• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೆ.19ರಿಂದ ಹರಿಹರದಲ್ಲಿ 9 ದಿನಗಳ ತರಳಬಾಳು ಹುಣ್ಣಿಮೆ ಮಹೋತ್ಸವ

By Staff
|

ಹರಿಹರ : ಫೆ.19ರ ಮಂಗಳವಾರದಿಂದ ಸಿರಿಗೆರೆ ಬೃಹನ್ಮಠದ ವತಿಯಿಂದ ತರಳಬಾಳು ಹುಣ್ಣಿಮೆ ಕಾರ್ಯಕ್ರಮಗಳು ಆರಂಭವಾಗಲಿವೆ. ಮಂಗಳವಾರ ಸಂಜೆ ಅಧಿಕೃತವಾಗಿ ಉದ್ಘಾಟನೆಗೊಳ್ಳುವ ಈ ಕಾರ್ಯಕ್ರಮಗಳು 9 ದಿನಗಳ ಕಾಲ ಭಕ್ತರಿಗೆ ಜ್ಞಾನ ದಾಸೋಹ ನೀಡಲಿದೆ.

ಸಾಮಾಜಿಕ ಪರಿವರ್ತನೆಯ ಪ್ರತೀಕವಾದ ತರಳಬಾಳು ಹುಣ್ಣಿಮೆಯ 9 ದಿನಗಳ ಕಾರ್ಯಕ್ರಮಕ್ಕೆ ಈಹೊತ್ತು ವೇದಿಗೆ ಸಜ್ಜಾಗಿದೆ. ಹರಿಹರ-ಶಿವಮೊಗ್ಗ ರಸ್ತೆಯಲ್ಲಿರುವ ತರಳಬಾಳು ನಗರದ 50 ಎಕರೆ ಪ್ರದೇಶದಲ್ಲಿ ಬೃಹತ್‌ ಮಂಟಪದ ನಿರ್ಮಾಣ ಮಾಡಲಾಗಿದೆ. ಈ ಮಹಾಮಂಟಪಕ್ಕೆ ಎಚ್‌. ಸಿದ್ಧವೀರಪ್ಪನವರ ಹೆಸರು ಇಡಲಾಗಿದೆ.

ಪ್ರದರ್ಶನ: ತರಳಬಾಳು ಹುಣ್ಣಿಮೆಯ ಅಂಗವಾಗಿ ಈ ಬೃಹತ್‌ ಮಂಟಪದಲ್ಲಿ 150 ಮಳಿಗೆಗಳನ್ನು ತೆರೆಯಲಾಗಿದೆ. ಪುಸ್ತಕೋದ್ಯಮ, ಕೃಷಿ , ಅರಣ್ಯ, ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಈ ಮಳಿಗೆಗಳಲ್ಲಿ ತಮ್ಮ ಪ್ರದರ್ಶನ ಮಾರಾಟ ಏರ್ಪಡಿಸಿವೆ.

ವಿವಿಧ ಬೃಹತ್‌ ಕಂಪನಿಗಳು ಟ್ರ್ಯಾಕ್ಟರ್‌ಗಳ ಮತ್ತು ಅವುಗಳ ಬಿಡಿಭಾಗಗಳ ಪ್ರದರ್ಶನವನ್ನೂ ಆಯೋಜಿಸಿವೆ. ಈ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಕನ್ನಡ ನಾಡಿನ ಖ್ಯಾತ ಸಾಹಿತಿಗಳು, ಮಠಾಧಿಪತಿಗಳು, ರಾಜಕಾರಣಿಗಳು, ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ.

ವಿದ್ಯುತ್‌ ಸಮಸ್ಯೆ ಎದುರಿಸಲು 120 ಕಿ.ವ್ಯಾ. ಸಾಮರ್ಥ್ಯದ 2 ಜನರೇಟರ್‌ಗಳನ್ನು ಅಳವಡಿಸಲಾಗಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಅಗ್ನಿಶಾಮಕ ದಳದ ತುಕಡಿ ಮತ್ತು ಪೊಲೀಸ್‌ ಇಲಾಖೆಯ ನೆರವು ಪಡೆಯಲಾಗಿದೆ. ರಾಜ್ಯದ ವಿವಿಧ ನಗರಗಳಿಂದ ಹಾಗೂ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮಗಳಿಂದ ನೇರ ಬಸ್‌ ಸೌಕರ್ಯ ಕಲ್ಪಿಸಲಾಗಿದೆ.

(ಇನ್‌ಫೋವಾರ್ತೆ)

ಮುಖಪುಟ / ನೋಡು ಬಾ ನಮ್ಮೂರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more