ್ರೀನಿವಾಸ ರಾವ್‌ ಅವರಿಗೆ ಆಲೂರು ವೆಂಕಟರಾಯ ಪ್ರಶಸ್ತಿ ದೊರೆತಿದೆ. ಫೆ. 23 ರಂದು ಬೆಂಗಳೂರಿನಲ್ಲಿ ನಡೆಯುವ ವಿಶೇಷ ಸಮಾರಂಭವೊಂದರಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಆಲೂರು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more