ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ಸಿ.ಆರ್‌.ಚಂದ್ರಶೇಖರ್‌ ವೃತ್ತಿ ಬದುಕಿನ ಬೆಳ್ಳಿಹಬ್ಬಕ್ಕೆ 2 ಕೃತಿಗಳ ತೋರಣ

By Staff
|
Google Oneindia Kannada News

ಬೆಂಗಳೂರು: ಮಾನಸಿಕ ಅಸ್ವಸ್ಥರ ಪಾಲಿಗೆ ಬೆಳ್ಳಿಚುಕ್ಕಿಯಾದ ಡಾ. ಸಿ.ಆರ್‌. ಚಂದ್ರಶೇಖರ್‌ ಅವರ ವೈದ್ಯಕೀಯ ಸೇವೆಗೀಗ ಬೆಳ್ಳಿಹಬ್ಬ. ಈ ಸಂದರ್ಭದಲ್ಲಿ ‘ಹಿತ-ಅಹಿತ’ ಎಂಬ ಅವರ ಕೃತಿ ಫೆಬ್ರವರಿ 24ರ ಭಾನುವಾರ ಬಿಡುಗಡೆಯಾಗಲಿದೆ.

ಕನ್ನಡ ವಿಶ್ವ ಕೋಶದ ಹಿರಿಯ ಸಂಪಾದಕ ಜಿ.ಟಿ. ನಾರಾಯಣ ರಾವ್‌ ಅವರು ನಗರದ ಯವನಿಕಾ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಮಾಡುವರು. ಖ್ಯಾತ ಮನಶ್ಯಾಸ್ತ್ರ ತಜ್ಞರಾದ ಡಾ. ಸಿ.ಆರ್‌. ಚಂದ್ರಶೇಖರ್‌, ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ವೈದ್ಯರು. ಮನಶ್ಯಾಸ್ತ್ರಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಅನೇಕ ಪುಸ್ತಕಗಳನ್ನು ಬರೆಯುವ ಮೂಲಕ ಸಾಹಿತ್ಯ ಲೋಕದಲ್ಲೂ ಹೆಸರು ಮಾಡಿದವರು.

‘ಹಿತ-ಅಹಿತ’ ಕೃತಿ ಬಿಡುಗಡೆಯ ಸಂದರ್ಭದಲ್ಲೇ ಚಂದ್ರಶೇಖರ್‌ ಅವರ ಕೃತಿಗಳನ್ನು ಪರಿಚಯಿಸುವ ‘ಕೃತಿ ಪರಿಚಯ’ ಎಂಬ ಇನ್ನೊಂದು ಪುಸ್ತಕವೂ ಬಿಡುಗಡೆಯಾಗಲಿದೆ. ಬಿಡುಗಡೆಯಾದ ಪುಸ್ತಕಗಳ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡುವವರು ಬಾಗಲಕೋಟೆಯ ಬಿವಿವಿ ಸಂಘದ ವೈದ್ಯಕೀಯ ನಿರ್ದೇಶಕ ಡಾ. ಎಸ್‌. ಜೆ. ನಾಗಲೋತಿಮಠ.

ಎರಡೂ ಪುಸ್ತಕಗಳ ಬೆಲೆ 150 ರೂಪಾಯಿ. ಆದರೆ ಪ್ರಕಟಣಾ ಪೂರ್ವ ಬೆಲೆಯಾಗಿ ಈ ಪುಸ್ತಕಗಳನ್ನು 100 ರೂಪಾಯಿಗೆ ಕೊಂಡು ಕೊಳ್ಳಬಹುದು. ಪುಸ್ತಕಗಳನ್ನು ಕೊಳ್ಳಲು ಸಂಪರ್ಕ ವಿಳಾಸ : ನವಕರ್ನಾಟಕ ಪ್ರಕಾಶನ, ಎಂಬೆಸಿ ಸೆಂಟರ್‌, ಕ್ರೆಸೆಂಟ್‌ ರೋಡ್‌, ಬೆಂಗಳೂರು -560 001

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X