For Daily Alerts
ಮಾರ್ಚ್ 17ರಂದು ಹೊರನಾಡು ಅನ್ನಪೂರ್ಣೆಶ್ವರಿ ರಥೋತ್ಸವ
ಹೊರನಾಡು : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀಅನ್ನಪೂರ್ಣೇಶ್ವರಿ ಅಮ್ಮನವರ ಶ್ರೀಮನ್ ಮಹಾ ರಥೋತ್ಸವ ಮಾರ್ಚ್ 17ರ ಭಾನುವಾರ ನಡೆಯಲಿದೆ.
ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿಗಳು ನಡೆಯುತ್ತಿದ್ದು, ಮಾರ್ಚ್ 15ರಂದು ಮಹಾಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ರಥೋತ್ಸವ ನಿಮಿತ್ತ ನಡೆಯುವ ಎಲ್ಲ ಧಾರ್ಮಿಕ ವಿಧಿಗಳು 19ರ ಮಂಗಳವಾರ ಸಂಪ್ರೋಕ್ಷಣೆಯಾಂದಿಗೆ ಅಧಿಕೃತವಾಗಿ ಮುಕ್ತಾಯಗೊಳ್ಳಲಿವೆ ಎಂದು ದೇವಾಲಯದ ಧರ್ಮಕರ್ತರಾದ ಜಿ. ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ಕಾರ್ಯಕ್ರಮಪಟ್ಟಿ :
- ಮಾ.15ರಂದು ಗಣಪತಿ ಪೂಜೆ, ಮಹಾಗಣಪತಿ ಹೋಮ ಹಾಗೂ ರಾತ್ರಿ ರಂಗಪೂಜೆ
- ಮಾ.16ರಂದು ಬೆಳಗ್ಗೆ ಧ್ವಜಾರೋಹಣ, ರಾತ್ರಿ ಪುಷ್ಪಕಾರೋಹಣ
- ಮಾ.17ರಂದು ಬೆಳಗ್ಗೆ ಶ್ರೀಮನ್ ಮಹಾ ರಥೋತ್ಸವ
- ಮಾ.18ರಂದು ಕುಂಕುಮೋತ್ಸವ, ಅವಭೃತಸ್ನಾನ, ರಾತ್ರಿ ಇಡಿಗಾಯಿ ಸೇವೆ
- ಮಾ.19ರಂದು ಸಂಪ್ರೋಕ್ಷಣೆ ಕಾರ್ಯಕ್ರಮದ ಮುಕ್ತಾಯ.
(ಇನ್‌ಫೋ ವಾರ್ತೆ)
ಮುಖಪುಟ / ನೋಡು ಬಾ ನಮ್ಮೂರ