ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್‌ 23ರಿಂದ 3ದಿನ ದುಬೈನಲ್ಲಿ ‘ಬೆಂಗಳೂರು ಐಟಿ ಷೋ’

By Staff
|
Google Oneindia Kannada News

ಬೆಂಗಳೂರು : ಮಾರ್ಚ್‌ ತಿಂಗಳು ಪೂರ್ತಿ ನಡೆಯಲಿರುವ ‘ದುಬೈ ಷಾಪಿಂಗ್‌’ ಉತ್ಸ ವದಲ್ಲಿ ಪ್ರಪ್ರಥಮ ಬಾರಿಗೆ ಬೆಂಗಳೂರು ಐ.ಟಿ. ಷೋ ಏರ್ಪಡಿಸಲಾಗಿದೆ. ದುಬೈನಲ್ಲಿ ಮಾರ್ಚ್‌ 1ರಿಂದ 31ರವರೆಗೆ ನಡೆಯುವ ಈ ಉತ್ಸವದಲ್ಲಿ ಮಾ.23ರಿಂದ 25ರವರೆಗೆ ಬೆಂಗಳೂರು ಐಟಿ ಷೋ ಜರುಗಲಿದೆ.

ಅಮೆರಿಕೆಯಲ್ಲಿ ಸಾಫ್ಟ್‌ವೇರ್‌ ಕಂಪನಿಗಳಿಗೆ ಅವಕಾಶ ಕ್ಷೀಣಿಸಿದ್ದರೂ, ದುಬೈ ಮೂಲಕ ಭಾರತೀಯ ಕಂಪನಿಗಳು ಜಾಗತಿಕ ಮಾರುಕಟ್ಟೆ ಅವಕಾಶ ಪಡೆಯಲು ಸಾಧ್ಯ. ಹೀಗಾಗಿ ಈ ಉತ್ಸವ ಏರ್ಪಡಿಸಲಾಗಿದೆ ಎಂದು ಏರಿಸ್‌ಸಾಫ್ಟ್‌ವೇರ್‌ ಸಲ್ಯೂಷನ್ಸ್‌ ನ ಮಾರುಕಟ್ಟೆ ನಿರ್ದೇಶಕ ಕೆ.ಪಿ.ಆರ್‌. ಮೂರ್ತಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದುಬೈನ ಅಲ್‌ ಮಾಸ್ಸಾ ದಿ ಷೆರ್ಟನ್‌ ಹೋಟೆಲ್‌ನಲ್ಲಿ ಬೆಂಗಳೂರು ಐ.ಟಿ. ಷೋ ನಡೆಯಲಿದ್ದು, 40 ಕಂಪನಿಗಳಿಗೆ ಮಳಿಗೆ ತೆರೆಯಲು ಅವಕಾಶ ನೀಡಲಾಗುತ್ತಿದೆ. ಈಗಾಗಲೇ 9 ಕಂಪನಿಗಳು ಮಳಿಗೆ ತೆರೆಯಲು ಮುಂದೆ ಬಂದಿವೆ ಎಂದರು. ಈ ಷಾಪಿಂಗ್‌ ಉತ್ಸವಕ್ಕೆ ವಿಶ್ವದ ಮೂಲೆ ಮೂಲೆಗಳಿಂದ ಸುಮಾರು 25 ಲಕ್ಷ ಜನರು ಬರುವ ನಿರೀಕ್ಷೆ ಇದೆ ಎಂದೂ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ತಂತ್ರಜ್ಞಾನ ನಿರ್ದೇಶಕ ಎಚ್‌.ಎಸ್‌. ರಾಮಚಂದ್ರ ಹಾಜರಿದ್ದರು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 080 -5583078 ಅಥವಾ ಇ ಮೇಲ್‌ : [email protected] ಸಂಪರ್ಕಿಸಬಹುದು.

(ಇನ್‌ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X