ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊನ್ನಾವರ : ಮಂಗನಕಾಯಿಲೆಯಿಂದ ಸತ್ತವರ ಸಂಖ್ಯೆ 4ಕ್ಕೆ ಏರಿಕೆ

By Staff
|
Google Oneindia Kannada News

ಹೊನ್ನಾವರ : ಕಳೆದ ಒಂದು ತಿಂಗಳಿನಿಂದ ತಾಲೂಕಿನಲ್ಲಿ ಕಾಡುತ್ತಿರುವ ಶಂಕಿತ ಮಂಗನಕಾಯಿಲೆ ಮತ್ತಿಬ್ಬರನ್ನು ಬಲಿ ತೆಗೆದುಕೊಂಡಿದೆ. ಕೊಡಾಣಿಯ ಕೃಷ್ಣ ಸುಬ್ಬಗೌಡ (28) ಮತ್ತು ಲಿಬಿಯಾ (18) ಎಂಬಿಬ್ಬರು ಸೋಮವಾರ ಮೃತಪಟ್ಟಿದ್ದಾರೆ.

ಕರ್ಕಿಯ ನರ್ಸಿಂಗ್‌ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಿಬಿಯಾ ಎಂಬ ಯುವತಿ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ಸೇರಿಸಲಾಗಿದ್ದ ಕೃಷ್ಣ ಸುಬ್ಬಗೌಡ ಸೋಮವಾರ ಮೃತಪಟ್ಟಿದ್ದಾರೆ. ಇದರಿಂದಾಗಿ ತಾಲೂಕಿನಲ್ಲಿ ಮಂಗನಕಾಯಿಲಿಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿದೆ.

ಇದಕ್ಕೂ ಮುನ್ನ ಮಂಕಿ ಗ್ರಾಮದ ದಬ್ಬೋಡದಲ್ಲಿ ಓರ್ವ ಯುವತಿ ಹಾಗೂ ಕೊಡಾಣಿಯಲ್ಲಿ 2 ವರ್ಷದ ಪುಟ್ಟ ಕಂದಮ್ಮ ಮಂಗನಕಾಯಿಲೆಗೆ ತುತ್ತಾಗಿ ಅಸುನೀಗಿದ್ದರು. ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕಾಯಿಲೆಯಿಂದ ತಾಲೂಕಿನಲ್ಲಿ ಭೀತಿಯ ವಾತಾವರಣ ನೆಲೆಸಿದೆ.

(ಇನ್‌ಫೋವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X