ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆಯಲ್ಲಿ ಮಸೀದಿ: ಆರ್‌ಎಸ್‌ಎಸ್‌ ಸಲಹೆಗೆ ವಿಹೆಚ್‌ಪಿ ತಿರಸ್ಕಾರ

By Staff
|
Google Oneindia Kannada News

ನವದೆಹಲಿ : ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿ ಮಸೀದಿಯನ್ನು ನಿರ್ಮಿಸುವ ಆರ್‌ಎಸ್‌ಎಸ್‌ ಸಲಹೆಯನ್ನು ವಿಶ್ವ ಹಿಂದೂ ಪರಿಷತ್‌ ತಳ್ಳಿ ಹಾಕಿದೆ.

ಇರುವ ಸ್ಥಳ ತುಂಬಾ ಚಿಕ್ಕದು. ಅಲ್ಲಿ ಮಸೀದಿ ನಿರ್ಮಿಸಲು ಜಾಗವಿಲ್ಲ . ಆ ಕಾರಣದಿಂದಾಗಿ ಆರ್‌ಎಸ್‌ಎಸ್‌ ಸಲಹೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಜ್‌ ತಕ್‌ ಟೀವಿ ಚಾನಲ್‌ಗೆ ನೀಡಿರುವ ಸಂದರ್ಶನಲ್ಲಿ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಅಶೋಕ್‌ ಸಿಂಘಾಲ್‌ ತಿಳಿಸಿದ್ದಾರೆ.

ಮಂದಿರ ನಿರ್ಮಾಣ ಪ್ರದೇಶದಲ್ಲಿ ಈ ಮೊದಲೂ ಮಂದಿರವಿತ್ತು . ರಾಮ ಹುಟ್ಟಿದ್ದು ಅಲ್ಲೇ ಎಂದು ಸಮರ್ಥಿಸಿಕೊಂಡಿರುವ ಸಿಂಘಾಲ್‌, ಈ ವಿಷಯದ ಬಗ್ಗೆ ಚರ್ಚೆಗೆ ಬರಲು ಮುಸ್ಲಿಮರು ಹಿಂಜರಿಯುತ್ತಿದ್ದಾರೆ ಎಂದರು. ಮಸೀದಿಯನ್ನು ನಿರ್ಮಿಸುವುದಾದರೆ 84 ಎಕರೆ ವ್ಯಾಪ್ತಿಯ ಹೊರಗಡೆ ನಿರ್ಮಿಸಲು ಅಡ್ಡಿಯಿಲ್ಲ ಎಂದು ಅವರು ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X